ರಾಜಕೀಯ ಸುದ್ದಿಗಳು

ಮಠಾಧೀಶರು ಮತ್ತು ಕಾರ್ಯಕರ್ತರಿಗೆ ಕಾಂತೇಶ್ ಸ್ಪರ್ಧಿಸುವ ಬಗ್ಗೆ ಅಪೇಕ್ಷೆ ಇದೆ-ಈಶ್ವರಪ್ಪ

ಸುದ್ದಿಲೈವ್/ಶಿವಮೊಗ್ಗ

ಪುತ್ರ ಕಾಂತೇಶ್ ಗೆ ಹಾವೇರಿ ಲೋಕಸಭಾ ಚುನಾವಣೆಯ ಟಿಕೇಟ್ ಗಾಗಿ ಕಾರ್ಯಕರ್ತರು ಮತ್ತು ಮಠಾಧೀಶರ ಅಪೇಕ್ಷೆ ಇದೆ ಎಂದು ಮಾಜಿ ಡಿಸಿಎಂ ಈಶ್ವರಪ್ಪ ತಿಳಿಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿ, ಹಾಗಾಗಿ ಕಾಂತೇಶ್ ಗೆ ಈ ಬಾರಿ ಚುನಾವಣೆಗೆ ಟಿಕೇಟ್ ಲಭಿಸಲಿದೆ ಎಂದರು. ಚುನಾವಣಾ ಸಂದರ್ಭದಲ್ಲಿ ಜಾತಿ ರಾಜಕಾರಣದ ಗುಲ್ಲೆಬ್ಬಿಸುವ ಕುತಂತ್ರವನ್ನ ಕಾಂಗ್ರೆಸ್ ಮಾಡ್ತಿದೆ. ಜಾತಿ ಜನಗಣತಿ ವರದಿ ಸ್ವೀಕಾರ ಮಾಡಿದ್ರು. ಈಗ ದಲಿತ ಸಿಎಂ ಆಗಬೇಕು ಎಂಬ ಕೂಗು ಕೇಳಿ ಬರುತ್ತಿದೆ ಎಂದರು.

ಸಚಿವ ಹೆಚ್.ಸಿ.ಮಹದೇವಪ್ಪ ಚುನಾವಣೆ ಸಂದರ್ಭದಲ್ಲಿ ಮಾತ್ರ ಹೇಳ್ತಾರೆ. ಸರಕಾರ ಬಂದಾಗ ಸಿದ್ದರಾಮಯ್ಯ, ಡಿಕೆಶಿ ನಾನು ಸಿಎಂ ಆಗಬೇಕು ಅಂತಾ ಬಡಿದಾಡಿದ್ರು. ಕಳೆದ ಎರಡು ದಿನಗಳಿಂದ ಡಿಕೆಶಿ ಬೆಂಬಲಿಗರು ಡಿಕೆಶಿ ಸಿಎಂ ಅಂತ ಘೋಷಣೆ ಆರಂಭಿಸಿದ್ದಾರೆ.

ಡಿಕೆಶಿ ಎಲ್ಲಿ ಸಿಎಂ ಆಗಿ ಬಿಡ್ತಾರೋ ಅಂತಾ ಹೆಚ್ ಸಿ ಮಹದೇವಪ್ಪ ದಲಿತ ಸಿಎಂ ಕೂಗು ಎಬ್ಬಿಸಿದ್ದಾರೆ.‌ ಪರಮೇಶ್ವರ ಅವರನ್ನು ಸಿಎಂ ಮಾಡ್ತೀವಿ ಅಂದ್ರೆ ಸಿದ್ದರಾಮಯ್ಯ, ಡಿಕೆಶಿ ಬೆಂಬಲಿಗರು ಮುಂದೆ ಬರುತ್ತಾರಾ? ಕಾಂಗ್ರೆಸ್ ಗುಂಪುಗಾರಿಕೆಯಿಂದ ದಲಿತ ಸಿಎಂ ಮುಂದೆ ತರುತ್ತಿದ್ದಾರೆ. ಇದು ರಾಜ್ಯದ ದಲಿತರಿಗೆ ಮಾಡ್ತಿರುವ ಮೋಸ ಎಂದರು.

ಜಾತಿ ರಾಜಕಾರಣ ಬಿಡಿ, ದಲಿತರ ಮುಖ್ಯಮಂತ್ರಿ ಮಾಡ್ತೀವಿ, ದಲಿತರ ಅಭಿಪ್ರಾಯ ಪಡೆಯುತ್ತೇವೆ ಎಂಬ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಹೇಳಲಿ. ಕಾಂಗ್ರೆಸ್ ಸ್ವಾತಂತ್ರ್ಯ ಬಂದ ದಿನದಿಂದ ದಲಿತ ಸಿಎಂ ಮಾಡ್ತೀವಿ ಅಂತಾ ಹೇಳುತ್ತಲೇ ಬಂದಿದೆ.
ಎಲ್ಲಾ ವರ್ಗದ ಜನರನ್ನ ಬಿಜೆಪಿ ಬೆಂಬಲಿಸುತ್ತಾರೆ. ಮೋದಿ ಮತ್ತೊಮ್ಮೆ ಪ್ರಧಾನಮಂತ್ರಿ ಆಗ್ತಾರೆ ಎಂದರು.

