ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಚೇಂಬರ್ ಆಫ್ ಕಾಮರ್ಸ್ ನಲ್ಲಿ ಸಂವಾದ-ಏನೇನು ಚರ್ಚೆ ನಡೆಯಿತು?

ಸುದ್ದಿಲೈವ್/ಶಿವಮೊಗ್ಗ

ಅನುಕೂಲ ಹಾಗೂ ಅವಶ್ಯಕತೆ ಇರುವ ಬದಲಾವಣೆಯನ್ನ ಕೈಗಾರಿಕೆಗೆ ಕೊಡುತ್ತೇನೆಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಶಪಥ ಮಾಡಿದ್ದಾರೆ.
ಅವರು ನಗರದ ಚೇಂಬರ್ ಆಫ್ ಕಾಮರ್ಸ್ ನ ಸಭಾಂಗಣದಲ್ಲಿ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬೆಂಗಳೂರು ಉಳಿಯಬೇಕು ಶಿವಮೊಗ್ಗಬೆಳೆಯಬೇಕು ಎಂಬ ಘೋಷಣೆಯಂತೆ ಕೆಲಸ ಮಾಡಬೇಕು. ಶಿವಮೊಗ್ಗ ಬೆಳೆದಿದ್ದರೂ ಕೈಗಾರಿಕೋದ್ಯವರು ಬ್ಯುಸಿ ಇಲ್ಲದಿರುವುದು ಕಾಣುತ್ತದೆ
ಕೈಗಾರಿಕೆ ಬೆಳೆದು ಉದ್ಯೋಗ ಸೃಷ್ಠಿಸುವ ಮಾತು ಭಾಷಣಕ್ಕೆ ಮಾತ್ರ ಸೀಮಿತವಾಗಬಾರದು ಕೆಲಸ ಆಗಬೇಕು. ಇನ್ಫಾಸ್ಡ್ರಕ್ಚರ್ ಬೇಕಿದೆ. ಎನ್ ಹೆಚ್ ಕುರಿತು ಸಭೆ ನಡೆಯಲಿದೆ. ಯಾವುದೇ ಇಂಡಸ್ಟ್ರಿಯಲ್ ಕ್ಷೇತ್ರ ಬೆಳೆಯಲು ಏರ್ ಪೋರ್ಟ್ ಇದೆಯಾ, ರಸ್ತೆ ಸಂಪರ್ಕವಿದೆಯಾ ಎಂಬ ಚರ್ಚೆಗಳು ಮುನ್ನೆಲೆಗೆ ಬರುತ್ತದೆ ಎಂದರು.
ಎರಡು ಮೂರು ವಿಮಾನ ಇದ್ದರೆ ಸಾಕಾಗದು ನೈಟ್ ಲ್ಯಾಂಡಿಂಗ್ ಅವಕಾಶ ಕಲ್ಪಿಸಬೇಕು. ಕಮರ್ಷಿಯಲ್ ಆಗಿ ಬೆಳೆಯಬೇಕು. ಅಧಿಕಾರಿಗಳು ಕೈಗಾರಿಕೆ ಬೆಳೆವಣಿಗೆಗೆ ಅನುಕೂಲ ಮಾಡಿಕೊಡಬೇಕು. ಕೈಯಲ್ಲಿ ಆಗುವ ಬೇಡಿಕೆ ಇಡಿ ಕೆಲಸ ಮಾಡುವೆ. ವಿದ್ಯುತ್ ಕೊರತೆ ಎದುರಿಸಲಾಗುತ್ತದೆ. ವಿದ್ಯುತ್ ಕೊರತೆ ಇಲ್ಲ ಆದರೂ ರೈತರಿಗೆ ಮೊದಲ ಆಧ್ಯತೆ ನೀಡಲಾಗುತ್ತದೆ ಎಂದರು.
ರೈತರಿಗೆ ವಿದ್ಯುತ್ ಕೊಡದಿದ್ದರೆ ಉತ್ಪಾದನೆ ಕೊರತೆ ಎದುರಿಸಬೇಕಾಗುತ್ತದೆ. ವೇದಿಕೆ ಮೇಲಿದ್ದ ಜಿಲ್ಲಾಧಿಕಾರಿಗಳಿಗೆ ಸೂಕ್ಷ್ಮವಾಗಿ ಹೇಳಿದ ಮಧು ಬಂಗಾರಪ್ಪ ರೈತರಿಗೆ ತೊಂದರೆ ಕೊಡಬಾರದು. ನಾಳೆ ಅರಣ್ಯ ಇಲಾಖೆಯ ಜೊತೆ ದೊಡ್ಡ ಸಭೆನೇ ನಡೆಯಲಿದೆ.ಅರಣ್ಯ ಇಲಾಖೆ ಬೆಂಗಳೂರಿನ ನಿಯಮವನ್ನ ಮಲೆನಾಡು ಭಾಗದಲ್ಲಿ ಹೇರಿದರೆ ಅದು ಹೇಗೆ ಎಂದು ಪ್ರಶ್ನಿಸಿದರು.
