ನಗರ‌ ಸುದ್ದಿಗಳು

ರೈತರ ಸಮಸ್ಯೆ ಮತ್ತು ಬರಗಾಲವನ್ನ ನಿರ್ವಹಿಸುವಲ್ಲಿ ರಾಜ್ಯ ಸರ್ಕಾರ ವಿಫಲ

ಸುದ್ದಿಲೈವ್/ಶಿವಮೊಗ್ಗ

ಬರಗಾಲ ಮತ್ತು ರೈತರ ಸಮಸ್ಯೆಯನ್ನ ನಿರ್ವಹಿಸುವಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜ್ಯೋತಿಪ್ರಕಾಶ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರೈತನಿಧಿ, ರೈತ ಸಮ್ಮಾನ್ ಯೋಜನೆಗೆ ರಾಜ್ಯ ಸರ್ಕಾರ ಕತ್ತರಿಹಾಕಿದೆ. ಶಿವಮೊಗ್ಗ ಲೋಕಸಭಾ ಲ್ಷೇತ್ರದಲ್ಲಿ 39 ಸಾವಿರ ರೈತರಿಗೆ 396 ಸಾವಿರ ಕೋಟಿ ಅನುದಾನವನ್ನ ಕೇಂದ್ರ ಸರ್ಕಾರ ನೀಡಿದೆ. ಯೂರಿಯಾ ಗೊಬ್ವರಕ್ಕೆ ನೀಮ್ ಕೋಟಿಂಗ್ ಮಾಡಿಕೊಡಲಾಗುತ್ತಿದೆ.

ಫಸಲ್ ಭೀಮಾ ಯೋಜನೆಯ ಫಲಾನುಭವಿಗಳಿಗೆ ಉತ್ತಮ ಅನುಧಾನ ಬರುತ್ತಿದೆ. ಗ್ರಾಮ ಪಂಚಾಯಿತಿ 19 ಲಕ್ಷ ಗ್ರಾಮೀಣ ಕುಟುಂಬದಲ್ಲಿ ಬಹುತೇಕ ಮನೆಗಳಿಗೆ ಮನೆ ಮನೆಗಳಿಗೆ ಜಲ ಜೀವನ್ ಯೋಜನೆ ಯಶಸ್ವಿ ನೀಡಲಾಗಿದೆ. ಪ್ರತಿಯೊಂದು ವ್ಯವಸ್ಥೆಯಲ್ಲೂ ಹಣ ಹೆಚ್ಚಿಸಲಾಗಿದೆ.

ವ್ಯಾಪಾರಸ್ಥರಿಗೆ ವ್ಯಾಪಾರಗಳು ಕುಸಿತಗೊಂಡಿದೆ. ಅಭಿವೃದ್ಧಿಗೆ ಹಣನೀಡ್ತಾ ಇಲ್ಲ. ಗ್ಯಾರೆಂಟಿಗೆ ರಾಜ್ಯ ಸರ್ಕಾರ ಹೆಚ್ಚಿನ ಹಣ ವಿನಿಯೋಗವಾಗಲಿದೆ. ರಾಜ್ಯಸರ್ಕಾರದ ಈ ನೀತಿಯಿಧಾಗಿ ರೈತರ ಆರ್ಥಿಕ ಸ್ಥಿತಿಯ ಮೇಲೆ ದುಷ್ಪರಿಣಾಮ ಉಂಟಾಗಿದೆ. ಸರ್ಕಾರ ಮುಂದಿನ ದಿನಗಳಲ್ಲಿ ಇರಬಾರದು‌ ಎಂದು ಜನ ಶಾಪ ಹಾಕುತ್ತಿದ್ದಾರೆ.

ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಅವರು ನಾನು ಕಷ್ಟದದಿನಗಳಲ್ಲಿ ಬಿಜೆಪಿಯನ್ನ ಗೆಲ್ಲಿಸಿದ್ದೇನೆ. ಭದ್ರಾವತಿಗೆ ಕರೆತಂದು ರಾಜಕೀಯವಾಗಿಬಲಿಕೊಡಲಾಯಿತು ಎಂದು ಆರೋಪಿಸಿದ್ದಾರೆ. ಆ ಆರೋಪಗಳು ಸತ್ಯಕ್ಕೆದೂರವಾದುದ್ದು, ಭದ್ರಾವತಿಯಲ್ಲಿ ನಿಂತಿದ್ದಕ್ಕೆ ಅವರು ರಾಜ್ಯಸಭಾ ಸ್ಥಾನ ವಿಧಾನ ಸಭಾ ಸ್ಥಾನ ಪಡೆದಿದ್ದಾರೆ. ಆಯನೂರಿಗೆ ಗೊತ್ತಿರುವಷ್ಟೆ ನನಗೂ ಗೊತ್ತಿದೆ ಎಂದರು.

ಈಶ್ವರಪ್ಪನವರನ್ನ ಪಕ್ಷಕ್ಕೆ ಕರೆತರಲು ಯತ್ನಿಸಲಾಗುತ್ತು. ಈಗ ಅದು ಹೈಮ್ಯಾಂಡ್ ಗೆ ಬಿಟ್ಟ ವಿಚಾರ ಎಂದರು.ಸುದ್ದಿಗೋಷ್ಠಿಯಲ್ಲಿ ಬಿಜೆಪಿಯ ಆರ್ ಕೆ ಸಿದ್ದರಾಮಣ್ಣ, ಭಾನುಪ್ರಕಾಶ್, ಗಿರೀಶ್ ಪಟೇಲ್, ಅಣ್ಣಪ್ಪ, ವಿನ್ಸೆಂಟ್ ರೋಡ್ರಿಗಸ್, ಚಂದ್ರಶೇಖರ್ ಮೊದಲಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ-https://suddilive.in/archives/12287

Related Articles

Leave a Reply

Your email address will not be published. Required fields are marked *

Back to top button