ಸ್ಥಳೀಯ ಸುದ್ದಿಗಳು

ನಾಳೆ ರಾಷ್ಟ್ರಭಕ್ತ ಬಳಗದಿಂದ ಪ್ರತಿಭಟನೆ-ಸುರ್ಜೇವಾಲರ ಕ್ರಮ‌ ಸಿಎಂ ಡಿಸಿಎಂ ಮೇಲೆ ಯಾಕಿಲ್ಲ-ಈಶ್ವರಪ್ಪ

ಸುದ್ದಿಲೈವ್/ಶಿವಮೊಗ್ಗ

ಬೆಂಗಳೂರು ರಾಮೇಶ್ವರಂ ಬಾಬ್ ಬ್ಲಾಸ್ಟ್, ಹುಬ್ಬಳ್ಳಿ ನೇಹಾ‌ ಹತ್ಯೆ ಹಾಗೂ ಚನ್ನಗಿರಿ ಪ್ರಕರಣಗಳಿಂದ ಕಾಂಗ್ರೆಸ್ ಹಿಂದೂ ವಿರೋಧಿ ಸರ್ಕರವಾಗಿದೆ. ಇದು ಬಹಳ ದಿನ ನಡೆಯಲ್ಲ ಎಂದು ಮಾಜಿ ಡಿಸಿಎಂ ಈಶ್ವರಪ್ಪ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಂಬಿ ಪಾಟೀಲ್ ಹುಬ್ಬಳ್ಳಿ ಪ್ರಕರಣವನ್ನ ಧರ್ಮದ ಲೇಪನ ಮಾಡಬೇಡಿ ಎಂದು ಹೇಳಿದ್ದಾರೆ. ಅವರ ಮಗಳಿಗೆ ಅನ್ಯ ಧರ್ಮಿಯರು ಚಾಕು ಇರಿದಿದ್ದರೆ ಸುಮ್ಮನೆ ಇರ್ತಿದ್ದರಾ? ಪರಮೇಶ್ವರ್ ಸಹ ಪ್ರಕರಣ ತನಿಖೆಗೂ ಮುಂಚೆ ಲವ್ ಎಂದು ಸರ್ಟಿಫಿಕೇಟ್ ನೀಡಿದ್ದಾರೆ ಇಬ್ಬರೂ ಬೇಜವಬ್ದಾರಿ ಸಚಿವರು ಎಂದರು.

ಪ್ರತಿಭಟನೆ ನಾಳೆ ನಡೆಸುತ್ತಿದ್ದೇವೆ. ನಮಗೆ ಅನುಮತಿ ನೀಡುವುದು ಕಷ್ಟ ಎಮಬ ಮಾಧ್ಯಮದ ಪ್ರಶ್ನೆಗೆ ಗರಂ ಆದ ಈಶ್ವರಪ್ಪ ಆಯಿತು ನಾಳೆ ಪ್ರತಿಭಟಿಸುತ್ತೇವೆ ಎಷ್ಟು ಜನಕ್ಕೆ ಅರೆಸ್ಟ್ ಮಾಡ್ತೀರೋ ಮಾಡಿ. ಇದನ್ನ ನಾನು ರಾಜಕೀಯ‌ಲಾಭವಾಗಿ ಯೋಚಿಸುತ್ತಿಲ್ಲ. ಆದರೆ ಕಾಂಗ್ರೆಸ್ ರಾಜಕೀಯ ಲಾಭ ಪಡೆಯುತ್ತಿದೆ. ಸಿಎಂ ದು ಲವ್ ಜಿಹಾದ್ ಅಲ್ಲ ಎನ್ನುತ್ತಿದ್ದಾರೆ. ಇದು ಸರಿಯಲ್ಲ ಎಂದರು.

ಕಾಂಗ್ರೆಸ್ ಮುಸ್ಲೀಂ ಮತಗಳಿಗಾಗಿ ರಾಜಕೀಯ ದುರ್ಲಾಭಪಡೆಯುತ್ತಿದೆ. ನಾಳೆ ನೇಹಾ ಹತ್ಯೆ ಖಂಡಿಸಿ 10 ಗಂಟೆಗೆ ಜೈಲ್ ವೃತ್ತದಿಂದ ಮೆರವಣಿಗೆ ಹೊರಟು ಡಿಸಿ ಕಚೇರಿಗೆ ಮನವಿ ನೀಡಲಾಗುವುದು.‌ರಾಷ್ಟ್ರಭಕ್ತರ ಬಳದಿಂದ ಪ್ರತಿಭಟನೆ ನಡೆಸಲಾಗುವುದು ಎಂದರು.

ಸುರ್ಜೇವಾಲ ಕೊಲೆಯಾದ ತಕ್ಷಣ ಆರೋಪಿಯನ್ನ ಬಂಧಿಸಿದ್ದಾಗಿ ಹೇಳಿದ್ದಾರೆ. ಇದು ಸಮ್ಜಾಯಿಷಿ ಅಲ್ಲ. ಕಲೆಯಾಗದಂತೆ ನೋಡಿಕೊಳ್ಳಿ ಎಂದ ಈಶ್ವರಪ್ಪ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋತರೆ ಕ್ರಮ ಎಂದಿರುವ ಸುರ್ಜೇವಾಲ್ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬೇಡ. ಡಿಸಿಎಂ ಮತ್ತು ಸಿಎಂ ಮೇಲೆ ಕ್ರಮ ಏನು ಎಂದು ಸ್ಪಷ್ಟಪಡಿಸಿ ಎಂದು ಪ್ರಶ್ನಿಸಿದರು.

ಇದನ್ನೂ ಓದಿ-https://suddilive.in/archives/13238

Related Articles

Leave a Reply

Your email address will not be published. Required fields are marked *

Back to top button