ರಾಜಕೀಯ ಸುದ್ದಿಗಳು

ಬಿಜೆಪಿದು ಭಾವನೆಗಳ ಮೇಲಿನ ಚುನಾವಣೆ, ನಮ್ಮದು ಬದುಕಿನ ಚುನಾವಣೆ-ಡಿಕೆಶಿ

ಸುದ್ದಿಲೈವ್/ಶಿವಮೊಗ್ಗ

ಬಿಜೆಪಿ ಭಾವನೆ ಮೇಲೆ ಓಟ್ ಕೇಳ್ತಾ ಇದ್ದಾರೆ, ನಾವು ಜನರ ಬದುಕಿನ ಮೇಲೆ ಮತ ಕೇಳ್ತಾ ಇದ್ದೇವೆ ಎಂದು ಡಿಸಿಎಂ ಶಿವಕುಮಾರ್ ತಿಳುಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜನರ ಬದುಕು ಕಟ್ಟಿಕೊಳ್ಳಲು ಅಸ್ಥಿತ್ವಕ್ಕೆ ಬಂದಿದ್ದು ಕಾಂಗ್ರಸ್ ಸರ್ಕಾರ. ಬಿಜೆಪಿಗೆ ಮತ‌ಕೇಳಲು ನೈತಿಕತೆ ಇಲ್ಲ. ನಮ್ಮ ಗ್ಯಾರೆಂಟಿಗಳನ್ನ ಜನ ಅನುಭವಿಸುತ್ತಿದ್ದಾರೆ. ಶಕ್ತಿ ಯೋಜನೆ, ಗೃಹಲಕ್ಷ್ಮೀ ಯೋಜನೆ, ಯುವನಿಧಿಯನ್ನ ಕಣ್ಣಾಣೆ ನೋಡಿದ್ದಾರೆ. ಅಂತಹ ಯೋಜನೆಯನ್ನ ಬಿಜೆಪಿಯವರು ಮಾಡಿದ್ದಾರಾ? ಮನಸ್ಸುಗಳನ್ನ ಒಡೆಯುವುದು ಬಿಟ್ಟರೆ ಬಿಜೆಪಿ ಕೊಡುಗೆ ಏನು ಎಂದು ಪ್ರಶ್ನಿಸಿದರು.

ಕುಮಾರ ಸ್ಬಾಮಿ ವಿರುದ್ಧ ವಾಗ್ದಾಳಿ ನಡೆಸಿದ ಡಿಕೆಶಿ, ಕುಮಾರ ಸ್ವಾಮಿ ನೀವು ಮಾಜಿ ಪ್ರಧಾನಿ ಮಗ. ನಿಮ್ಮಲ್ಲಿ ಎಂಎಲ್ ಸಿ ಇದ್ದಾರೆ. ಮಹಿಳಾ ಕಾರ್ಯಕರ್ತರಿದ್ದಾರೆ. ಗ್ಯಾರೆಂಟಿಯಿಂದ ಮಹಿಳೆಯರು ದಾರಿ ತಪ್ತಾಇದ್ದಾರೆ ಎಂದು ಮಾಜಿ ಸಿಎಂ ಕುಮಾರ ಸ್ವಾಮಿ ಹೇಳಿ ನಂತರ ತಪ್ಪಾದರೆ ಕ್ಷಮಿಸಿ ಎಂದರೆ ಒಪ್ಪಿಕೊಳ್ಳಲಾಗುತ್ತಾ ಎಂದು ಆರೋಪಿಸಿದರು.

ಮೊದಲಿಗೆ ಗೃಹಲಕ್ಚ್ಮಿ ಯೋಜನೆಗೆ ಅತ್ತೆ ಸೊಸೆ ಜಗಳಾಡ್ತಾರೆ ಎಂದರು ಯಾವುದಾದರೂ ಗಲಾಟೆ ನಡೆಯಿತಾ? ಮಾಜಿ ಸಚಿವ ಆರಗದ ಜ್ಞಾನೇಂದ್ರ ಗ್ಯಾರೆಂಟಿಯನ್ನ 420 ಎಂದರು. ನಂತರ ನಮ್ಮ ಸಮಾವೇಶದಲ್ಲಿ ಭಾಗವಹಿಸಿದರು. ಆರಗ ಅಲ್ಲ ಅರ್ಧದ ಜ್ಞಾನೇಂದ್ರ ಎಂದು ಆರೋಪಿಸಿದರು.

ಗ್ಯಾರೆಂಟಿಯ ಲಾಭ ಪಡೆಯುತ್ತಿರುವ ರಾಜ್ಯದ ಉದ್ದಗಲದ 1 ಕೋಟಿ 20 ಲಕ್ಷದ ಕುಟುಂಬದ ಮಹಿಳೆಯರು ಸ್ವಾಭಿಮಾನದ ಹಿನ್ನಲೆಯಲ್ಲಿ ಹೋರಾಡಬೇಕು. ಬಿಎಸ್ ವೈ, ಅಶೋಕಣ್ಣನಿಗೆ, ಶೋಭಕ್ಕಂಗೆ‌ ರಾಜ್ಯದ ಜನರಿಗೆ‌ ಉತ್ತರಕೊಡಬೇಕಿದೆ. ಕೇಂದ್ರ ಸರ್ಕಾರ ರಾಜ್ಯದ ಅಭಿವೃದ್ಧಿಗೆ ಅನುದಾನದಲ್ಲೂ ತಾರತಮ್ಯ ನೀಡುತ್ತಿಲ್ಲ ಎಂದು ದೂರಿದರು.‌