ರೈತರು ದುಡಿದರೆ ಮಾತ್ರ ಜಿಲ್ಲಾಧಿಕಾರಿಗಳು ಹೊಟ್ಟೆ ತುಂಬುತ್ತದೆ. ಹಾಗಾಗಿ ರೈತರ ಪರವಾಗಿ ನಿಲ್ಲುವಂತೆ ಮನವಿ ಮಾಡಿಕೊಂಡರು.
ಸಂವಾದದಲ್ಲಿ ರಮೇಶ್ ಮಾತು
ರಮೇಶ್ ಮಾಚೇನಹಳ್ಳಿಯಕೈಗಾರಿಕೆಯ ಅಧ್ಯಕ್ಷರೊಂದಿಗೆ ಸಂವಾದ ಆರಂಭಗೊಂಡಿತು. 750 ಎಕರೆ ಭೂಮಿಗೆ ಟೌನ್ ಶಿಪ್ ಗೆ ಅರ್ಜಿ ಹಾಕಿತ್ತು. ಕೊಟ್ಟಿಲ್ಲ. 1250 ಎಕರೆ ಜಾಗ ಇದ್ದರೆ ಟೌನ್ ಶಿಪ್ ಎಂದು ಹೊಸ ಕಾನೂನು ತರಲಾಗಿದೆ. ಅಂತಹ ಎಕರೆ ಶಿವಮೊಗ್ಗದಲ್ಲಿ ಇಲ್ಲ ಎಂದರು. ಇದಕ್ಕೆ ಉತ್ತರಿಸಿದ ಮಧುಬಂಗಾರಪ್ಪ ಸಚಿವ ಎಂಬಿ ಪಾಟೀಲ್ ಜೊತೆ ಮಾತನಾಡುವೆ. ಹೀಗಾದರೆ ಇದು ಅನ್ಯಾಯವೂ ಹೌದು ಎಂದು ಸಚಿವರು ಭರವಸೆ ನೀಡಿದರು.
ಟ್ರಕ್ ಟರ್ಮಿನಲ್ ಗೆ ಬೇಡಿಕೆ
ಪ್ರದೀಪ್ ಪಿಲಿ ಮಾತನಾಡಿ, ಟ್ರಕ್ ಟರ್ಮಿನಲ್ ಬೇಕಿದೆ. ರಸ್ತೆಯ ಮೇಲೆ ಬಿಟ್ಟರೆ ಪೊಲೀಸರು ಎಳೆದುಕೊಂಡು ಹೋಗುತ್ತಾರೆ ಎಂದು ಹೇಳಿದರು. ಇದರ ಬಗ್ಗೆ ಅಪ್ಡೇಟ್ ಮಾಡುವೆ ಎಂದು ಭರವಸೆ ನೀಡಿದರು. ದೇವರಾಜ್ ಅರಸ್ ಟ್ರಕ್ ಟರ್ಮಿನಲ್ ಇದೆ ಎಂಬ ಮಾಹಿತಿ ಜಿಲ್ಲಾಧಿಕಾರಿಗಳು ಹೇಳಿದ್ದಾರೆ ಅದರ ಬಗ್ಗೆ ಗಮನ ಹರಿಸುವೆ ಎಂದರು.
ಪುಟ್ ಪಾತ್ ವ್ಯಾಪಾರಸ್ಥರ ನಿಯಂತ್ರಣ ಅಗತ್ಯ ಹೊಟ್ಟೆ ಮೇಲೆ ಹೊಡೆಯಲಾರೆ
ಚೇಂಬರ್ ಕಾಮರ್ಸ್ ನ ಮಾಜಿ ಉಪಾಧ್ಯಕ್ಷರು ಉದಯ ಕುಮಾರ್ ಮಾತನಾಡಿ ರೈಲ್ವೆ ಕೋಚಿಂಗ್ ಕೆಲಸ ವೇಗಹೆಚ್ಚಿಸುವಂತೆ ಕೋರಿದರು. ಈ ಬಗ್ಗೆನೂ ಸಚಿವರು ಭರವಸೆ ನೀಡಿದ್ದಾರೆ. ಟ್ರೇಡ್ ಲೈಸೆನ್ಸ ಪ್ರಗತಿ ನಿಧಾನವಾಗಿದೆ ಎಂದು ಹೇಳಿದರು. ಬಾಡಿಯಲ್ಲಿ ಬ್ಲಡ್ಡಿರಬೇಕು. ಬ್ಯಾಂಕ್ ನಲ್ಲಿ ಇರಬಾರದು, ದುಡ್ಡು ಬ್ಯಾಂಕ್ ನಲ್ಲಿ ಇರಬಾರದು ಮಾರ್ಕೆಟ್ ನಲ್ಲಿರಬೇಕು ಎಂದು ಹೇಳುವ ಮೂಲಕ ಪಾಲಿಕೆ ಆಯುಕ್ತರನ್ನ ತಿವಿದರು.