ಚನ್ನಗಿರಿ ಕಾಂಗ್ರೆಸ್ ಶಾಸಕರು ನಮ್ಮ ಸರಕಾರ ಇದೆ ನಮಗೆ ನಾಚಿಕೆ ಆಗ್ತಿದೆ ರಾಜೀನಾಮೆ ಕೊಡ್ತೀವಿ ಅಂತಾರೆ. ಈ ಮಾತನ್ನು ಸಿಎಂ ಡಿಸಿಎಂ ಮುಂದೆ ಹೇಳಲಿ. ತಾಕತ್ ಇದ್ದರೆ ರಾಜೀನಾಮೆ ಕೊಡಿ. ಸುಮ್ಮನೆ ಗೊಂದಲ ಮಾಡುವ ಹೇಳಿಕೆ ಏಕೆ ಕೊಡ್ತೀರಾ? ಪ್ರಚಾರ ತೆಗೆದುಕೊಳ್ಳುವ ಹೇಳಿಕೆ ಕೈಬಿಡಿ ಎಂದು ಬುದ್ದಿವಾದ ಹೇಳಿದರು.

ಸಿದ್ದರಾಮಯ್ಯ ಪುಲ್ವಾಮ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ನಾಜಿ ಡಿಸಿಎಂ, ಕಳೆದ ಬಾರಿ ಪುಲ್ವಾಮ ತೆಗೆದುಕೊಂಡಿದ್ದು ಹೌದು ಅದರಲ್ಲಿ ನಾವು ಯಶಸ್ವಿ ಆಗಲಿಲ್ವಾ, ಈ ಬಾರಿ ರಾಮ ಮಂದಿರ ವಿಷಯ ತಂದಿದ್ದೇವೆ. ರಾಮಮಂದಿರ ಕಟ್ಟಿಲ್ವಾ?
ಸಿದ್ದರಾಮಯ್ಯ ಅವರಿಗೆ ಏಕೆ ಹೊಟ್ಟೆ ಉರಿ ಎಂದು ಪ್ರಶ್ನಿಸಿದರು.

ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದವರ ಪರ ಇದ್ದಾರೆ, ರಾಮೇಶ್ವರ ಕೆಫೆ ಬ್ಲಾಸ್ಟ್ ಆರೋಪಿಗಳ ಬಂಧಿಸದಿದ್ದರೆ, ಸಿದ್ದರಾಮಯ್ಯ ಕೇವಲ ಹೆಸರಿನಲ್ಲಿ ರಾಮನನ್ನು ಇಟ್ಟುಕೊಂಡರೆ ಆಗಲ್ಲ, ಹಿಂದೂ ಭಾವನೆಗಳಿಗೆ ಧಕ್ಕೆಯಾಗದಂತೆ ಕೆಲಸ ಮಾಡುವಂತೆ ಸಲಹೆ ನೀಡಿದರು.

ಲೋಕಸಭಾ ಟಿಕೇಟ್ ಹಂಚಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಸಿದ ಈಶ್ವರಪ್ಪ, ಕಳೆದ ಬಾರಿ 25 ಸ್ಥಾನ ಬಿಜೆಪಿ ಗೆದ್ದಿತ್ತು, ಈ ಬಾರಿ ಜೆಡಿಎಸ್ ಜೊತೆ ಮೈತ್ರಿ ಆಗಿದೆ. 28 ಸ್ಥಾನ ಗೆಲ್ಲುವ ಗುರಿ ಹೊಂದಿದೆ. 28 ಕ್ಷೇತ್ರದಲ್ಲಿ ಉತ್ತಮ ಅಭ್ಯರ್ಥಿ ಮಾಡಿ ಈ ಬಾರಿ ಕಾಂಗ್ರೆಸ್ ಗೆ ಮುಖಭಂಗ ಆಗಲಿದ.‌ ಆ ನಿಟ್ಟಿನಲ್ಲಿ ಅಭ್ಯರ್ಥಿ ಆಯ್ಕೆ ನಡೆಯಲಿದೆ ಎಂದರು.

ಇದನ್ನೂ ಓದಿ-https://suddilive.in/archives/10259

Related Articles

Leave a Reply

Your email address will not be published. Required fields are marked *

Back to top button