ಶೈಕ್ಷಣಿಕ ಸುದ್ದಿಗಳು

ಶೈಕ್ಷಣಿಕ ತರಗತಿ ಆರಂಭಿಸುವಂತೆ ವಿದ್ಯಾರ್ಥಿಗಳ ಪ್ರತಿಭಟನೆ

ಸುದ್ದಿಲೈವ್/ಶಿವಮೊಗ್ಗ

ಶೈಕ್ಷಣಿಕ ತರಗತಿಗಳನ್ನ ನಡೆಸುವಂತೆ ಆಗ್ರಹಿಸಿ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳು ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಪ್ರತಿಭಟನೆ ನಡೆಸಿದರು.

2023-24 ನೇ ಶೈಕ್ಷಣಿಕ ವರ್ಷ ಆರಂಭವಾಗಿ ಎರಡು ತಿಂಗಳು ಕಳೆದರೂ ಸಹ್ಯಾದ್ರಿ ಕಾಲೇಜಿನಲ್ಲಿ ಇದುವರೆಗೂ ಆರಂಭವಾಗಿಲ್ಲವೆಂದು ಆರೋಪಿಸಲಾಗಿದೆ. ಸೆ.19 ರಿಂದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ತರಗತಿಗಳು ಆರಂಭವಾಗಲಿದೆ ಎಂಬ ಭರವಸೆ ನೀಡಲಾಗಿತ್ತು.

ಆದರೆ ಸೆ.19 ರ ಬಳಿಕವೂ ಅಧ್ಯಾಪಕರು ಮೌಲ್ಯಮಾಪನಕ್ಕೆ ತೆರಳಿದ್ದಾರೆ. ನಂತರ ಆರಂಭಿಸಲಾಗುವುದು ಎಂಬ ಭರವಸೆ ದೊರೆತಿದೆ. ಅ.05 ರಿಂದ ದ್ವಿತೀಯ ಮತ್ತು ತೃತೀಯ ತರಗತಿಗಳು ಆರಂಭವಾಗಿವೆ. ಆದರೆ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ದೀಪಾವಳಿ ದಸರಾ ಹಬ್ಬದ ನೆಪವೊಡ್ಡಲಾಗಿದೆ. ಈಗ ಅತಿಥಿ ಉಪನ್ಯಾಸಕರ ಇಲ್ಲ ಎಂಬ ಕಾರಣ ಹೇಳಲಾಗುತ್ತಿದೆ ಎಂದು ಪ್ರತಿಭಟನಾಕಾಋಉ ಆಗ್ರಹಿಸಿದ್ದಾರೆ.

ಇದರ ನಂತರವೂ ಶೈಕ್ಷಣಿಕ ವರ್ಷ ಆರಂಭವಾಗದ ಕಾರಣ ಪ್ರಧಮ ವರ್ಷದ ಪದವಿ ವಿದ್ಯಾರ್ಥಿಗಳು ಪ್ರತಿಭಟಿಸಿದ್ದಾರೆ. ಪ್ರಾಂಶುಪಾಲರು ಪ್ರತಿಭಟನಾ ಸ್ಥಳಕ್ಕೆ ಬರುತ್ತಿದ್ದಂತೆ ವಿದ್ಯಾರ್ಥಿಗಳು ಅವರಿಗೆ ದಿಕ್ಕಾರ ಕೂಗಿದ್ದಾರೆ. ಶಾಸಕ ಚೆನ್ನಬಸಪ್ಪ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದ್ದಾರೆ.

ಸ್ಥಳಕ್ಕೆ ವಿಸಿ ಮತ್ತು ಜೆಡಿ ಬರಬೇಕು ಎಂಬುದು ಪ್ರತಿಭಟನಾಕಾರರ ಆಗ್ರಹವಾಗಿದೆ. ಒಟ್ಟಿನಲ್ಲಿ ವಿದ್ಯಾರ್ಥಿಗಳ ತಾಳೆ ಕಳೆದುಕೊಳ್ಳುವ ಮುಂಚೆ ಶೈಕ್ಷಣಿಕ ವರ್ಷ ಆರಂಭಗೊಳ್ಳಲಿ ಎಂಬುದು ನಮ್ಮೆಲ್ಕರ ಆಶಯ

ಇದನ್ನೂ ಓದಿ-https://suddilive.in/archives/3504

Related Articles

Leave a Reply

Your email address will not be published. Required fields are marked *

Back to top button