ಸ್ಥಳೀಯ ಸುದ್ದಿಗಳು

ಲಿಂಗತ್ವ ಅಲ್ಪಸಂಖ್ಯಾತರಿಗೆ ಮತದಾನದ ಜಾಗೃತಿ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ ಲೋಕಸಭಾ ಚುನಾವಣೆ ಸಂಬಂಧ, ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿರುವ ಲಿಂಗತ್ವ ಅಲ್ಪಸಂಖ್ಯಾತ ಮತದಾರರಿಗೆ ಇಂದು ಪಾಲಿಕೆಯ ಸ್ವೀಪ್ ಸಮಿತಿ ಜಾಗೃತಿ ಮೂಡಿಸಿದೆ.‌

ತೃತೀಯ ಲಿಂಗೀಯರು ಹೆಚ್ಚು ಇರುವ ಕಾರಣ ರಕ್ಷಾ ಸಮುದಾಯದವರ ಸಹಯೋಗದಲ್ಲಿ ಈ ದಿನ ಮತದಾನ ಜಾಗೃತಿ ಕಾರ್ಯಕ್ರಮ ವನ್ನು ಮಹಾನಗರ ಪಾಲಿಕೆಯ ಸ್ವೀಪ್ ತಂಡದಿಂದ ಹಮ್ಮಿಕೊಳ್ಳಲಾಗಿತ್ತು.

ಅವರಿಗೆ ಪಾಸ್ ಇನ್ ದ ಬಾಲ್ ಆಟ ಆಡಿಸುವುದರ ಮೂಲಕ ಹಾಗೂ ಮತದಾನ ಗೀತೆಗಳಿಗೆ ನೃತ್ಯ ಮಾಡುವುದರ ಮೂಲಕ ಜಾಗೃತಿ ಮುಡಿಸಲಾಯಿತು ಮತ್ತು ಪ್ರತಿಜ್ಞಾ ವಿಧಿ ಭೋದಿಸಲಾಯ್ತು.

ಈ ಸಂದರ್ಭದಲ್ಲಿ ಲಿಂಗತ್ವ ಅಲ್ಪಸಂಖ್ಯಾತರು ಹಾಗೂ ಅದರ ಅಧ್ಯಕ್ಷರು ಪ್ಯಾರುದ ರವರು ಮಹಾನಗರ ಪಾಲಿಕೆಯ ನೋಡಲ್ ಅಧಿಕಾರಿ ಅನುಪಮ.ಟಿ.ಆರ್. ಸುಪ್ರಿಯಾ ಹಾಗೂ ಅಧಿಕಾರಿಗಳಾದ ರತ್ನಾಕರ್, ರೇಣು, ಗೀತಾ, ಮತ್ತು ಸಿಬ್ಬಂದಿಗಳು, ಹಾಜರಿದ್ದರು.

ಇದನ್ನೂ ಓದಿ-https://suddilive.in/archives/13055

Related Articles

Leave a Reply

Your email address will not be published. Required fields are marked *

Back to top button