ಮುಂಬೈ ಟು ಭದ್ರಾವತಿ-ಇದು ನೊಂದ ಮಹಿಳೆಯ ಕಥೆ

ಸುದ್ದಿಲೈವ್/ಶಿವಮೊಗ್ಗ

ಜೀವನ್ ಸಾಥಿ ಆಪ್ ಮೂಲಕ ಪರಿಚಯವಾದ ಭದ್ರಾವತಿಯ ವ್ಯಕ್ತಿ ಮುಂಬೈ ಮಹಿಳೆಯೊಂದಿಗೆ ಹಲವು ವರ್ಷಗಳ ಕಾಲ ಲೀವಿಂಗ್ ರಿಲೇಷನ್ ಶಿಪ್ ನಲ್ಲಿದ್ದು ದೇವಸ್ಥಾನದಲ್ಲಿ ಮದುವೆಯಾಗಿ, ಹೋಟೆಲ್ ಬ್ಯುಸಿನೆಸ್ ಆರಂಭಿಸಿ ನಂತರ ಮತ್ತೋರ್ವ ಮಹಿಳೆಯೊಂದಿಗೆ ಮದುವೆಯಾದ ವ್ಯಕ್ತಿ ವಿರುದ್ಧ ಎರಡನೇ ಪತ್ನಿ ಶಿವಮೊಗ್ಗದ ಮಹಿಳಾ ಠಾಣದಲ್ಲಿ ದೂರುದಾಖಲಿಸಿದ್ದಾರೆ.
ಮುಂಬೈನ 36 ವರ್ಷದ ಮಹಿಳೆಗೆ ಈ ಹಿಂದೆ ಮದುವೆಯಾಗಿತ್ತು. ಮೊದಲನೆ ಗಂಡನ ಜೊತೆ ಸಂಸಾರ ನಡೆಸಿದ್ದ ಮಹಿಳೆಗೆ ಇಬ್ಬರು ಮಕ್ಕಳಿದ್ದರು. ನಂತರ ಮಹಿಳೆಯು ಆತನೊಂದಿಗೆ ವಿವಾಹ ವಿಚ್ಚೇಧನವನ್ನ ಪಡೆದು ಮುಂಬೈನಲ್ಲಿ ಮಕ್ಕಳಜೊತೆ ಆರಾಮಾಗಿದ್ದರು. ಯಾವಾಗ ಜೀವನ ಸಾಥಿ.ಕಾಂ ನಲ್ಲಿ ಭದ್ರಾವತಿಯ ಯರೆಹಳ್ಳಿ ಸುಣ್ಣದಕೊಪ್ಪದ ನಿವಾಸಿ ಅರುಣ್ ಕುಸೋಜಿ ಎಂಬ 37 ವರ್ಷದ ವ್ಯಕ್ತಿ ಪರಿಚಯವಾಗ್ತಾನೆ ಮಹಿಳೆಯು ಆತನಲ್ಲಿ ಜೀವನ ನಡೆಸುವ ಮತ್ತೊಂದು ಕನಸು ಕಾಣ್ತಾಳೆ.
ಈ ವ್ಯಕ್ತಿಯೂ ಮೊದಲನೇ ಮದುವೆಯಾಗಿ ಪತ್ನಿಗೆ ವಿಚ್ಛೇಧನ ನೀಡಿದ್ದನು. ಭದ್ರಾವತಿಯ ಅರುಣ್ ಕುಸೋಜಿ ಭದ್ರಾವತಿ ಮುಂಬೈ ಎಂದು ಓಡಾಡಿಕೊಂಡು ಇದ್ದ. 2021 ರಲ್ಲಿ ಮಹಾರಾಷ್ಟ್ರದ ತುಳಜಾಪುರದ ಭವಾನಿ ದೇವಸ್ಥಾನದಲ್ಲಿ ಮಹಿಳೆಗೆ ತಾಳಿ ಕಟ್ಟಿದ್ದ ಎಂದು ಎಫ್ಐಆರ್ ನಲ್ಲಿ ಹೇಳಲಾಗಿದೆ. ಒಂದು ಫ್ಲಾಟ್ ಖರೀದಿಸಿ ಆತನೊಂದಿಗೆ ಮುಂಬೈನಲ್ಲಿ ಮೈಸೂರು ದೋಸಾ ಹಬ್ ಎಂಬ ಹೋಟೆಲ್ ಬ್ಯುಸಿನೆಸ್ ಗೆ ಕೈಹಾಕಿದ್ರು.
