ಡಿವೈಎಸ್ಪಿ-2 ಸುರೇಶ್ ವರ್ಗಾವಣೆಗೆ ಡಿಎಸ್ ಎಸ್ ಅಂಬೇಡ್ಕರ್ ವಾದ ಬಿಗಿಪಟ್ಟು

ಸುದ್ದಿಲೈವ್/ಶಿವಮೊಗ್ಗ

ಡಿವೈಎಸ್ಪಿ-2 ಸುರೇಶ್ ವಿರುದ್ಧ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ತಿರುಗಿಬಿದ್ದಿದೆ. ಮಾರಾಣಾಂತಿಕ ಹಲ್ಲೆ ಮಾಡಿದವರನ್ನ ಬಂಧಿಸದೆ ನಿರೀಕ್ಷಣಾ ಜಾಮೀನು ಪಡೆಯಲು ಅವಕಾಶ ಮಾಡಿಕೊಟ್ಟು ಕರ್ತವ್ಯ ಲೋಪವೆಸಗಿದ್ದ ಡಿವೈಎಸ್ಪಿ-02 ಸುರೇಶ್ ವರ್ಗಾವಣೆ ಮಾಡುವಂತೆ ಸಂಘಟನೆ ಜಿಲ್ಲಾಧಿಕಾರಿಗಳ ಮೂಲಕ ಗೃಹ ಸಚಿವರಿಗೆ ಮನವಿ ಮಾಡಿಕೊಂಡಿದ್ದಾರೆ.
ಬಸವಗಂಗೂರಿನಲ್ಲಿ ಕೋಟಿ ಎಂಬ ಯುವಕನ ಮೇಲೆ ಅದೇ ಗ್ರಾಮದ ಪುಡಿ ರೌಡಿ ಅರುಣ, ಅಭಿಷೇಕ, ಯೋಗೇಶ್, ಅಯ್ಯ ಎಂಬ ನಾಲ್ವರು ಮನೆಯಿಂದ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ವಿವಸ್ತ್ರಗೊಳಿಸಿ ಮೈಮೇಲೆ ಮದ್ಯ ಸುರಿದು ದೊಣ್ಣೆಗಳಿಂದ ಹಲ್ಲೆ ನಡೆಸಿ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ.
ಘಟನೆಗಳನ್ನ ಚಿತ್ರೀಕರಣಗೊಳಿಸಿಕೊಂಡ ಈ ಪುಡಿ ರೌಡಿಗಳ ಗ್ಯಾಂಗ್ ವಿಡಿಯೋ ಮಾಡಿಕೊಂಡು ಈ ವಿಷಯ ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಸಿ ದೌರ್ಜನ್ಯವೆಸಗಿದ್ದಾರೆ. ಈ ಬಗ್ಗೆ ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ದೌರ್ಜನ್ಯ ಕಾಯ್ದೆಯ ಅಡಿ ಪ್ರಕರಣ ದಾಖಲಾದರೂ ಆರೋಪಿಗಳನ್ನ ಬಙಧಿಸದ ಡಿವೈಎಸ್ಪಿ ಸುರೇಶ್ ಈ ಘಟನೆಯ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಪಡೆಯಲು ಅವಕಾಶ ನೀಡಿದ್ದಾರೆ. ಮನೆಯ ಮುಂದೆ ಆರೋಪಿಗಳು ರಾಜಾರೋಷವಾಗಿ ಮನೆಯ ಮುಂದೆ ಬೆದರಿಕೆ ಹಾಕಿ ಓಡಾಡುತ್ತಿದ್ದರೂ ನಿಮ್ಮ ಮೇಲೂ ಪ್ರಕರಣ ಬರಲಿ ಒದ್ದು ಒಳಗೆ ಹಾಕುವುದಾಗಿ ಬೆದರಿಕೆ ಹಾಕಿರುವುದಾಗಿ ಸಂಘಟನೆ ಮನೆಯಲ್ಲಿ ಆಗ್ರಹಿಸಿದೆ.
ದೌರ್ಜನ್ಯ ಪ್ರಕರಣದ ಆರೋಪಿಗಳನ್ನ ಬಂಧಿಸದೆ ಕರ್ತವ್ಯ ಲೋಪ ವೆಸಗುವ ಡಿವೈಎಸ್ಪಿ-02 ಸುರೇಶ್ ರನ್ನ ವರ್ಗಾವಣೆ ಮಾಡಬೇಕು ದಕ್ಷ ಪ್ರಮಾಣದ ಪೊಲೀಸ್ ಅಧಿಕಾರಿಗಳನ್ನ ನಿಯೋಜಿಸುವಂತೆ ಸಂಘಟನೆ ಮನವಿಯಲ್ಲಿ ಆಗ್ರಹಿಸಿದೆ.
ಇದನ್ನೂ ಓದಿ-https://suddilive.in/archives/1034
