ರಾಜ್ಯ ಸುದ್ದಿಗಳು

ಓರ್ವ ಅಭ್ಯರ್ಥಿ ನಾಮಪತ್ರ ತಿರಸ್ಕೃತ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ ಲೋಕಸಭಾ ಮತಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಏ.20 ರಂದು ನಾಮಪತ್ರಗಳ ಪರಿಶೀಲನೆ ನಡೆದಿದ್ದು ಓರ್ವ ಅಭ್ಯರ್ಥಿಯ ನಾಮಪತ್ರ ತಿರಸ್ಕೃತಗೊಂಡಿದೆ.

ಏ.12 ರಿಂದ 19 ರವರೆಗೆ ಒಟ್ಟು 27 ಅಭ್ಯರ್ಥಿಗಳಿಂದ 38 ನಾಮಪತ್ರಗಳ ಸಲ್ಲಿಕೆಯಾಗಿತ್ತು. ಇಂದು ನಡೆದ ನಾಮಪತ್ರಗಳ ಪರಿಶೀಲನೆ ವೇಳೆ ಆಮ್ ಆದ್ಮಿ ಪಕ್ಷದ ಸುಭಾನ್ ಖಾನ್ ಎಂಬ ಅಭ್ಯರ್ಥಿಯು ಸಲ್ಲಿಸಿದ ನಾಮಪತ್ರವು ತಿರಸ್ಕøತತೊಂಡಿದೆ.

ಹಾಗೂ ಅಖಿಲ ಭಾರತ ಹಿಂದೂ ಮಹಾಸಭಾ ಪಕ್ಷದ ಚಂದ್ರಶೇಖರ್ ಹೆಚ್.ಸಿ ಮತ್ತು ಬಹುಜನ ಮುಕ್ತಿ ಪಾರ್ಟಿಯ ಜಿ.ಜಯದೇವ ಅವರ ನಾಮಪತ್ರಗಳನ್ನು ಮಾನ್ಯ ಮಾಡಿದ್ದು ಪಕ್ಷೇತರ ಅಭ್ಯರ್ಥಿಗಳಾಗಿ ಪರಿಗಣಿಸಲಾಗಿದೆ.

ನಾಮಪತ್ರಗಳ ಪರಿಶೀಲನೆ ನಂತರ 26 ಅಭ್ಯರ್ಥಿಗಳ ನಾಮಪತ್ರಗಳನ್ನು ಮಾನ್ಯ ಮಾಡಲಾಗಿದೆ. ಏ.22 ರಂದು ಉಮೇದುವಾರಿಕೆ ಹಿಂಪಡೆಯಲು ಕಡೆಯ ದಿನವಾಗಿದ್ದು ಮೇ 7 ರಂದು ಮತದಾನ ನಡೆಯಲಿದೆ.

ಇದನ್ನೂ ಓದಿ-https://suddilive.in/archives/13315

Related Articles

Leave a Reply

Your email address will not be published. Required fields are marked *

Back to top button