3450 ಕೋಟಿ ಹಣ ಕೇಂದ್ರದಿಂದ ಬಿಡುಗಡೆ ಮಾಡುವುದಾಗಿ ಹೇಳಿ ಒಂದು ರೂ.ನೂ ನೀಡಲಿಲ್ಲ
16 ಜನ ಹಾಲಿ ಎಂಪಿಗೆ ಬಿಜೆಪಿ ಸೀಟ್ ಕೊಡಲಿಲ್ಲ ಏಕೆ? ಬಿಜೆಪಿ ಈಗ ಮೋದಿ ಗ್ಯಾರೆಂಟಿ ಎಂದು ಹೇಳ್ತಾ ಇದೆ. ನಮ್ಮದು ಹಾಗಲ್ಲ ಕಾಂಗ್ರೆಸ್ ಪಕ್ಷದ ಗ್ಯಾರೆಂಟಿ ಸಾಮೂಹಿಕ ಗ್ಯಾರೆಂಟಿ ಎಂದರು.

ಅಡಿಕೆ ಸಂಶೋದನ ಕೇಂದ್ರ ಆರಂಭಿಸುವುದಾಗಿ ಹೇಳಿ ಏನು ಆಯಿತು. ಸದಾನಂದ ಗೌಡರು ಡಿಸಿಎಂ‌ ಮತ್ತು ಸಿಎಂ ರನ್ನ ಅಯೋಗ್ಯ ಎಂದು ಬಳಕೆ ಮಾಡಿದ್ದಾರೆ ಆಯ್ತು ಒಪ್ಪಿಕೊಳ್ತೀನಿ ನಾವು ಅಯೋಗ್ಯರೆ, ಬರಗಾಲದ ಹಣ ಕೊಡಿಸಲು ನಿಮ್ಮ ಕೊಡುಗೆ ಏನು ಎಂಬುದು ಸದಾನಂದ ಗೌಡರು ಉತ್ತರಿಸಲಿ ಎಂದರು‌

ನಾನು‌ ಒಕ್ಕಲಿಗ ನಾಯಕರಲ್ಲ ಎಂಬ ಕುಮಾರ್ ಸ್ವಾಮಿಗೆ ಟಾಂಗ್ ನೀಡಲು ಸಮರ್ಪಕವಾಗಿ ತಿರುಗೇಟು ನೀಡಲು ವಿಫಲರಾದ ಡಿಕೆಶಿ ನಾನು ಕಾಂಗ್ರೆಸ್ ಕಟ್ಟಾಳು ಒಕ್ಕಲಿಗನಲ್ಲ ಎಂದರು.

ಈಶ್ವರಪ್ಪ ಗೀತ ಶಿವರಾಜ್ ಕುಮಾರ್ ರನ್ನ ಡಮ್ಮಿ ಎಂಬ ಆರೋಪಕ್ಕೆ ಈ ಬಾರಿ ಹೇಳಲ್ಲ. ಮುಂದಿನ ದಿನಗಳಲ್ಲಿ ಚುನಾವಣೆ ಪ್ರಚಾರಕ್ಕೆ ಬರುವೆ ನಂತರ ಮಾತನಾಡುವೆ ಎಂದ ಡಿಕೆಶಿ ಎಂಪಿಎಂ ಕಾರ್ಖಾನೆ ಪುನಶ್ಚೇತನ ಮಾಡುವುದಾಗಿ‌ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಆಯನೂರು ಮಂಜುನಾಥ್ ಅಧಿಕೃತಾ ಅಭ್ಯರ್ಥಿ

ನೈರತ್ಯ ಪದವೀಧರ ಅಭ್ಯರ್ಥಿ ಆಯ್ಕೆಯನ್ನ ಬದಲಾವಣೆ ಮಾಡುವ ಹಕ್ಕು ನನಗೆ ಇಲ್ಲ. ಯಾವ ದೂರು ಬಂದಿಲ್ಲ. ಪ್ರಶ್ನೆ ಮಾಡುವ ಹಕ್ಕು ಆಕಾಂಕ್ಷಿಗಳಿಗೆ ಇರುತ್ತದೆ. ಕೇಳಬಹುದು. ಸಧ್ಯಕ್ಕೆ ಆಯನೂರು ಮಂಜುನಾಥ್ ನಮ್ಮ ಅಧಿಕೃತ ಅಭ್ಯರ್ಥಿ ಎಂದರು.

ಡಿಕೆಶಿ ಸುದ್ದಿಗೋಷ್ಠಿಗೂ ಮುನ್ನಾ ಕಾಂಗ್ರೆಸ್ ಅಭ್ಯರ್ಥಿ ಗೀತ ಶಿವರಾಜ್ ಅವರ ಎರಡನೇ ಸೆಟ್ ನ ನಾಮಪತ್ರವನ್ನ ಸಲ್ಲಿಸಿದ್ದು ಈ ವೇಳೆ ಡಿಕೆ ಶಿವಕುಮಾರ್ ಸಾಥ್ ನೀಡಿರುವುದು ವಿಶೇಷವಾಗಿತ್ತು.

ಇದನ್ನೂ ಓದಿ-https://suddilive.in/archives/12865

Related Articles

Leave a Reply

Your email address will not be published. Required fields are marked *

Back to top button