ಸ್ಥಳೀಯ ಸುದ್ದಿಗಳು

ಆಕಾಶ್ ಬೈಜೂಸ್ ನಿಂದ ವಿದ್ಯಾರ್ಥಿ ವೇತನ

ಸುದ್ದಿಲೈವ್/ಶಿವಮೊಗ್ಗ

ನೀಟ್ ಎಕ್ಸಾಮ್ ಇಂಜಿನಿಯರ್ ಮತ್ತು 7 ರಿಂದ 12 ನೇ ತರಗತಿಓದುತ್ತಿರುವ ವಿದ್ಯಾರ್ಥಿಗಳಿಗೆ ಆಕಾಶ್ ಬೈಜ್ಯೂಸ್ ನಿಂದ ವಿದ್ಯಾರ್ಥಿ ವೇತನ ನೀಡಲು ಯೋಜಿಸಲಾಗಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ವೈದ್ಯಕೀಯ ಎಂಜಿನಿಯರ್ ಮತ್ತು ಫೌಂಡೇಷನ್ ಕೋರ್ಸ್ ಗಳಿಗೆ ಇನ್ ಸ್ಟಂಟ್ ಪ್ರವೇಶ ಮತ್ತು ವಿದ್ಯಾರ್ಥಿ ವೇತನ ಮೌಲ್ಯ ಮಾಪನ ಪಡೆಯಲು IACST ನಿಂದ 90% ರವರಿಗೆ ವಿದ್ಯಾರ್ಥಿ ವೇತನ ನೀಡಲಾಗುವುದು.

ಹುತಾತ್ಮ ಯೋಧರ ಮಕ್ಕಳಿಗೆ ಶೇ.100 ರಷ್ಟು ಬೋದನಾ ಶುಲ್ಕ ವಿನಾಯ್ತಿ ನೀಡಲಾಗುತ್ತಿದೆ. ರಕ್ಷಣ ಸಿಬ್ಬಂದಿ ಸೆಕ್ಯೂರಿಟಿ ಏಜೆನ್ಸಿಗಳು ಮತ್ತು ಭಯೋತ್ಪದನಾ ದಾಳಿಗೆ ತುತ್ತಾದವರ ಮಕ್ಕಳಿಗೆ ಹೆಚ್ಚುವರಿಯಾಗಿ ಶೇ.10 ರಷ್ಟು ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. 2014 ರಿಂದ ಇಲ್ಲಿಯವರೆಗೆ ಈ ಉಪಕ್ರಮದಿಂದ 75 ಸಾವಿರ ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರಯೋಜನ ಪಡೆದಿರುವುದಾಗಿ ಸಂಸ್ಥೆಯ ಬ್ರ್ಯಾಂಚ್ ಮ್ಯಾನೇಜರ್ ಹರ್ಷ ವಿವರಿಸಿದರು.

ಇದನ್ನೂ ಓದಿ-https://suddilive.in/archives/13158

Related Articles

Leave a Reply

Your email address will not be published. Required fields are marked *

Back to top button