ಸ್ಥಳೀಯ ಸುದ್ದಿಗಳು

ಹಿಂದೂ ಹುಲಿ ಈಶ್ವರಪ್ಪನವರ ಫೊಟೊ ತೆಗೆದ ಜಿಲ್ಲಾ ಬಿಜೆಪಿ

ಸುದ್ದಿಲೈವ್/ಶಿವಮೊಗ್ಗ

ಇದು ವರೆಗೂ ಬಿಜೆಪಿ ಕಚೇರಿಯ ಫ್ಲೆಕ್ಸ್ ನಲ್ಲಿ ರಾರಾಜಿಸುತ್ತಿದ್ದ ಮಾಜಿ ಡಿಸಿಎಂ ಈಶ್ವರಪ್ಪ ಅವರ ಫೊಟೊವನ್ನ ಕೈಬಿಡಲಾಗಿದೆ. ಬ್ಯಾನರಿನ್ನೇ ಬದಲಾಯಿಸಲಾಗಿದೆ.

ಮಾಜಿ ಡಿಸಿಎಂ ಈಶ್ವರಪ್ಪ ಪಕ್ಷೇತರರಾಗಿ ಸ್ಪರ್ಧಿಸುವುದಾಗಿ ಹೇಳಿದರೂ ಕಚೇರಿಯ ಪಕ್ಷದ‌ ಫ್ಲೆಕ್ಸ್ ನಲ್ಲಿ ಅವರ ಫೋಟೊ ರಾರಜಿಸುತ್ತಿತ್ತು. ನಾಮಪತ್ರ ಸಲ್ಲಿಕೆಯ ಕೊನೆಯ ದಿನದ ವರೆಗೂ ಫ್ಲೆಕ್ಸ್ ನಲ್ಲಿ ರಾರಾಜಿಸಿದೆ.

ಇಂದು ಬೆಳಿಗ್ಗೆ ಫ್ಲೆಕ್ಸ್ ನ್ನೆ ಬದಲಾಯಿಸಲಾಗಿದೆ. ಫ್ಲೆಕ್ಸ್ ನಲ್ಲಿ ಮಾಜಿ ಡಿಸಿಎಂ ಹಾಗೂ ಹಿಂದೂ ಹುಲಿ ಈಶ್ವರಪ್ಪನವರ ಫೊಟೊವನ್ನ ಕೈಬಿಡಲಾಗಿದೆ. ಇದರಿಂದ ಅವರನ್ನ ಪಕ್ಷದಿಂದ ಉಚ್ಚಾಟಿಸುವ ಸಂದೇಶವನ್ನ ಪಕ್ಷ ರವಾನಿಸುತ್ತಿರುವ ಶಂಕೆ ವ್ಯಕ್ತವಾಗಿದೆ.

Related Articles

Leave a Reply

Your email address will not be published. Required fields are marked *

Back to top button