ಸ್ಥಳೀಯ ಸುದ್ದಿಗಳು

ಜಗಜ್ಯೋತಿ ಬಸವೇಶ್ವರರ ಹೆಸರಿನಲ್ಲಿ‌ ಮತಯಾಚಿಸುವೆ-ಈಶ್ವರಪ್ಪ

ಸುದ್ದಿಲೈವ್/ಶಿವಮೊಗ್ಗ

ನಾನು ಪಕ್ಷೇತರ ಅಭ್ಯರ್ಥಿ ಆಗಿ ಸ್ಪರ್ಧೆ ಮಾಡುತ್ತೇನೆ. ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಮಾಜಿ ಡಿಸಿಎಂ ಈಶ್ವರಪ್ಪ ಪುನರುಚ್ಚರಿಇದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿ,  ತಂದೆ ಮಕ್ಕಳ ಕೈಗೆ ಪಕ್ಷ ಸಿಕ್ಕಿದೆ. ಇದರಿಂದ ಕಾರ್ಯಕರ್ತರು ಪರದಾಡುತ್ತಿದ್ದಾರೆ. ಪಕ್ಷ ಉಳಿಸಲು ನನ್ನ ಈ ಹೋರಾಟ ಫಿಕ್ಸ್ ಆಗಿದೆ.ರಾಜ್ಯಾಧ್ಯಕ್ಷ ಸ್ಥಾನ ಲಿಂಗಾಯತರಿಗೆ ಕೊಟ್ಟಿದ್ದರೆ ಯತ್ನಾಳ್ ಇದ್ದರು ಕೊಡಬಹುದಿತ್ತು ಎಂದು ತಿಲಿಸಿದರು.

ಒಕ್ಕಲಿಗರಿಗೆ ಕೊಡುವುದಾದರೆ ಸಿ ಟಿ ರವಿ ಇದ್ದರು. ಹಿಂದುಳಿದ ವರ್ಗದವರಿಗೆ ಕೊಡುವುದಾದರೆ ನನಗೆ ಕೊಡಬಹುದಿತ್ತು. ಪಕ್ಷ ಸಂಘಟನೆ ವಿಚಾರಕ್ಕೆ ಇವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಬೇಕಿತ್ತು. ಆದರೆ ಅದು ಬಿಟ್ಟು ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿದರು.

ನಾನು ಹಿಂದುತ್ವದ ವಿಚಾರ ದ ಮೇಲೆ ಚುನಾವಣೆ ಮಾಡುತ್ತೇನೆ. ರಾಘವೇಂದ್ರ ಲಿಂಗಾಯತ ಅಂತಾ ಚುನಾವಣೆ ಮಾಡುತ್ತಾರೆ. ಅವರು ಲಿಂಗಾಯತರಿಗೆ ಏನು ಕೊಟ್ಟಿದ್ದಾರೆ.ಅವರಿಗೆ ಮಾತ್ರ ಲಿಂಗಾಯತರು ಸೀಮಿತ ಆಗಿಲ್ಲ.ನಮ್ಮ ಜೊತೆ ಕೂಡಾ ಈ ಸಮಾಜ ಇದೆನಾನು ಪಕ್ಷೇತರ ಅಭ್ಯರ್ಥಿ ಘೋಷಣೆ ಬಳಿಕ ರಾಜ್ಯಾದ್ಯಂತ ಬೆಂಬಲ ಸಿಗುತ್ತಿದೆ ಎಂದರು.

ರಾಜ್ಯದ ವಿವಿಧ ಭಾಗಗಳಿಂದ ಬಂದು ಜನರು ಶಿವಮೊಗ್ಗ ಲೋಕಸಭೆ ಚುನಾವಣೆ ಮಾಡುತ್ತಾರೆ. ನಿನ್ನೆ ಸಭೆಯ ಬಳಿಕ ಉತ್ತಮ ಬೆಂಬಲ ಎಲ್ಲಡೆ ಯಿಂದ ಸಿಗುತ್ತಿದೆ. ಅಧಿಕೃತ ಚುನಾವಣೆ ಪ್ರಚಾರ. ಎರಡು ಮೂರು ದಿನದಲ್ಲಿ ಆರಂಭಿಸುತ್ತೇನೆ. ನಿನ್ನೆ ಇಷ್ಟೊಂದು ಜನರು ಸಭೆಯಲ್ಲಿ ಸೇರುತ್ತಾರೆ ಎನ್ನುವ ನಿರೀಕ್ಷೆ ಇರಲಿಲ್ಲ ಎಂದರು.

ದೊಡ್ಡ ಸಂಖ್ಯೆಯಲ್ಲಿ ಜನರು ಬೆಂಬಲಿಗರು ಸೇರಿದ್ದು ನನಗೆ ಪ್ರೇರಣೆ ಆಯ್ತು ಅವರ ಅಭಿಪ್ರಾಯ ಹಿನ್ನಲೆಯಲ್ಲಿ ನಾನು ಚುನಾವಣೆ ಸ್ಪರ್ಧಿಸುತ್ತಿದ್ದೇನೆ. ನನಗೆ ಚುನಾವಣೆ ನಿಲ್ಲಲು ಮೊದಲಿನಿಂದ ಒತ್ತಡ ಇತ್ತು. ರಾಜ್ಯ. ಬಿಜೆಪಿ ಬಿಎಸ್ ವೈ ಮತ್ತು ಅವರ ಕುಟುಂಬದ ಮುಷ್ಠಿಯಲ್ಲಿ ಸಿಲುಕಿದೆ.ಆಸಂಘಟನೆಯು ಅವರ ಕೈಯಲ್ಲಿ ಸಿಲುಕಿದೆ ಎಂದು ಮತ್ತೊಮ್ನೆ ಗುಡುಗಿದರು.

ಇದನ್ನು ಸರಿ ಮಾಡಲು ಈ ನಿರ್ಧಾರ ತೆಗೆದುಕೊಂಡಿರುವೆ.ನಾನು ಜಗಜ್ಯೋತಿ ಬಸವಣ್ಣನವರ ಅನುಯಾಯಿ ಆಗಿ ಕ್ಷೇತ್ರದಲ್ಲಿ ಮತ ಕೇಳುತ್ತೇನೆ ಎಂದರು.

ಇದನ್ನೂ ಓದಿ-https://suddilive.in/archives/10804

Related Articles

Leave a Reply

Your email address will not be published. Required fields are marked *

Back to top button