ಏನು ನಡೆಯುತ್ತಿದೆ ಕುವೆಂಪು ವಿಶ್ವ ವಿದ್ಯಾಲಯದಲ್ಲಿ?

ಸುದ್ದಿಲೈವ್/ಶಿವಮೊಗ್ಗ

ಕುವೆಂಪು ವಿಶ್ವ ವಿದ್ಯಾಲಯದಲ್ಲಿ ಅನಾಮದೇಯ ವ್ಯಕ್ತಿಗಳು ಓಡಾಡುತ್ತಿದ್ದಾರಾ? ವಿಶ್ವ ವಿದ್ಯಾಲಯದಲ್ಲಿ ಯಾರು ಎಲ್ಲಿಬೇಕಾದರೂ ನುಗ್ಗಬಹುದಾ? ಕುವೆಂಪು ವಿಶ್ವವಿದ್ಯಾಲಯದ ಹಗರಣಗಳು, ಹಗರಣಗಳನ್ನ ಮುಚ್ಚಿಹಾಕಲು ಈ ಅನಾಮದೇಯ ವ್ಯಕ್ತಿಗಳ ಓಡಾಟಗಳಿಗೆ ಏನಾದರೂ ಲಿಂಕ್ ಇವೆಯಾ ಎಂಬ ಸಾಲು ಸಾಲು ಪ್ರಶ್ನೆಗೆ ಕುವೆಂಪು ವಿಶ್ವ ವಿದ್ಯಾಲಯದ ವಾಣಿಜ್ಯಶಾಸ್ತ್ರ ಅಧ್ಯಾಯನ ವಿಭಾಗದ ಅಧ್ಯಕ್ಷರ ಪತ್ರವೊಂದು ಪುಷ್ಠಿ ನೀಡುತ್ತವೆ.
ಸರ್ಕಾರಿ ಕೆಲಸ ದೇವರ ಕೆಲಸ ಎಂಬುದು ಕೇವಲ ಘೋಷಣೆಗೆ ಅಥವಾ ನಾಮಫಲಕ ತೂಗಿಹಾಕಲು ಮಾತ್ರ ಸೀಮಿತವಾಗುತ್ತಿದೆ ಎಂದರೆ ಉತ್ಪ್ರೇಕ್ಷೆಯಾಗದು. ಯಾವ ಕೆಲಸವು ದೇವರ ಕೆಲಸದಂತೆ ಸರ್ಕಾರಿ ಇಲಾಖೆಯಲ್ಲಿ ನಡೆಯೋದಿಲ್ಲವೆಂಬುದು ಸಾರ್ವಜನಿಕರ ವಲಯದಲ್ಲಿನ ಬಲವಾದ ನಂಬಿಕೆಯೂ ಹೌದು. ಈ ರೀತಿಯ ಪೀಠಿಕೆ ಹಾಕಲು ಏನು ಅಂತದ್ದು ಆಗ್ಬಾರದು ಆಗಿದೆ ಎಂದು ಕೇಳ್ತಾ ಇದ್ದೀರಾ? ಆಗಿದ್ದಿಷ್ಟೆ.
ಈ ಹಿಂದಿನ ಕುಲಪತಿಗಳಾಗಿದ್ದ ಪ್ರೊ.ಬಿ.ಪಿ ವೀರಭದ್ರಪ್ಪನವರ ಕಾಲಾವಧಿಯಲ್ಲಿ ಸ್ಮಾರ್ಟ್ ಕ್ಲಾಸ್ ರೂಮ್ ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು. ಕಾಮಗಾರಿಯೂ ಮುಗಿದಿತ್ತು. ಆದರೆ 4.25 ಕೋಟಿಯ ಸ್ಮಾರ್ಟ್ ಕ್ಲಾಸ್ ರೂಂ ನಿರ್ಮಿಸಿರುವ ಬಗ್ಗೆ ಬಿಲ್ ಆಗಿತ್ತು. ಇದು ಕಾಂಗ್ರೆಸ್ ಸರ್ಕಾರ ಬಂದ ವೇಳೆ ಆಕ್ಷೇಪಣೆಗಳು ಕೇಳಿ ಬಂದಿದ್ದವು. ಅಲ್ಲದೆ ತನಿಖೆಗೂ ಆದೇಶವಾಗಿದೆ.
ಆದರೆ ವಿಶ್ವ ವಿದ್ಯಾಲಯದ ವಾಣಿಜ್ಯ ಶಾಸ್ತ್ರದ ಸ್ಮಾರ್ಟ್ ಕ್ಲಾಸ್ ರೂಂನ ಬೀಗ ತೆಗೆಯಲು ನಾಲ್ಕು ಜನ ಅನಮದೇಯ ವ್ಯಕ್ತಿಗಳು ಬಂದು ಬೀಗ ತೆಗೆಯಲು ಯತ್ನಿಸಿದಾಗ ಈ ವಿಷಯ ವಾಣಿಜ್ಯ ಶಾಸ್ತದ ವಿಭಾಗದ ಅಧ್ಯಕ್ಷ ಪ್ರೊ.ವೆಂಕಟೇಶ್ ಗೆ ವಿಷಯ ಮುಟ್ಟಿದೆ. ಈ ಅನಾಮದೇಯ ವ್ಯಕ್ತಿಗಳನ್ನ ಚೇಂಬರ್ ಗೆ ಕರೆಯಿಸಿ ವಿಚಾರುಸಿದ್ದಾರೆ.
ಆಗ ಈ ಅನಾಮದೇಯ ವ್ಯಕ್ತಿಗಳು ಹುನ್ನರ್ವಿ ಟೆಕ್ನಾಲಜಿ ಬೆಂಗಳೂರಿನಿಂದ ಬಂದಿದ್ದು, ಸ್ಮಾರ್ಟ್ ರೂಂನ ಲೈಟ್ ಹಾಕಲು ಕೀ ಇಲ್ಲದ ಕಾರಣ ಸ್ಕ್ರೂಡ್ರೈವರ್ ನಲ್ಲಿ ಯತ್ನಿಸಿರುವುದು ತಿಳಿದು ಬಂದಿದೆ. ಸ್ಮಾರ್ಟ್ ಕ್ಲಾಸ್ ರೂಂನಲ್ಲಿ ಅಳವಡಿಸಿರುವ ಉಪಕತಣಗಳು ಸಮರ್ಪಕವಾಗಿ ಅಳವಡಿಸಿಲ್ಲವೆಂಬ ಶಂಕೆ ಕಂಡು ಬರುತ್ತಿದೆ.
ಹಾಗಾಗಿ ಈ ನಾಲ್ವರ ವಿರುದ್ಧ ಪೊಲೀಸ್ ದೂರು ನೀಡುವಂತೆ ವಾಣಿಜ್ಯ ಶಾಸ್ತ್ರದ ಅಧ್ಯಕ್ಷರು ವಿಶ್ವ ವಿದ್ಯಾಲಯದ ಕುಲಸಚಿವರಿಗೆ ಪತ್ರ ಬರೆದಿರುವುದು ಗಮನ ಸೆಳೆದಿದೆ.
ಇದನ್ನೂ ಓದಿ-https://suddilive.in/archives/1587
