ಸ್ಥಳೀಯ ಸುದ್ದಿಗಳು

ಹುಂಚ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಬೀಗ ಒಡೆದು ದಾಖಲೆ ಪರಿಶೀಲನೆ

ಸುದ್ದಿಲೈವ್/ಶಿವಮೊಗ್ಗ

ಹುಂಚ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಎರಡು ತಿಂಗಳಿಂದ ನಾಪತ್ತೆ ಹಿನ್ನೆಲೆಯಲ್ಲಿ ಪೊಲೀಸರ ಸಮ್ಮುಖದಲ್ಲಿ  ಅಧಿಕಾರಿಗಳು ಲಾಕರ್ ಗಳ ಬೀಗ ಒಡೆದು ದಾಖಲೆಗಳನ್ನ ಹೊರತೆಗೆದಿದ್ದಾರೆ.

ಹೊಸನಗರ ತಾಲೂಕಿನ ಹುಂಚ ಗ್ರಾಮದ ಸೊಸೈಟಿ ಇದಾಗಿದೆ.  ಸಂಘದ ಕಾರ್ಯದರ್ಶಿ ಸಂತೋಷ್ ಕೃಷ್ಣನಾಯ್ಕ್.ಕಳೆದ ಎರಡು ತಿಂಗಳಿಂದ ನಾಪತ್ತೆಯಾಗಿರುವುದಾಗಿ ಮೂಲಗಳಿಂದ ತಿಳಿದು ಬಂದಿದೆ.

ಈ ಬಗ್ಗೆ ಮೇಲಾಧಿಕಾರಿಗಳಿಗೆ ಸೊಸೈಟಿಯ ಆಡಳುತ ಮಂಡಳಿಯವರು ದೂರು ಸಲ್ಲಿಸಿದ್ದರು. ನಾಪತ್ತೆಯ ಹಿನ್ಬಲೆಯಲ್ಲಿ ಮೇಲಧಿಕಾರಿಗಳು ನೋಟೀಸ್ ಜಾರಿ ಮಾಡಿದ್ದರು. ನೋಟೀಸ್ ಜಾರಿ ಮಾಡಿದರು ಯಾವುದೇ ಉತ್ತರ ಇರಲಿಲ್ಲ. ಈ ಹಿನ್ಬಲೆಯಲ್ಲಿ  ಸಂಘದ ನಿರ್ದೇಶಕರು, ಪೊಲೀಸರ ಸಮ್ಮುಖದಲ್ಲಿ ಲಾಕರ್ ಗಳ ಬೀಗವನ್ನ ಒಡೆಯಲಾಗಿದೆ.

ಸೊಸೈಟಿಯಲ್ಲಿ ಲಕ್ಷಾಂತರ ರೂ. ಅವ್ಯವಹಾರ ನಡೆದಿರುವ ಶಂಕೆ ಹೊರಬಿದ್ದಿತ್ತು. ಹೊಸನಗರ ತಾಲೂಕು ಸಹಕಾರಿ ಕ್ಷೇತ್ರಾಧಿಕಾರಿ ವೆಂಕಟಾಚಲಪತಿ ಸಮ್ಮುಖದಲ್ಲಿ ಲಾಕರ್ ತೆಗೆಯಲಾಗಿದೆ. ಲಾಕರ್ ಒಡೆದು ದಾಖಲೆ ಪತ್ರಗಳನ್ನು ಅಧಿಕಾರಿಗಳು ಪರಿಶೀಲಿಸಿದ್ದಾರೆ.

ಬಿಗ ಒಡೆದಿರುವ ಬಗ್ಗೆ ಮಾಧ್ಯಮಗಳಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಯದುಕುಮಾರ್  ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ-https://suddilive.in/archives/4419

Related Articles

Leave a Reply

Your email address will not be published. Required fields are marked *

Back to top button