ನಗರ‌ ಸುದ್ದಿಗಳು

ಸಂಭ್ರಮದ ರಂಜಾನ್ ಹಬ್ಬ ಆಚರಣೆ

ಸುದ್ದಿಲೈವ್/ಶಿವಮೊಗ್ಗ/ಸಾಗರ

ರಾಜ್ಯಾದ್ಯಂತ ಇಂದು ಈದ್‌ ಉಲ್‌ ಫಿತರ್‌(ರಂಜಾನ್‌) ಹಬ್ಬವನ್ನ ಸಂಭ್ರಮದಿಂದ ಆಚರಿಸಲಾಗುತ್ತಿದ್ದು ಶಿವಮೊಗ್ಗ ಜಿಲ್ಲೆಯಾದ್ಯಂತ ಮುಸ್ಲಿಂ ಸಮುದಾಯದ ವತಿಯಿಂದ ಈದ್‌ ಉಲ್‌ ಫಿತರ್‌(ರಂಜಾನ್‌) ಹಬ್ಬವನ್ನ  ಆಚರಿಸಲಾಗುತ್ತಿದೆ.

ಈದ್ಗಾ ಮೈದಾನದಲ್ಲಿ ಮುಸ್ಲೀಂ ರಿಂದ ಈದ್‌ ಉಲ್‌ ಫಿತರ್‌(ರಂಜಾನ್‌) ಪ್ರಯುಕ್ತ ಸಾಮೂಹಿಕ ಪ್ರಾರ್ಥನೆ ಸಲ್ಲಿಕೆ ಮಾಡಲಾಯಿತು. ಶಿವಮೊಗ್ಗ ಮತ್ತು ಸಾಗರದ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.

ಸಾಗರದಲ್ಲಿ ಮೆರವಣಿಗೆ ಮೂಲಕ ಈದ್ಗಾ ಮೈದಾನಕ್ಕೆ ಆಗಮಿಸಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಶಿವಮೊಗ್ಗದ ಹಲವೆಡೆ ಪ್ರಾರ್ಥನೆ ಸಲ್ಲಿಸಿ ಪರಸ್ಪರ ತಬ್ಬಿಕೊಳ್ಳುವ ಮೂಲಕ ಹಬ್ಬದ ಶುಭಾಶಯಗಳನ್ನ ಹಂಚಿಕೊಳ್ಳಲಾಯಿತು. ಹಬ್ಬಕ್ಕೆ ಯಾವುದೇ ತೊಂದರೆಯಾಗದಂತೆ ಪೊಲೀಸರ ಬೀಗಿ ಬಂದೋಬಸ್ತ್ ನಡೆಸಲಾಗಿದೆ.

ಮೆರವಣಿಗೆಯಲ್ಲಿ ಹಾಗೂ ಈದ್ಗಾ ಮೈದಾನದಲ್ಲಿ ಸಿ ಆರ್ ಪಿ ಎಫ್ ಹಾಗೂ ಪೋಲಿಸ್ ಸಿಬ್ಬಂದಿಗಳ ನಿಯೋಜಿಸಲಾಗಿತ್ತು.

ಇದನ್ನೂ ಓದಿ-https://suddilive.in/archives/12509

Related Articles

Leave a Reply

Your email address will not be published. Required fields are marked *

Back to top button