ರಾಜ್ಯ ಸುದ್ದಿಗಳು

ಸುಮಲತಾ ಸ್ಪರ್ಧೆ ಇನ್ನೂ ಚರ್ಚೆ ಆಗಿಲ್ಲ.

ಸುದ್ದಿಲೈವ್/ಶಿವಮೊಗ್ಗ

ರಾಷ್ಟ್ರಪತಿಗಳ ಕುರಿತು ಸಿಎಂ ಸಿದ್ದರಾಮಯ್ಯ ಏಕವಚನ ಬಳಕೆ ಮಾಡಿರುವುದನ್ನ‌ ವಿರೋಧಿಸಿದ್ದಾರೆ.ರಾಷ್ಟ್ರಪತಿಗಳ ಬಗ್ಗೆ ಏಕವಚನದಲ್ಲಿ ಮಾತಾಡುವುದು ಸರಿಯಲ್ಲ ಎಂದು ಎಂಎಲ್ ಸಿ ಭೋಜೇಗೌಡ ಪ್ರತಿಕ್ರಿಯೆ ನೀಡಿದ್ದಾರೆ.

ಅವರು ಶಿವಮೊಗ್ಗದ ಕ್ರೀಡಾಂಗಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ,  ಅವರು ದೇಶದ ಪ್ರಥಮ ಪ್ರಜೆಯಾಗಿದ್ದಾರೆ.  ಮುಖ್ಯಮಂತ್ರಿಯಾಗಿ ಈ ರೀತಿ ಅಗೌರವ ತೋರುವುದು ಸರಿಯಲ್ಲ. ಅದು ಸಿದ್ದರಾಮಯ್ಯ ಅವರಿಗೆ ಶೋಭೆ ತರೋದಿಲ್ಲ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಗೌರವ ಕೊಡಬೇಕು ಎಂದರು.

ಮಂಡ್ಯ ಲೋಕಸಭಾ ಮೈತ್ರಿ ವಿಚಾರ ಮಾತನಾಡಿದ ಭೋಜೇಗೌಡರು, ಮಂಡ್ಯ ಲೋಕಸಭಾ ಸ್ಪರ್ಧೆ ಬಗ್ಗೆ ಇನ್ನೂ ಚರ್ಚೆ ಆಗಿದೆ.ಇನ್ನೂ ಅಂತಿಮ ಆಗಿಲ್ಲ. ಸುಮಲತಾ  ಬಿಜೆಪಿಗೆ ಸೇರಿದರೆ ಮಂಡ್ಯ ಕ್ಷೇತ್ರದ ಬಗ್ಗೆ ಪ್ರಶ್ನೆ ಬರಲ್ಲ.ಜೆಡಿಎಸ್ ಬಹುಶಃ ನಾಲ್ಕು ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತೇವೆ

ನಾನು ಪರಿಷತ್ ಚುನಾವಣೆಗೆ ಆಕಾಂಕ್ಷಿ ಆಗಿದ್ದು ಸಿದ್ದತೆ ಮಾಡಿಕೊಳ್ಳುತ್ತಿದ್ದೇನೆ. ಕೆರಗೋಡು ಹನುಮ ಧ್ವಜ ವಿಚಾರದಲ್ಲಿ  ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ.ರಾಮ ಮಂದಿರ ವಿಚಾರದಲ್ಲೂ ಕಾಂಗ್ರೆಸ್ ರಾಜಕೀಯ ಮಾಡಿದೆ.ವಿನಾಃ ಕಾರಣ ಬಿಜೆಪಿಯ ಮೇಲೆ ಆರೋಪ ಮಾಡಿದೆ ಎಂದರು.

ಇದನ್ನೂ ಓದಿ-https://suddilive.in/archives/7920

Related Articles

Leave a Reply

Your email address will not be published. Required fields are marked *

Back to top button

Notice: ob_end_flush(): Failed to send buffer of zlib output compression (0) in /home/twzwscfi/suddilive.in/wp-includes/functions.php on line 5373