ಸ್ಥಳೀಯ ಸುದ್ದಿಗಳು

ಗದ್ದುಗೆ ನಾಶಪಡಿಸಿದವರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ

ಸುದ್ದಿಲೈವ್/ಶಿವಮೆಗ್ಗ

ಹಾರ್‍ನಹಳ್ಳಿ ಗ್ರಾಮದ ಶ್ರೀ ರಾಮಲಿಂಗೇಶ್ವರ ಮಠದಲ್ಲಿರುವ ಹಿರಿಯ ಸ್ವಾಮಿಜಿಗಳ ಗದ್ದುಗೆಯನ್ನು ನಾಶಪಡಿಸಿ ಮಠದ ಸ್ವತ್ತುಗಳನ್ನುಕೆಲವು ಕಿಡಿಗೇಡಿಗಳು ಅಪಹರಿಸಿದ್ದಾರೆ ಎಂದು ಆರೋಪಿಸಿ ಇಂದು ಹಾರ್‍ನಹಳ್ಳಿ ಗ್ರಾಮಸ್ಥರು ಮತ್ತು ಮಠದ ಭಕ್ತ ವೃಂದ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.

ನ.೨೫ ರಂದು ಮಧ್ಯಾಹ್ನ ೨ಗಂಟೆಯ ಸಮಯದಲ್ಲಿ ಹಾರ್‍ನಹಳ್ಳಿ ಗ್ರಾಮದ ಶ್ರೀ ರಾಮಲಿಂಗೇಶ್ವರ ಮಠದ ಮಠಾಧೀಪತಿಯವರು ಇಲ್ಲದ ಸಂದರ್ಭದಲ್ಲಿ ಬೆಂಗಳೂರಿನಿಂದ ಬಂದ ಕೆ.ಆರ್. ವಿಶ್ವನಾಥ್, ಉಮೇಶ್, ಇಂಡುವಳ್ಳಿ ದೇವರಾಜ್, ವಿರೇಂದ್ರಯ್ಯ ಶಿವಕುಮಾರ್, ಹೇಮಣ್ಣ, ಹುಚ್ಚುರಾಯಪ್ಪ, ಸಂಜೀವ ಹಾಗೂ ಇವರೊಂದಿಗೆ ೨೦ ಜನರ ತಂಡ ಏಕಾಏಕಿ ಮಠದೊಳಗೆ ಪ್ರವೇಶ ಮಾಡಿ, ಹಿಂದಿನ ಗುರುಗಳ ಪೋಟೋ ಹೊಡೆದುಹಾಕಿ, ೩ ಗಾಡ್ರೇಜ್ ಬೀರುಗಳನ್ನು ಕಬ್ಬಿಣದ ಸಲಾಕೆಯಿಂದ ಹೊಡೆದು, ಅದರಲ್ಲಿದ್ದ ೮೦೦ ಗ್ರಾಂನಷ್ಟು ಬೆಳ್ಳಿಯ ಪೂಜ ಸಾಮಾಗ್ರಿಗಳು ಹಾಗೂ ಮಠಕ್ಕೆ ಸೇರಿದ ಎಲ್ಲಾ ದಾಖಲಾತಿಗಳನ್ನು ದೋಚಿಕೊಂಡು ಹೋಗಿದ್ದಾರೆ.

