ಸ್ಥಳೀಯ ಸುದ್ದಿಗಳು

ಜ.27 ಕ್ಕೆ ರುದ್ರೇಗೌಡರಿಗೆ ಅಭಿನಂದನಾ ಕಾರ್ಯಕ್ರಮ

ಸುದ್ದಿಲೈವ್/ಶಿವಮೊಗ್ಗ

75 ರ ಹುಟ್ಟುಹಬ್ಬದ ಅಂಗವಾಗಿ ಎಂಎಲ್ ಸಿ ರುದ್ರೇಗೌಡರಿಗೆ ಅಭಿನಂದನ ಕಾರ್ಯಕ್ರಮವನ್ನ ಜ.27 ರಂದು ಹಮ್ಮಿಕೊಳಲಾಗಿದೆ. ರುದ್ರೇಗೌಡರಿಗೆ ನಡೆಯುತ್ತಿರುವ  ಅಭಿನಂದನೆಗೆ ಅಭಿನಂದನಾ ಸಮಿತಿಯನ್ನ ರಚಿಸಲಾಗಿದೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಸಮಿತಿ ಅಧ್ಯಕ್ಷ ಡಿ.ಜಿ.ಬೆನಕಪ್ಪ, ಜ.9 ಕ್ಕೆ 74 ವಸಂತನ್ನಗಳನ್ನ ಕಳೆದು 75 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಇವರ ಹುಟ್ಟುಹಬ್ಬವನ್ನ ಜ.9 ರಂದು ನಡೆದರೂ ಜ. 27 ರಂದು ಸರ್ಜಿ ಕನ್ವೆಷನಲ್ ಹಾಲ್ ನಲ್ಲಿ ಅಮೃತಮಯಿ ಎಂಬ ಹೆಸರಿನ ಅಡಿ ಕಾರ್ಯಕ್ರಮ ನಡೆಯಲಿದೆ ಎಂದರು.

ರಾಜಕಾರಣ, ಸಮಾಜಸೇವೆ, ಕೈಗಾರಿಕೆಗಳ ವಿಸ್ತೃತ ಚರ್ಚೆಯನ್ನ ಯುವ ಪೀಳಿಗೆಗೆ ದಾಟಿಸಲು ಶ್ತಮದಿಂದ ಸಾರ್ಥಕತೆಡೆಗೆ ಎಂಬ ವಿಚಾರ ಸಂಕಿರಣವನ್ನ ಅಯೋಜಿಸಲಾಗಿದೆ. ಮೂವರು ಸ್ಪೂರ್ತಿದಾಯಕ ಸಾಧಕರಿಂದ ಯುವಕರಿಗೆ ಮಾರ್ಗದರ್ಶನ ಮಾಡಲಾಗುವುದು ಎಂದರು.

ಸಮಿತಿಯ ಪ್ರಧಾನ ಕಾರ್ಯದರ್ಶಿ ಡಾ.ಧನಂಜಯ ಸರ್ಜಿ ಮಾತನಾಡಿ, ಮಧ್ಯಾಹ್ನ 3 ರಿಂದ ಸಂಜೆ 5 ಗಂಟೆಗೆ ಅಂತರಂಗ ಮತ್ತು ಬಹಿರಂಗ ಎಂಬ ಕಾರ್ಯಕ್ರಮ ನಡೆಲಿದೆ. ಈ ಕಾರ್ಯಕ್ರಮ ವೀಕೆಂಡ್ ವಿಥ್ ರಮೇಶ್ ರವರ ಕಾರ್ಯಕ್ರಮದ ರೀತಿ ನಡೆಯಲಿದೆ. 20 ಜನ ಯುವಕರು ರುದ್ರೇಗೌಡರಿಗೆ ಪ್ರಶ್ನಿಸಲಿದ್ದಾರೆ. ಈ ಸಂದರ್ಭದಲ್ಲಿ ರುದ್ರೇಗೌಡರ ಕುಟುಂಬ ಹಾಜರಿಯಿರಲಿದ್ದಾರೆ ಎಂದರು‌.

ಸಂಜೆ 5-30 ಕ್ಕೆ ಅಭಿನಂದನಾ‌ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸುಪ್ರೀಂಕೋರ್ಟ್ ನ ವಿಶ್ರಾಂತ ನ್ಯಾಯಮೂರ್ತಿ ಶಿವರಾಜ್ ವಿ ಪಾಟೀಲ್ ಉಪಸ್ಥಿತರಿರಲಿದ್ದಾರೆ. ಮಾಜಿ ಸಿಎಂ‌ ಬಿಎಸ್ ವೈ ಕಾರ್ಯಕ್ರಮವನ್ನ ಉದ್ಘಾಟಿಸಲಿದ್ದಾರೆ. ವಿಧಾನ ಪರಿಷತ್ ನ ಸಭಾಪತಿ ಬಸವರಾಜ್ ಹೊರಟ್ಟಿ ರುದ್ರೇಗೌಡ ದಿ ಐರನ್ ಮ್ಯಾನ್ ಪುಸ್ತಕವನ್ನ ಉದ್ಘಾಟಿಸಲಿದ್ದಾರೆ ಎಂದರು.

ಮಾಜಿ ಸಭಾಪತಿ ಬಿ‌ಎಲ್ ಶಂಕರ್ ಗೌಡರ ಕುರಿತು ಅಙಿನಙದನಾ ನುಡಿಗಳನ್ನಾಡಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಆರ್ ಕೆ ಸಿದ್ದರಾಮಣ್ಣ, ಎಸ್ ಎಸ್ ಜ್ಯೋತಿ ಪ್ರಕಾಶ್, ಗೋಪಿನಾಥ್, ಕೆ.ಕಿರಣ್ ಕುಮಾರ್, ಬಾಳೆಕಾಯಿ ಮೋಹನ್ ಮಾಜಿ ಪಾಲಿಕೆ ಸದಸ್ಯ ವಿ.ವಿಶ್ವಾಸ್ ಮೊದಲಾದವರು ಉಪಸ್ಥಿತರಿದ್ದರು.

ಇದನ್ನು ಓದಿ-https://suddilive.in/archives/6364

Related Articles

Leave a Reply

Your email address will not be published. Required fields are marked *

Back to top button