ಶಾಹೀ ಗಾರ್ಮೆಂಟ್ಸ್ ನ ಎರಡು ಸಬ್ ಮರ್ಸಿಬಲ್ ಮೋಟಾರು ಕಳುವು

ಸುದ್ದಿಲೈವ್/ಶಿವಮೊಗ್ಗ

ಶಾಹೀ ಗಾರ್ಮೆಂಟ್ಸ್ ನ ನೀಲಗಿರಿ ತೋಪಿನಲ್ಲಿದ್ದ ಎರಡು ಚಿಕ್ಕಕೆರೆಗಳ ನೀರು ಖಾಲಿ ಮಾಡಲು ಅಳವಡಿಸಿದ್ದ ಸಬ್ ಮರ್ಸಿಬಲ್ ಮೋಟಾರ್ ಗಳನ್ನ ಕಳವು ಮಾಡಿರುವ ಘಟನೆ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ದೂರಾಗಿ ದಾಖಲಾಗಿದೆ.
ಇತ್ತೀಚೆಗೆ ಶಾಹೀ ಗಾರ್ಮೆಂಟ್ಸ್ ವಿರುದ್ಧ ಸ್ಥಳೀಯರು ಮತ್ತು ರೈತ ಸಂಘಟನೆ ಪ್ರತಿಭಟನೆ ನಡೆಸಿ ಶಾಹೀ ಗಾರ್ಮೆಂಟ್ಸ್ ಕಾನೂನು ಬಾಹಿರವಾಗಿ ವರ್ತಿಸುತ್ತಿದೆ. ನೆಲ, ಜಲ ಮತ್ತು ಗಾಳಿಯನ್ನ ಕಲೂಷಿತಗೊಳಿಸುತ್ತಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಲಾಗಿತ್ತು.
ಇದರ ಪರಿಣಾಮವಾಗಿ ಜಿಲ್ಲಾಡಳಿತವೂ ಸಹ ತನ್ನ ಸುತ್ತಮುತ್ತಲಿನ ಪರಿಸರ ಸ್ವಚ್ಛಗೊಳಿಸುವಂತೆ ಸೂಚಿಸಿದ್ದರು. ಈ ಹಿನ್ನಲೆಯಲ್ಲಿ ನೀಲಗಿರಿ ತೋಪಿನಲ್ಲಿರುವ ಎರಡು ಚಿಕ್ಕ ಕೆರೆಯ ನೀರನ್ನ ಖಾಲಿ ಮಾಡಲು ಮುಂದಾದ ಸಂಸ್ಥೆ, ನೀರನ್ನು ತೆಗೆಯಲು ಕಂಪನಿಯಿಂದ ಎರಡು ಸಬ್ ಮಸರ್‌ಂಬಲ್ ಇದೇ ವರ್ಷ ಅಕ್ಟೋಬರ್ 4 ಪಂಪನ್ನು ಪೈಪ್, ವಿದ್ಯುತ್ ವೈರನ್ನು ಅಳವಡಿಸಿ ನೀರನ್ನು ಖಾಲಿ ಮಾಡಲಾಗುತ್ತಿತ್ತು.
ಅ.13 ರಂದು ಕೆರೆಯ ನೀರನ್ನು ಖಾಲಿ ಮಾಡುತ್ತಿದ್ದಾಗ ರಾತ್ರಿ ಸುಮಾರು 9-20 ಗಂಟೆ ಸಮಯದಲ್ಲಿ ಇದ್ದುಕಿದಂತೆ ನೀರು ಬರುತ್ತಿರುವುದು ನಿಂತು ಹೋಗಿದ್ದು ತಿಳಿದು ಬಂದಿದ್ದು, ರಾತ್ರಿ ಕರ್ತವ್ಯದಲ್ಲಿದ್ದ ಸುಜಯ್ ಎಂಬುವವರು ಮಂಜುನಾಥ್ ಕೆ.ಪಿ.ಡಿ. ಈ.ಟಿ.ಪಿ. ಇನ್ ಚಾರ್ಚ್ ಅವರಿಗೆ ವಿಚಾರ ತಿಳಿಸಿರುತ್ತಾರೆ. ರಾತ್ರಿ ಆದ ಕಾರಣ ಬೆಳಿಗೆ ಅಂದರೆ ದಿನಾಂಕ: 14/10/2023 ರಂದು ಬೆಳಿಗ್ಗೆ 6-30 ಗಂಟೆಗೆ ಸ್ಥಳ ಪರಿಶೀಲನೆ ಮಾಡಲು ಹೋದಾಗ ಎರಡು ಸಬ್ ಮರ್ಸಿಬಲ್ ಕಂಪನಿ ಪೈಪುಗಳನ್ನು ಪರಿಶೀಲನೆ ಮಾಡಿದಾಗ ಖಾಲಿ ಪೈಪು ಕಂಡು ಬಂದಿದೆ.
ಎರಡು ಸಬ್ ಮರ್ಸಿಬಲ್ ಪಂಪು ಕಂಡು ಬಂದಿಲ್ಲ. ಎರಡು ಸಬ್ ಮರ್ಸಿಬಲ್ ಪಂಪುಗಳನ್ನು ಕಳ್ಳರು ಕದ್ದು ಹೊಗಿರುತ್ತಾರೆಂದು ಅಂದಾಜಿಸಲಾಗಿದೆ, ಕಳ್ಳತನವಾದ ಸಬ್ ಮರ್ಸಿಬಲ್ ಮೋಟರ್ ಲುಬಿ ಕಂಪನಿಯ ಮಾಡಲ್ ನಂ: LGO -2335 & LGO -2339 ಒಂದರ ಬೆಲೆ 25,000/- ರೂ. ಆಗಿರುತ್ತವೆ. ಒಟ್ಟು 50,000/- ಸಾವಿರ ರೂಪಾಯಿ ಆಗಿರುತ್ತದೆ ಎಂದು ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ಉಲ್ಲೇಲಿಸಲಾಗಿದೆ.
ಇದನ್ನೂ ಓದಿ-https://suddilive.in/archives/1461
