ಸ್ಥಳೀಯ ಸುದ್ದಿಗಳು

ಕಾಂಗ್ರೆಸ್ ನವರು ಕೇವಲ ಜಾಹೀರಾತಿಗೆ ಸೀಮಿತ-ವಿಜೇಂದ್ರ

ಸುದ್ದಿಲೈವ್/ಶಿವಮೊಗ್ಗ

ಇಂದು ಮತ್ತು ನಾಳೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಪ್ರವಾಸ ಮಾಡ್ತಿದ್ದೇನೆ. ರಾಜ್ಯದಲ್ಲಿ ಬಿಜೆಪಿ ‌ಪರವಾದ ಅಲೆ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜೇಂದ್ರ ತಿಳಿಸಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು,  ದೇಶದ ಅಭಿವೃದ್ಧಿ, ಭವಿಷ್ಯ ಅಂದ್ರೆ ಮೋದಿಯಿಂದ ಮಾತ್ರ ಸಾಧ್ಯ. ಕಾಂಗ್ರೆಸ್ ನವರು ಬೊಬ್ಬೆ ಹೊಡೆಯುತ್ತಿದ್ದಾರೆ ಅವರಿಗೆ ಕವಡೆ ಕಾಸಿನ‌ ಕಿಮ್ಮತ್ತಿಲ್ಲ.

ಕಾಂಗ್ರೆಸ್ ಕೇವಲ ಜಾಹಿರಾತಿಗೆ ಸೀಮಿತವಾಗಿದೆ. ಕಾಂಗ್ರೆಸ್ ಗೆ ನಿರಾಸೆ ಕಾದಿದೆ. ಕಳೆದ 65 ವರ್ಷದಲ್ಲಿ ದೇಶಕ್ಕೆ ಕಾಂಗ್ರೆಸ್ ಕೊಡುಗೆ ಏನು ಎಂಬುದನ್ನು ಚೊಂಬು ಮೂಲಕ ತೋರಿಸುತ್ತಿದ್ದಾರೆ. ಕಾಂಗ್ರೆಸ್ ಗೆ ರಾಜ್ಯದ ಮತದಾರರು ಸೊಪ್ಪು ಹಾಕಲ್ಲ.ಇದು ಜಿ.ಪಂ ಗ್ರಾ.ಪಂ ಚುನಾವಣೆಯಲ್ಲ, ದೇಶದ ಚುನಾವಣೆ ಎಂದರು.

ನೇಹಾ ಹತ್ಯೆ ಪ್ರಕರ ಆಕಸ್ಮಿಕ ಬಿಜೆಪಿ ರಾಜಕೀಯ ಬೇಳೆ ಬೇಯಿಸಿಕೊಂಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ ಎಂಬ ಮಾಧ್ಯಮ ಪ್ರಶ್ನೆಗೆ ಉತ್ತರಿಸಿದ ವಿಜೇಂದ್ರ ಕಾಂಗ್ರೆಸ್ ಸರ್ಕಾರದ ನಡುವಳಿಕೆ ಏನು ಅಂತ ಹೊರಬಿದ್ದಿದೆ. ಘಟನೆಗಳು ಆಕಸ್ಮಿಕವಿರಬಹುದು ಆದರೆ ತನಿಖೆಗೆ ಆದೇಶಿಸದೆ ಇದು ವೈಯುಕ್ತಿಕ ಘಟನೆ ಎಂಬ ಸಿಎಂ ಹೇಳಿಕೆ ನಿರ್ಲಕ್ಷದಿಂದ ಕೂಡಿದೆ ಎಂದರು.

