ಸ್ಥಳೀಯ ಸುದ್ದಿಗಳು

ಬಿಸಿಲನ್ನೂ ಲೆಕ್ಕಿಸದೆ ಈಶ್ವರಪ್ಪನವರ ನಾಮಪತ್ರ ಸಲ್ಲಿಕೆಗೆ ಸಜ್ಜುಗೊಂಡ ಕಾರ್ಯಕರ್ತರು

ಸುದ್ದಿಲೈವ್/ಶಿವಮೊಗ್ಗ

ಮಾಜಿ ಡಿಸಿಎಂ ಹಾಗೂ ಬಿಜೆಪಿಯ ಬಂಡಾಯವಾಗಿ ಸ್ಪರ್ಧಿಸುತ್ತಿರುವ ಈಶ್ವರಪ್ಪನವರ ನಾಮಪತ್ರ ಸಲ್ಲಿಕೆಗೆ ವೇದಿಕೆ ಸಜ್ಜುಗೊಂಡಿದೆ. ಮಹಿಳೆಯರು ಗುಂಪು ಗುಂಪಾಗಿ ಮೆರವಣಿಗೆಗೆ ಆಗಮಿಸುತ್ತಿದ್ದು  ಬಿಸಿಲಿನ ಝಳವನ್ನೂ ಲೆಕ್ಕಿಸದೆ ಅಭಿಅನಿಗಳು ರಾಮಣ್ಣ ಶ್ರೇಷ್ಠಿಪಾರ್ಕ್ ಬಳಿ ಸೇರಿಕೊಳ್ಳುತ್ತಿದ್ದಾರೆ.

ರಾಮ, ಹನುಮ ಮತ್ತು ಕಪಿ ಸೇನೆಯ ವೇಷಧಾರಿಗಳು, ಹಾಗೂ ವಿವಿಧ ವೇಷಧಾರಿಗಳು, ವಾದ್ಯಗಳೊಂದಿಗೆ ತೆರದ ವಾಹನದಲ್ಲಿ ಈಶ್ವರಪ್ಪನವರು ಮೆರವಣಿಗೆಯಲ್ಲಿ ತೆರಳಿದ್ದಾರೆ. ರಾಮನ ವೇಷಧಾರಿಯೊಂದಿಗೆ ರಾಷ್ಟ್ರಭಕ್ತರ ಬಳಗದ ಕಾರ್ಯಕರ್ತರು ಸೆಲ್ಫಿ ತೆಗೆದುಕೊಳ್ಳುವ ದೃಶ್ಯ ಸಹ ಲಭ್ಯವಾಗಿದೆ.

10 ಗಂಟೆಯಿಂದಲೇ ರಾಷ್ಟ್ರಭಕ್ತರ ಬಳಗದ ವತಿಯಿಂದ ಈಶ್ವರಪ್ಪನವರು ನಾಮಪತ್ರ ಸಲ್ಲಿಕೆ ಕಾರ್ಯಕ್ರಮಕ್ಕೆ ಜನ ಸೇರಿಕೊಂಡಿದ್ದಾರೆ.. ಅವರು ತೆರಳಿರುವ ವಾಹನದಲ್ಲಿ ಅರ್ಜುನನ ಪಾಂಚಜನ್ಯ ಮೊಳಗಿಸುವ, ಮೋದಿ ಹಾಗೂ ಈಶ್ವರಪ್ಪನವರ ಫೊಟೊದ ಫ್ಲೆಕ್ಸ್ ನ್ನ ಅಳವಡಿಸಲಾಗಿದೆ.

ಕೇಸರಿ ಧ್ವಜವನ್ನ ಅಭಿಮಾನಿಗಳು ಹಿಡಿದಿರುವ ದೃಶ್ಯಗಳು, ಮೋದಿ ಮತ್ತು ಈಶ್ವರಪ್ಪನವರು ಇರುವ ಬಾವುಟಗಳು ರಾರಾಜಿಸುತ್ತಿವೆ. ಈಶ್ವರಪ್ಪನವರು ರಾಮಣ್ಣ ಶ್ರೇಷ್ಠಿ ಪಾರ್ಕ್ ಗೆ ಆಗಮಿಸಿ ಗಣಪತಿ ದೇವರಿಗೆ ಪೂಜೆ ಸಲ್ಲಿಸಿ ಮೆರವಣಗೆಯಲ್ಲಿ ತೆರಳಿದ್ದಾರೆ.

ಮೆರವಣಿಗೆ ಉದ್ದಕ್ಕೂ ಈಶ್ವರಪ್ಪ ಈಶ್ವರಪ್ಪ ಎಂಬ ಘೋಷಣೆ ಮೊಗಳಗಿಸಿದ್ದಾರೆ.  ಗೋಪಿ ವೃತ್ತದ ಬಳಿ ಬಹಿರಂಗ ಸಭೆ ನಡೆಸಿ ನಂತರ ಡಿಸಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಲಿದ್ದಾರೆ. 12.28 ಕ್ಕೆ ನಾಮಪತ್ರ ಸಲ್ಲಿಸುವ ನಿರೀಕ್ಷೆ ಇದೆ.

ಇದನ್ನೂ ಓದಿ-https://suddilive.in/archives/12587

Related Articles

Leave a Reply

Your email address will not be published. Required fields are marked *

Back to top button