ರಾಜಕೀಯ ಸುದ್ದಿಗಳು

ಬಿಜೆಪಿಯ ಮೊದಲಪಟ್ಟಿ ಪ್ರಕಟ-ಮೊದಲಪಟ್ಟಿಯಲ್ಲಿ ಕರ್ನಾಟಕದ ನಾಯಕರಿಗೆ ಇಲ್ಲ ಆಧ್ಯತೆ

ಸುದ್ದಿಲೈವ್

ಮುಂಬರುವ ಲೋಕಸಭೆ ಚುನಾವಣೆಯಲ್ಲಿ 400 ಸ್ಥಾನ ಪಡೆಯಲು ಹಠ ತೊಟ್ಟಿರುವ ಬಿಜೆಪಿಯು ಮೊದಹಲ ಹಂತದ ಪಟ್ಟಿ ಬಿಡುಗಡೆ ಮಾಡಿದೆ. ಆದರೆ ಕರ್ನಾಟಕದ ನಾಯಕರಿಗೆ ಮೊದಲ ಪಟ್ಟಿಯಲ್ಲಿ ಅವಕಾಶ ಇಲ್ಲದಂತಾಗಿದೆ.‌

195 ಕ್ಷೇತ್ರಗಳಿಗೆ ಟಿಕೆಟ್ ಘೋಷಿಸಲಾಗಿದೆ. ಇಬ್ಬರು ಮಾಜಿ ಸಿಎಂಗಳಿಗೆ ಟಿಕೆಟ್ ನೀಡಲಾಗಿದೆ. ಮೊದಲ ಪಟ್ಟಿಯಲ್ಲಿ 34 ಸಚಿವರು ಹಾಗೂ 28 ಮಹಿಳೆಯರಿಗೆ ಟಿಕೆಟ್ ಘೋಷಿಸಲಾಗಿದೆ.

ಎಸ್ಸಿ ಸಮುದಾಯದ 27 ಅಭ್ಯರ್ಥಿಗಳು ಟಿಕೆಟ್ ನೀಡಲಾಗಿದೆ. ಎಸ್ಟಿ 18,, ಒಬಿಸಿ 58 ಮಂದಿಗೆ ಮೊದಲ ಪಟ್ಟಿಯಲ್ಲಿಯೇ ಘೋಷಿಸಲಾಗಿದೆ. ಉತ್ತರ ಪ್ರದೇಶದ 51 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಅಖೈರುಗೊಳಿಸಲಾಗಿದೆ. ವಾರಣಾಯಿಸಿಂದ ಪ್ರಧಾನಿ ನರೇಂದ್ರ ಮೋದಿ ಸ್ಪರ್ಧೆ ಮಾಡಲಿದ್ದಾರೆ. ಗಾಂಧಿನಗರದಿಂದ ಅಮಿತ್ ಶಾ, ಲಖನೌದಿಂದ ರಾಜನಾಥ್ ಸಿಂಗ್ ಕಣಕ್ಕಿಳಿಯಲಿದ್ದರೆ, ಸುಷ್ಮಾ ಸ್ವರಾಜ್ ಪುತ್ರಿಗೆ ಟಿಕೆಟ್ ನೀಡಲಾಗಿದೆ. ಚಾಂದಿನಿ ಚೌಕ್ ಪ್ರವೀಣ್ ಅವರು ಸ್ಪರ್ಧೆ ಮಾಡಲಿದ್ದಾರೆ. ಉತ್ತರ ಪ್ರದೇಶದ 80 ಸ್ಥಾನಗಳ ಪೈಕಿ 51 ಕ್ಷೇತ್ರಕ್ಕೆ ಘೋಷಣೆ ಮಾಡಲಾಗಿದೆ.

ಗೋವಾ 2, ತ್ರಿಪುರ 1, ಗುಜರಾತ್ 15, ರಾಜಸ್ತಾನ 15, ಕೇರಳ 12 ಸ್ಥಾನಗಳಿಗೆ ಟಿಕೆಟ್ ಘೋಷಿಸಲಾಗಿದೆ. ತೆಲಂಗಾಣ 9, ಛತ್ತೀಸ್ ಘಡ, ಅಂಡಮಾನ್ ನಿಕೋಬಾರ್ -1, ಗೋವಾ – 2 , ಜಮ್ಮು ಕಾಶ್ಮೀರ ಕೆಲ ಕ್ಷೇತ್ರಗಳಿಗೆ
ಪ್ರಕಟಿಸಲಾಗಿದೆ. ದೆಹಲಿ 5 ಕ್ಷೇತ್ರಗಳ ಪೈಕಿ 2 ಕ್ಷೇತ್ರಗಳಿಗೆ ಅಭ್ಯರ್ಥಿ ಹೆಸರು ಘೋಷಣೆ ಮಾಡಲಾಗಿದೆ.

ಭಾರತೀಯ ಜನತಾ ಪಕ್ಷವು ಮುಂಬರುವ ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಶನಿವಾರ ಪ್ರಕಟಿಸಿದೆ. ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಬಿಜೆಪಿ ತನ್ನ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಸಿದ ಕೆಲವು ದಿನಗಳ ನಂತರ ಅಭ್ಯರ್ಥಿಗಳ ಘೋಷಣೆಯಾಗಿದೆ.

ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಮತ್ತೊಂದು ಅವಧಿಯನ್ನು ಬಯಸುವ ಕೆಲವು ಉನ್ನತ ಹೆಸರುಗಳು ಮತ್ತು “ಕಠಿಣ” ಎಂದು ಗ್ರಹಿಸಲಾದ ಸ್ಥಾನಗಳನ್ನು ಒಳಗೊಂಡಿರುವ
ನಿರೀಕ್ಷೆಯಿದೆ. ಮಾ.12 ರ ನಂತರ ಬಿಜೆಪಿಯ ಎರಡನೇ ಪಟ್ಟಿ ಬಿಡುಗಡೆ ಆಗುವ ನಿರೀಕ್ಷೆ ಇದೆ.

ಇದನ್ನೂ ಓದಿ-https://suddilive.in/archives/9944

Related Articles

Leave a Reply

Your email address will not be published. Required fields are marked *

Back to top button