ಬೀದಿ ಬದಿಯ ವ್ಯಾಪಾರಸ್ಥರ ಸಂಖ್ಯೆ ಹೆಚ್ಚಾಗಿದೆ ಇವರನ್ನ ನಿಯಂತ್ರಿಸುವಂತೆ ಕೈಗಾರಿಕೋದ್ಯಮಿ ಉದಯ ಕುಮಾರ್ ತಿಳಿಸಿದರು. ಆದರೆ ಸಚಿವರು ಅವರನ್ನ ನಿಯಂತ್ರಿಸೋಣ ಆದರೆ ಈಗ ವ್ಯಾಪಾರ ಮಾಡುವವರ ಹೊಟ್ಟೆಯಮೇಲೆ ಹೊಡೆಯುವುದು ಬೇಡ. ನಾನು ಅವರನ್ನ ಪುಟ್ ಪಾತ್ ಮೇಲೆ ವ್ಯಾಪಾರ ಮಾಡಬೇಡಿ ಎಂದರೆ ವಿಪಕ್ಷದವರ ಬಳಿ ಹೋಗ್ತಾರೆ. ಅವರು ನಮಗೆ ಬೈಕೊಂಡು ಪ್ರತಿಭಟನೆ ಮಾಡ್ತಾರೆ. ಪ್ರತಿಭಟನೆಗೆ ಹೆದರೊಲ್ಕ. ಆದರೆ ಬೀದಿ ಬದಿಯ ವ್ಯಾಪಾರಸ್ತರನ ಹೊಟ್ಟೆಯ ಮೇಲೆ ಹೊಡೆಯುವುದು ಬೇಡ ಹಾಗಾಗಿ ಸಮಯಕೊಡಿ ನಿಯಂತ್ರಿಸುವ ಎಂದರು.
ಆಡಿಟರ್ ಮಧುಸುಧನ್ ಐತಾಳ್ ಮಾತನಾಡಿ, ರಾಜ್ಯ ಜಿಎಸ್ಟಿ ನಿಯಂತ್ರಿಸಬಹುದು. 2017-19 ಜಿಎಸ್ ಟಿ ಆರಂಭವಾಗಿದ್ದು ಆ ಸಮಯದಲ್ಲಿ ಎಷ್ಟು ಕಟ್ಟಬೇಕು ಎಂಬ ಮಾಹಿತಿ ಇರಲಿಲ್ಲ. ಆದರೂ ಈಗ ಅದು ಮನೆಗೆ ನೋಟೀಸ್ ಬರ್ತಾ ಇದೆ ಎಂದರು. ಮನವಿ ಕೊಡಿ ಅದನ್ನ ಸೆಂಟ್ರಲ್ ಗೆ ಕಳುಹಿಸುವೆ ಎಂದರು.
ಎನ್ ಕ್ರ್ರೋಚ್ ಮೆಂಟ್ ಗೆ ಬ್ರೇಕ್
ವಿಕಾಸರವರು ಮಾತನಾಡಿ ಎಎ ವೃತ್ತದಲ್ಲಿ ಅಂಡರ್ ಪಾಸ್ ವೇಸ್ಟ್ ಆಗುತ್ತಿದೆ. ಬೀದಿ ಬದಿ ವ್ಯಾಪಾರಸ್ಥರನ್ನ ಅಲ್ಲಿ ಕಳುಹಿಸಿದರೆ ಉಪಯೋಗ ಆಗಲಿದೆ. ಕೋಟ್ಯಾಂತರ ರೂ ವೆಚ್ಚವಾಗಿದೆ. ಬೀದಿ ಬದಿ ವ್ಯಾಪಾರಸ್ಥರು ಎನ್ ಕ್ರೋಚ್ ಮೆಂಟ್ ಆಗ್ತಾ ಇದೆ ನಿಯಂತ್ರಸಬೇಕು ಪ್ಲಾಸ್ಟಿಕ್ ಸಹ ಹೆಚ್ಚು ಬಳಕೆ ಆಗುತ್ತಿದೆ ಎಂದರು. ಸಚಿವರು ಪಾಲಿಕೆ ಆಯುಕ್ತರಿಗೆ ಸೂಕ್ತ ಸೂಚನೆ ನೀಡಿ ಹಳೆಯ ಎನ್ ಕ್ರೋಚ್ ಮೆಂಟ್ ಬಿಟ್ಟು ಹೊಸ ಎಂಕ್ರೋಚ್ ಮೆಂಟ್ ದೂರವಿಡುವಂತೆ ಸೂಚಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ, ಪಾಲಿಕೆ ಆಯುಕ್ತ ಮಾಯಣ್ಣಗೌಡ, ಚೇಂಬರ್ ಆಫ್ ಕಾಮರ್ಸ್ ನ ಅಧ್ಯಕ್ಷ ಗೋಪಿನಾಥ್ ಮೊದಲಾದವರು ವೇದಿಕೆ ಮೇಲೆ ಉಪಸ್ಥಿತರಿದ್ದರು.
ಇದನ್ನೂ ಓದಿ-https://suddilive.in/archives/2395