ಅಲ್ಲದೇ ಮಠದ ಆವರಣದಲ್ಲಿ ಶ್ರೀರಾಮಲಿಂಗೇಶ್ವರ ದೇವಸ್ಥಾನದ ಬಾಗಿಲು ಮುರಿದು, ಒಳಗಡೆ ಇದ್ದ ದೇವರ ಪ್ರತಿಮೆಯನ್ನು ಧ್ವಂಸಗೊಳಿಸಿದ್ದಾರೆ. ಹಾಗೂ ಪಕ್ಕದ್ದಲ್ಲಿದ್ದ ಹಿಂದಿನ ಗುರುಗಳು ಲಿಂಗೈಕ್ಯರಾದ ಸಮಾಧಿಯನ್ನು ಚಮಟಿಯಿಂದ ಹೊಡೆದು ದ್ವಂಸಗೊಳಿಸಿದ್ದಾರೆ ಎಂದು ರಾಮಲಿಂಗೇಶ್ವರ ಮಠದ ಭಕ್ತವೃಂದ ಹಾಗೂ ಗ್ರಾಮಸ್ಥರು ದೂರಿನಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಅಲ್ಲಿಗೆ ಹೋಗಿದ್ದ ಮಠದ ಪಕ್ಕದ ಜಮೀನಿನ ಮಾಲೀಕರು ಹಾಗೂ ಹಿತೈಷಿಗಳಾದ ದುರುಗೊಜಪ್ಪ ಹೋಗಿ ವಿಚಾರಿಸಿದಾಗ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ, ಜೀವ ಬೆದರಿಕೆಯೊಡ್ಡಿ ಮಚ್ಚು ತೋರಿಸಿ ಬೆದರಿಸಿದ್ದಾರೆ. ಅಷ್ಟ್ರರಲ್ಲಿ ಗ್ರಾಮದ ಹಲವು ಮುಖಂಡರು ಸ್ಥಳಕ್ಕೆ ಬಂದಿದ್ದಾರೆ. ಮಾತಿನ ಚಕಮಕಿ ನಡೆದು ಬಂದವರು ಪರಾರಿಯಾಗಿದ್ದಾರೆ. ಈ ಸಂಬಂಧ ಕೆ.ಆರ್. ವಿಶ್ವನಾಥ್, ಶಿವಕುಮಾರ್ ತಂಡದ ೨೦ ಜನರು ಹಾರ್‍ನಹಳ್ಳಿ ಗ್ರಾಮದಲ್ಲಿ ಭಯೋತ್ಪಾದಕರಂತೆ ವರ್ತಿಸಿದ್ದು, ಊರಿನಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣಕ್ಕೆ ಕಾರಣರಾಗಿದ್ದು, ಈ ಬಗ್ಗೆ ಕೂಡಲೇ ತನಿಖೆ ತೀವ್ರಗೊಳಿಸಿ ಸಂಬಂಧಪಟ್ಟವರ ಮೇಲೆ ಕಾನೂನು ರೀತಿ ಕ್ರಮ ಜರುಗಿಸಿ ಸೂಕ್ತ ರಕ್ಷಣೆ ನೀಡುವಂತೆ ಜಿಲ್ಲಾರಕ್ಷಣಾಧಿಕಾರಿಗಳಿಗೆ ಮನವಿ ನೀಡಿದ್ದಾರೆ.

ಈ ಸಂದರ್ಭದಲ್ಲಿ ಹಾರ್‍ನಹಳ್ಳಿ ಮಠದ ಶಿವಯೋಗಿ ಸ್ವಾಮಿಗಳು, ಜಂಗಮ ಸಮಾಜದ ಪ್ರಮುಖರಾದ ಚಂದ್ರಯ್ಯ, ಕೆ.ಆರ್. ಸೋಮನಾಥ್, ಲೋಕೇಶ್ ದೊಡ್ಡಮಠ, ಮುದುವಾಲ ಜಗದೀಶ್, ಟಿ.ಡಿ. ಸೋಮಶೇಖರ್, ಹೆಚ್.ವಿ. ದುರ್ಗೋಜಿರಾವ್ ಜಯರಾಮ್ ಶೆಟ್ಟಿ, ಚಂದ್ರಶೇಖರಯ್ಯ, ಮಲ್ಲಿಕಾರ್ಜುನಯ್ಯ, ಸುರೇಶ್, ಪ್ರಭು, ರಾಮಚಂದ್ರ ಮೆದಲಾದವರು ಇದ್ದರು.

ಇದನ್ನೂ ಓದಿ-https://suddilive.in/archives/3845

Related Articles

Leave a Reply

Your email address will not be published. Required fields are marked *

Back to top button