ರಾಜಕೀಯ ಸುದ್ದಿಗಳು

ಸಂಸದ ರಾಘವೇಂದ್ರ ಮತ್ತು ಮಾಜಿ ಡಿಸಿಎಂ ಈಶ್ವರಪ್ಪ ಭರ್ಜರಿ ಮತ ಪ್ರಚಾರ

ಸುದ್ದಿಲೈವ್/ಶಿವಮೊಗ್ಗ

ಚುನಾವಣೆಯ ಭರ್ಜರಿ ಪ್ರಚಾರಕ್ಕೆ ಸಂಸದ ರಾಘವೇಂದ್ರನವರು ಮುಂದಾದರೆ, ಪಕ್ಷೇತರರಾಗಿ ಸ್ಪರ್ಧಿಸುತ್ತಿರುವ ಕೆ.ಎಸ್.ಈಶ್ವರಪ್ಪನವರು ಪ್ರಚಾರದಲ್ಲಿ ತೊಡಗಿದ್ದಾರೆ. ಬೊನ್ಮನ್ ಕಟ್ಟೆಯ ಶಾರದಮ್ಮ ಬಡಾವಣೆ, ಹಳೇ ಬೊಮ್ಮನಕಟ್ಟೆಯ ಸ್ಥಳ, ಆಶ್ರಯ ಬಡಾವಣೆ, ಹಾಗೂ ಕೋರ್ಟ್ ನಲ್ಲಿ ಸಂಸದರು ಮತಯಾಚಿಸಿದ್ದಾರೆ. ಸಂಜಯ ನಂತರವೂ ನಗದಲ್ಲಿ ಮತಯಾಚಿಸಲಿದ್ದಾರೆ.

ಸಂಸದರು ಇಂದು ನ್ಯಾಯಾಲಯದಲ್ಲಿರುವ ವಕೀಲರ ಭವನಕ್ಕೆ ಭೇಟಿ ನೀಡಿ ಮತಯಾಚಿಸಿದ್ದಾರೆ. ಈ ವೇಳೆ ಸಂಸದರನ್ನ ವಕೀಲರು ಶಾಲು ಹೊದಿಸಿ ಗೌರವಿಸಿದರು.

ನಂತರ ಮಾತನಾಡಿದ ಸಂಸದ ರಾಘವೇಂದ್ರ, ನಾನು ಶಿವಮೊಗ್ಗ ನಗರದ ಅಭಿವೃದ್ಧಿಗೆ ಸೇತುವೆ ಯಾಗಿ ಕೆಲಸ ಮಾಡಿರುವೆ, ಕೋರ್ಟ್ ನ್ನ ಸಹ್ಯಾದ್ರಿ ಕಾಲೇಜಿನ‌ಮುಂಭಾಗಕ್ಕೆ ವರ್ಗಯಿಸಲು ಇಚ್ಚಿಸಿದ್ದೀರಿ. ಮುಂದಿನ ದಿನಗಳಲ್ಲಿ ಈ ಕುರಿತು ಮುಂದುವರೆಯೋಣ. ನನಗೆ ಮುಂದಿನ 5 ವರ್ಷ ಸೇವೆ ಮಾಡಲು ಅವಕಾಶಕೊಡಿ ಎಂದರು.

ಅದೇ ರೀತಿ ಪ್ರಚಾರದಲ್ಲಿ ಈಶ್ವರಪ್ಪನವರೂ ಸಹ ಇಂದು ಹಿಂದೆ ಸರಿದಿಲ್ಲ. ಗಾಡಿಕೊಪ್ಪದಲ್ಲಿ ಮನೆ ಮನೆಗೆ ಮತಯಾಚಿಸಿದರೆ, ಅಶೋಕನಗರದಲ್ಲಿ ಮನೆ ಮನೆಗೆ ತೆರಳಿ ಮತಯಾಚಿಸಿದರು. ಗಾಂಧಿಬಜಾರ್ ನ ಬಸವೇಶ್ವರ ದೇವಸ್ಥಾನದಿಂದ ಕುಂಬಾರ ಗುಂಡಿಯ ವರೆಗೆ ನಡೆದುಕೊಂಡು ಹೋಗುವ ಮೂಲ ಮತಯಾಚಿಸಿದರು.

ನಂತರ ಮಲ್ಲಿಕಾರ್ಜುನಗರದಲ್ಲಿ ಕೆರೆ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಮತಯಾಚಿಸಿದರು. ಈ ವೇಳೆ ಹೇ ರಾಮ ಜಯರಾಮ ಎಂಬ ಭಜನೆ ಮಾಡಿ ನಂತರ ಬಹಿರಂಗ ಸಭೆ ನಡೆಸಿದರು‌

ಚುನಾವಣೆಯಲ್ಲಿ ಸ್ಪರ್ಧಿಸುವ ಚಿಂತೆ ಇರಲಿಲ್ಲ. ಆದರೆ ಹಿಂದೂತ್ವದ ಬಹಳ ಜನ ನಾಯಕರು ಬಿಜೆಪಿಯಿಂದ ಹಿಂದೆ ಸರಿದಿದ್ದಾರೆ. ಪಕ್ಷ ಬಿಎಸ್ ವೈ ರಿಂದ ಶುದ್ಧಿಕರಣ ಆಗಬೇಕಿದೆ. ನನ್ನ ಗುರುತು ಜೋಡಿ ಕಬ್ಬಿನ ರೈತ ನನ್ನ ಗುರುತು. ಕೆಲವರಲ್ಲಿ ಗೊಂದಲವಿದೆ. ಅತಿ ಹೆಚ್ಚು ಸಂಖ್ಯೆಯಿಂದ ಗೆಲ್ಲಿಸಿ ಎಂದು ಕೋರಿದರು

ಎಳೆದುಕೊಂಡು ಎಳೆದುಕೊಂಡು ಹೋಗಿ ಪ್ರಚಾರ ಮಾಡ್ತಾ ಇದ್ದಾರೆ. ನಿನ್ನೆ ಶೋ ರೂಮ್ ಗಳಿಗೆ ಭೇಟಿ ಮಾಡಿದ್ದೆ. ಶೋರೂಮ್ ನ ಸಿಬ್ಬಙದಿಗಳು ಪ್ರಚಾರಕ್ಕೆ ಬರುವುದಾಗಿ ಇಂಗಿತ ವ್ಯಕ್ತಪಡಿಸಿದ್ದಾರೆ. ರಜಾ ಕೊಡುವುದಾಗಿ ಮಾಲೀಕರು ಹೇಳಿದ್ದಾರೆ. ರಾಷ್ಟ್ರಭಕ್ತ ಮುಸ್ಲೀಂರು ಬೆಂಬಲಿಸುತ್ತಿದ್ದಾರೆ ಎಂದರು.

ಇದನ್ನೂ ಓದಿ-https://suddilive.in/archives/13620

Related Articles

Leave a Reply

Your email address will not be published. Required fields are marked *

Back to top button