ಪೋಷಕರಿಂದ ರಕ್ಷಣೆ ಕೋರಿ ಜಿಲ್ಲಾ ರಕ್ಷಣಾಧಿಕಾರಿಗಳ ಕಚೇರಿ ಮೆಟ್ಟಿಲೇರಿದ ಜೋಡಿ ಹಕ್ಕಿಗಳು

ಸುದ್ದಿಲೈವ್/ಶಿವಮೊಗ್ಗ

ಸುಮಾರು ಏಳು ವರ್ಷದ ಪ್ರೀತಿಗೆ ಮೊನ್ನೆ ಕಂಕಣ ಭಾಗ್ಯ ಕೂಡಿ ಬಂದಿದೆ. ಹಿಂದೂ ಜನಾಂಗದಲ್ಲಿ ಇಬ್ಬರದ್ದೂ ಬೇರೆ ಬೇರೆ ಜಾತಿ ಆದರೂ ತಮಿಳುನಾಡಿನಲ್ಲಿ ಇಬ್ಬರ ಮದುವೆಯಾಗಿದೆ. ಇವತ್ತು ಈ ಜೋಡಿ ರಕ್ಷಣೆ ಕೋರಿ ಜಿಲ್ಲಾ ರಕ್ಷಣಾಧಿಕಾರಿಗಳ ಕಚೇರಿ ಮೆಟ್ಟಿಲೇರಿದ್ದರು.
ಜಿಲ್ಲಾ ರಕ್ಷಣಾಧಿಕಾರಿಗಳು ಸಹ ಅವರ ಅರ್ಜಿಯನ್ನ ವಿನೋಬ ನಗರ ಪೊಲೀಸ್ ಠಾಣೆಗೆ ರೆಫರ್ ಮಾಡಿದ್ದಾರೆ. ಇಬ್ಬರೂ ಕಾಶಿಪುರದ ನಿವಾಸಿಗಳು ಹುಡುಗಿ ಮನೆಯಿಂದ ಐದನೇ ಮನೆ ಯುವಕ ಗೋಪಿನಾಥನ ಮನೆ. ಇಬ್ಬರ ನಡುವೆ ಪ್ರೇಮಾಂಕುರವಾಗಿದೆ. ಇವರಿಬ್ಬರ ಪ್ರೀತಿಗೆ ಸಾಕ್ಷಿಯಾಗಿದ್ದು ತಮಿಳು ನಾಡಿನ ದೇವಸ್ಥಾನ.
ಆಗಸ್ಟ್ 15 ರಂದು ದೇವಸ್ಥಾನದಲ್ಲಿ ಸಪ್ತಪದಿ ತುಳಿದ ಜೋಡಿಗಳು ಇಂದು ಎಸ್ಪಿ ಕಚೇರಿಯ ಮೆಟ್ಟಿಲೇರಿದ್ದರು. ಅರ್ಜಿಯೊಂದನ್ನ ನೀಡಿರುವ ಯುವತಿ ಅಪ್ಪನ ಮನೆಕಡೆಯವರಿಂದ ಪತಿ ಗೋಪಿನಾಥ್ ಮತ್ತು ಅವರ ಮನೆಯ ಕಡೆಯವರಿಗೆ ಬೆದರಿಕೆಗಳಿವೆ. ಸೂಕ್ತ ರಕ್ಷೇ ಬೇಕೆಂಬುದು ಅರ್ಜಿಯಲ್ಲಿ ಕೋರಿಕೊಳ್ಳಲಾಗಿತ್ತು.
ಇದೇ ವರ್ಷ ಆಗಸ್ಟ್ 12 ರಂದು ಯುವತಿ ಮಿಸ್ಸಿಂಗ್ ಆಗಿರುವ ದೂರು ಸಹ ವಿನೋಬ ನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆದರೆ ಅ.15 ರಂದು ನವಜೋಡಿ ತಮಿಳುನಾಡಿನ ದೇವಸ್ಥಾನದಲ್ಲಿ ನವಜೀವನಕ್ಕೆ ಕಾಲಿಟ್ಟಿವೆ. 2 ನೇ ವರ್ಷದ ಬಿಎಸ್ಸಿ ಓದುತ್ತಿರುವ ಯುವತಿ ದಿಡೀರ್ ಮನೆಯಿಂದ ನಾಪತ್ತೆಯಾಗಿದ್ದಾಳೆ ಎಂದು ತಂದೆ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರೀತಿಯ ವಿಚಾರದಲ್ಲಿ ಇವರು ಸರಿ ಇವರು ತಪ್ಪು ಎಂದು ಹೇಳುವುದು ತುಸು ಕಷ್ಟನೇ,ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುವ ತಂದೆ ಮತ್ತು ಬೇರೆಡೆ ಕೆಲಸ ಮಾಡಿಕೊಂಡು ಜೀವನ ಸಾಗಿಸುವ ತಾಯಿ ಯಾವ ಕೆಡಕನ್ನ ಬಯಸಲು ಸಾಧ್ಯ?
ಬಹುಶಃ ಪೋಷಕರ ಸಹಜವಾದ ಸಂಕಟ ಇಲ್ಲಿ ಎದ್ದು ಕಾಣುತ್ತದೆ ಬಿಟ್ಟರೆ ದುರುದ್ದೇಶವಿರಲ್ಲವೆಂಬುದು ಮೇಲ್ನೋಟಕ್ಕೆ ಕಾಣುವ ವಿಷಯವಾಗಿದೆ. ಅದರಂತೆ ಕಣ್ಣು ಬಿಡಬೇಕಾದ ನವಜೋಡಿಗೆ ಪೋಷಕರೆ ಅಪಾಯಕಾರಿಯಾಗಿ ಕಾಣಿಸುತ್ತಾರಾ ಎಂಬ ಮಗಳ ಸಹಜ ಆತಂಕ ಸಧ್ಯಕ್ಕೆ ಕಂಡುಬರುತ್ತಿರುವ ದೃಶ್ಯಗಳಿರಬಹುದು ಎನಿಸುತ್ತಿದೆ.
ಇದನ್ನೂ ಓದಿ-https://suddilive.in/archives/1199
