ಕ್ರೈಂ ನ್ಯೂಸ್
ಬೊಲೆರೋ ಮತ್ತು ಬೈಕ್ ನಡುವೆ ಡಿಕ್ಕಿ, ಬೈಕ್ ಸವಾರ ಸಾವು

ಸುದ್ದಿಲೈವ್/ಶಿರಾಳಕೊಪ್ಪ

ಶಿರಾಳಕೊಪ್ಪದಿಂದ ಆನವಟ್ಟಿಗೆ ಹೊರಟಿದ್ದ ಬೈಕ್ ಗೆ ಮತ್ತು ಆನವಟ್ಟಿಯಿಂದ ಶಿರಾಳಕೊಪ್ಪಕ್ಕೆ ಬರುತ್ತಿದ್ದ ಬೊಲೆರೋ ಪಿಕಪ್ ನಡುವೆ ರಸ್ತೆ ಅಪಘಾತ ಸಂಭವಿಸಿದ್ದು, ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸಾವನ್ನಪ್ಪಿದ್ದಾನೆ.
ಸಾವನ್ನಪ್ಪಿದ ಬೈಕ್ ಸವಾರನನ್ನ ಶಿರಾಳಕೊಪ್ಪದ ನಿವಾಸಿ ಆಂಜನೇಯ ಎಂದು ಗುರುತಿಸಲಾಗಿದೆ. ಇನ್ನು ಬೊಲೆರೋ ವಾಹನದಲ್ಲಿದ್ದ ಬರುತ್ತಿದ್ದ ಮೂವರಿಗೂ ಅಪಘಾತದಲ್ಲಿ ಗಾಯಗಳಾಗಿದೆ. ಆದರೆ ಬೊಲೆರೋದಲ್ಲಿದ್ದವರಿಗೆ ಯಾವುದೇ ಪ್ರಾಣ ಹಾನಿ ಸಂಭಬಿಸಿಲ್ಲ.
ನಿನ್ನೆ ಈ ಅಪಘಾತ ಬೆಳ್ಳಿಗಾವಿಯ ಬಳಿ ಸಂಭವಿಸಿದೆ. ಶಿರಾಳಕೊಪ್ಪದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ-https://suddilive.in/archives/1385