ಬರ ಪರಿಹಾರದ ವಿಚರದಲ್ಲಿ ಕೇಂದ್ರ ತಾರತಮ್ಯ ಮಾಡುತ್ತಿದೆ ಎಂಬ ಆರೋಪಕ್ಕೂ ಉತ್ತರಿಸಿದ ರಾಜ್ಯಧ್ಯಾಕ್ಷ ವಿಜೇಂದ್ರ ಬಿಜೆಪಿ ಆಡಳಿತದಲ್ಲಿ ಎನ್ ಡಿ ಆರ್ ಎಫ್ ಹಣವನ್ನ ಒಂದು ಲಕ್ಷದಿಂದ 4 ಲಕ್ಷಕ್ಕೆ ಏರಿಸಿದ್ವಿ. ಯಡಿಯೂರಪ್ಪ ಸರಕಾರದಲ್ಲಿ ಸಂಭವಿಸಿದ ಅತಿವೃಷ್ಠಿಯಲ್ಲಿ ರಾಜ್ಯ ಸರ್ಕಾರವೇ ಕೈಗೊಂಡಿತ್ತು. ಆದರೆ ಕಾಂಗ್ರೆಸ್ ಏನೂ ಕ್ರಮಕೈಗೊಳ್ಳದೆ ಕೇಂದ್ರದ ಕಡೆ ಮುಖಮಾಡಿರುವುದರಿಂದ ಸಮಸ್ಯೆಯಾಗಿದೆ. ಎಸ್ ಸಿ ಪಿಟಿ ಹಣವನ್ನೂ ಬೇರೆಡೆ ಬಳಸಲಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಹಣವಿಲ್ಲ ಎಂದು ಆರೋಪಿಸಿದರು.

ಈ ಮಧ್ಯೆ ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ಹಣ ಕೊಡುವುದಾಗಿ ಹೇಳಿ 2000 ಸಾವಿರ ಕೋಟಿ ಕೊಟ್ಟಿದೆ. ಅಲ್ಪಸಂಖ್ಯಾತರಿಗೆ ಹಣ ಕೊಡುವ ಸಿಎಂ ಬರದ ವಿಚಾರದಲ್ಲಿ ರಾಜಕಾರಣ ಮಾಡುತ್ತಿದ್ದಾರೆ ಎಂದು ದೂರಿದರು.

ಬಿಜೆಪಿ ಅಲ್ಪಸಂಖ್ಯಾತರ ವಿರುದ್ಧವಿದೆ ಎಂದ ಕಾಂಗ್ರೆಸ್ ಗೆ ತಿರುಗೇಟು ನೀಡಿದ ಅವರು ಹಜ್ ಯಾತ್ರೆಗೆ ಹಣಕೊಡುವಂತೆ ಮಾಡಿರುವುದು ಯಡಿಯೂರಪ್ಪನವರ ಸರ್ಕಾರ. ಬಿಜೆಪಿ ಬಗ್ಗೆ ಬೆರಳು ಮಾಡದೆ ಅಲ್ಪಸಂಖ್ಯಾತರ ಕಲ್ಯಾಣ ಏನು ಮಾಡುದ್ರಿ ಎಂಬುದನ್ನ ಕಾಂಗ್ರೆಸ್ ವಿವರಿಸಲಿ ಎಂದು ದೂರಿದರು.

ರಾಜ್ಯದ 28 ಕ್ಷೇತ್ರದಲ್ಲಿ ಮೈತ್ರಿ ಪಕ್ಷ ಗೆಲ್ಲುತ್ತದೆ. ಮತ ಎಣಿಕೆ ದಿನ ಮತದಾರರ ಭಾವನೆ ಏನು ಅಂತಾ ಗೊತ್ತಾಗುತ್ತದೆ. ಪ್ರಿಯಾಂಕ ಗಾಂಧಿ, ರಾಹುಲ್ ಗಾಂಧಿ ರಾಜ್ಯಕ್ಕೆ ಹೆಚ್ಚೆಚ್ಚು ಬರಬೇಕು. ಇಲ್ಲದಿದ್ದರೆ ರಾಜ್ಯದ ಜನ ಮರೆತು ಬಿಡ್ತಾರೆ ಎಂದರು.

ಇದನ್ನೂ ಓದಿ-https://suddilive.in/archives/13538

Related Articles

Leave a Reply

Your email address will not be published. Required fields are marked *

Back to top button