ಹೋಟೆಲ್ ಸರಿಯಾಗಿ ನಡೆಯದೆ ಲಾಸ್ ಆಗಿತ್ತು. ನಷ್ಟವನ್ನೆಲ್ಲಾ ಮಹಿಳೆಯೇಭರಿಸಿದ್ದಳು. ಒಮ್ಮೆ ಭದ್ರಾವತಿಗೆ ಕರೆದುಕೊಂಡು ಬಂದಿದ್ದ ಅರುಣ್ ತಾಯಿಗೆ ಬ್ಯುಸಿನೆಸ್ ಪಾರ್ಟನರ್ ಎಂದು ಪರಿಚಿಸಿದ್ದ. ತಾಯಿಗೆ ಮಹಿಳೆಯನ್ನ ಮದುವೆಯಾಗಿರುವುದು ತಿಳಿಸಿದೆ ಅರುಣ್ ಈ ರೀತಿ ಮಾಡಿದ್ದಾನೆ ಎನ್ನುತ್ತಾರೆ 36 ವರ್ಷದ ನೊಂದ ಮಹಿಳೆ.
ಭದ್ರಾವತಿ ಟು ಮುಂಬೈ ಓಡಾಡಿಕೊಂಡಿದ್ದ ಅರುಣ್ ಜುಲೈ ತಿಂಗಳಲ್ಲಿ ಬಂದು ಮುಂಬೈನಲ್ಲಿ ನಮ್ಮ ಜೊತೆನೆ ಇದ್ದ ಎಂದು ಮಹಿಳೆ ದೂರಿದ್ದಾಳೆ. ಮೊದಲನೇ ಗಂಡನ ಜೊತೆ ಸಂಸಾರ ಮಾಡಿದ್ದಾಗ ಮಕ್ಕಳಾಗದ ರೀತಿ ಆಪರೇಷನ್ ಮಾಡಿಕೊಂಡ ಮಹಿಳೆಗೆ ಅರುಣ್ ಮತ್ತೆ ಟ್ಯೂಬೋಪ್ಲಾಸ್ಟ್ ಆಪರೇಷನ್ ಮಾಡಿಸಿ ಮಕ್ಕಳನ್ನ ಪಡೆಯುವ ಆಸೆ ಹೊಂದಿದ್ದ. ಆಗ ಈತ ಮೆಡಿಕಲ್ ರಿಪೋರ್ಟ್ ನಲ್ಲಿ ಮಹಿಳೆಯ ಹೆಸರಿನ ಮುಂದೆ ತನನ್ನನ್ನ ಗಂಡ ಎಂದು ಬರೆಸಿದ್ದ ಎಂದು ಮಹಿಳೆ ದೂರಿನಲ್ಲಿ ದಾಖಲಿಸಿದ್ದಾರೆ.
ಯಾವಾಗ ಮತ್ತೊಂದು ಮದುವೆಯಾದ ಅರುಣ್ ತನ್ನ ಮೂರನೇ ಪತ್ನಿಯಿಂದ ಮಹಿಳೆಗೆ ಫೊಟೊ ಕಳುಹಿಸಿದ್ದಾನೆ. ಮೂರನೇ ಮದುವೆಯ ಫೋಟೊವನ್ನ ಮೂರನೇ ಪತ್ನಿಯ ಮೂಲಕವೇ ನನಗೆ ಕಳುಹಿಸಿದ್ದಾನೆ. ಇತ್ತೀಚೆಗೆ ನನ್ನ ಕರೆಗಳನ್ನ ಸ್ವೀಕರಿಸಿ ಸರಿಯಾಗಿ ಮಾತನಾಡದೆ ದೂರ ಇಡಲು ಯತ್ನಿಸಿದ್ದನು ಎನ್ನುತ್ತಾರೆ ಮುಂಬೈ ಮಹಿಳೆ. ನನ್ನನ್ನ ಆರ್ಥಿಕವಾಗಿ ಬಳಸಿಕೊಂಡು ಹಾಗೂ ಆತನ ದಾಹ ತೀರಿಸಿಕೊಳ್ಳಲು ನನ್ನ ಜೊತೆಆಟವಾಡಿ ಮೂರನೇಮದುವೆಯಾಗಿರುವ ಅರುಣ್ ವಿರುದ್ಧ ಕ್ರಮ ಜರುಗಿಸುವಂತೆ ಮಹಿಳೆ ದೂರು ದಾಖಲಿಸಿದ್ದಾರೆ
ಇದನ್ನೂ ಓದಿ-https://suddilive.in/archives/3059
