ಶೈಕ್ಷಣಿಕ ಸುದ್ದಿಗಳು

ಮುಖ್ಯ ಶಿಕ್ಷಕ ಅಮಾನತ್ತು-ಎಸ್ಪಿ ಸ್ಥಳಕ್ಕೆ ಭೇಟಿ,ಪರಿಶೀಲನೆ

ಸುದ್ದಿಲೈವ್/ಭದ್ರಾವತಿ

ತಾಲೂಕು ಕೋಮಾರನಹಳ್ಳಿ ಗ್ರಾಮ ಪಂಚಾಯತಿ ಗುಡ್ಡದ ನೇರಲೆಕೆರೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಂದ ಶೌಚಾಲಯ ಶುಚಿ ಮಾಡಿಸಿದ ಪ್ರಕರಣದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಶಂಕರಪ್ಪರನ್ನ ಅಮಾನತು ಶಿಕ್ಷೆಗೆ ಒಳಗಾಗಿದ್ದಾರೆ.

ಈ ಬಗ್ಗೆ ಶಿವಮೊಗ್ಗ ಡಿಡಿಪಿಐ ಸಿ.ಆರ್ ಪರಮೇಶ್ವರಪ್ಪ ಮಾಹಿತಿ ನೀಡಿದ್ದು ಇಲಾಖೆ ತನಿಖೆ ಪ್ರಗತಿಯಲ್ಲಿದ್ದು, ಪ್ರಾಥಮಿಕ ತನಿಖೆ ಆಧಾರದ ಮೇಲೆ ಮುಖ್ಯ ಶಿಕ್ಷಕರನ್ನ ಅಮಾನತು ಮಾಡಿ ಆ ಜಾಗಕ್ಕೆ ಹಿರಿಯ ಶಿಕ್ಷಕರನ್ನ ಪ್ರಭಾರ ಶಿಕ್ಷಕರಾಗಿ ನಿಯುಕ್ತಿಗೊಳಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಇನ್ನು ಪೊಲೀಸ್ ಇಲಾಖೆ ಕೂಡ ಕ್ರಮಕ್ಕೆ ಮುಂದಾಗಿದ್ದು DDPI ದೂರಿನ ನಂತರ ತನಿಖೆ ಮಾಡಲಿದೆ. ಈ ಪ್ರಕರಣದಲ್ಲಿ ಎಸ್ಪಿ ಮಿಥುನ್ ಕುಮಾರ್ ಜಿ.ಕೆ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಈ ಪ್ರಕರಣ ಎಫ್ಐಆರ್ ಆಗುವ ಎಲ್ಲಾ ಸಾಧ್ಯತೆ ಇದೆ.

ದಸಂಸ ಸಂಘಟನೆ ಈ ಪ್ರಕರಣವನ್ನು ವಿಡಿಯೋ ಸಮೇತ ಬಹಿರಂಗಗೊಳಿಸಿ ಕ್ರಮಕ್ಕೆ ಉಪವಿಭಾಗಧಿಕಾರಿಗಳ ಮೊರೆ ಹೋಗಿತ್ತು. ಈಗಾಗಲೇ ರಾಜ್ಯಾದ್ಯಂತ ಇದೇ ತರಹದ ಹಲವು ಪ್ರಕರಣಗಳು ಸರ್ಕಾರವನ್ನ ಮುಜುಗರಕ್ಕೀಡು ಮಾಡಿದ್ದವು.

ಕೋಲಾರದ ಮಾಲೂರು ತಾಲೂಕಿನ ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಂಡಿದ್ದ ಸಿಎಂ ಸಿದ್ದರಾಮಯ್ಯ ಅಲ್ಲಿನ ಎಸ್ ಪಿಗೆ ಆರೋಪಿಗಳ ತನಿಖೆ ತ್ವರಿತವಾಗಿ ಮಾಡಲು ಸೂಚಿಸಿದ್ದರು. ಶಿವಮೊಗ್ಗ ಶಿಕ್ಷಣ ಸಚಿವ ಮಧು ಬಂಗಾರಪ್ಪನವರ ಜಿಲ್ಲೆಯಾಗಿದ್ದು ಶಿಕ್ಷಣ ಸಚಿವರಿಗೂ ಈ ಪ್ರಕರಣ ಇರಿಸುಮುರಿಸು ತಂದಿದೆ.

ಕಳೆದ ವಾರ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಸಚಿವರು ಹಿಂದಿನ ಸರ್ಕಾರದಲ್ಲಿ ಶಾಲಾ ನಿರ್ವಹಣೆಗೆ ನೀಡುತ್ತಿದ್ದ ಹಣ ಸಾಲುತ್ತಿಲ್ಲ. ಸಿಎಂ ಸಿದ್ದರಾಮಯ್ಯ ಜೊತೆ ಚರ್ಚಿಸಿ ಈ ಬಜೆಟ್ ಲ್ಲಿ ಹೆಚ್ಚು ಅನುದಾನ ಕೊಡಿಸುವ ಭರವಸೆ ನೀಡಿದ್ದರು. ಜೊತೆಗೆ ಯಾವುದೇ ಮಗು ನೆಲದ‌ ಮೇಲೂ ಕೂರೋದಕ್ಕೆ ಅವಕಾಶ ನೀಡೋದಿಲ್ಲ ಎಂದಿದ್ದರು.

ಇದನ್ನೂ ಓದಿ-https://suddilive.in/archives/5669

Related Articles

Leave a Reply

Your email address will not be published. Required fields are marked *

Back to top button

Notice: ob_end_flush(): Failed to send buffer of zlib output compression (0) in /home/twzwscfi/suddilive.in/wp-includes/functions.php on line 5373