ನಗರ‌ ಸುದ್ದಿಗಳು

ಈಶ್ವರಪ್ಪನವರೇ ಈಗಲೂ ಕಾಲ ಮಿಂಚಿಲ್ಲ, ನಮ್ಮೊಟ್ಟಿಗೆ ಬನ್ನಿ ಎಂದು ಮತ್ತೊಮ್ಮೆ ಕರೆ ನೀಡಿದ್ರಾ ರಾಜ್ಯಾಧ್ಯಕ್ಷರು

ಸುದ್ದಿಲೈವ್/ಶಿವಮೊಗ್ಗ

ರಾಜ್ಯದಲ್ಲಿ ನಮ್ಮ ನಿರೀಕ್ಷೆಗೆ ಮೀರಿ ಬಿಜೆಪಿ ಪರ ಒಲವು ಕಾಣ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜೇಂದ್ರ ತಿಳಿಸಿದರು.

ಶಿವಮೊಗ್ಗದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ,  ಮೋದಿ ಜನಪ್ರಿಯತೆ ದಿನೇ ದಿನೆ ಹೆಚ್ಚಾಗ್ತಿದೆ. ಕಾಂಗ್ರೆಸ್ ‌ಪಕ್ಷವನ್ನ ನಿದ್ದೆಗೆಡಿಸಿದೆ. ಕಾಂಗ್ರೆಸ್ ಪಕ್ಷ ಭ್ರಮೆಯಲ್ಲಿತ್ತು. ಮೋದಿ ಐದು ಕೆಜಿ ಅಕ್ಕಿ ಕೊಡ್ತಿದ್ದಾರೆ. ಕೇಂದ್ರ ಸರಕಾರ ಕಿಸಾನ್ ಸಮ್ಮಾನ್ ಕೊಡ್ತಿದೆ. ಮನೆ ಮನೆಯಲ್ಲಿ ‌ಮೋದಿ ಬಗ್ಗೆ ಮಾತನಾಡ್ತಿದ್ದಾರೆ ಎಂದರು.

ಮೋದಿ ಮತ್ತೊಮ್ಮೆ ಪ್ರಧಾನಮಂತ್ರಿ ಆಗಬೇಕು ಅಂತಾ ಹರಸುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ 28 ಸ್ಥಾನ ಬರುತ್ತವೆ ಇದರಲ್ಲಿ ಯಾವುದೇ ಅನುಮಾನ ‌ಇಲ್ಲ.ಕಾಂಗ್ರೆಸ್ ಪಕ್ಷ ದಿಕ್ಕಾಪಾಲಾಗುತ್ತದೆ ಯಾವುದೇ ಸ್ಥಾನ ಗೆಲ್ಲಲ್ಲ.

ಪ್ರಪಂಚದಲ್ಲಿ 8 ನೇ ಅದ್ಬುತ ಏನೆಂದರೆ ರಾಜ್ಯದಲ್ಲಿ ‌ಕಾಂಗ್ರೆಸ್ ಒಂದು ಸ್ಥಾನವನ್ಬೂ ಗೆಲ್ಲಲ್ಲ. ಜನರು ಮೋದಿ ಗ್ಯಾರಂಟಿ ನೋಡ್ತಿದ್ದಾರೆ. ರಾಜ್ಯ ಸರಕಾರದ ಗ್ಯಾರಂಟಿ ನೋಡ್ತಿಲ್ಲ ಎಂದರು.

ಈಶ್ವರಪ್ಪ ಹಿರಿಯರು ಪಕ್ಷ ಕಟ್ಟಲು ನಿಮ್ದು‌ದೊಡ್ಡ ಪಾಲಿದೆ. ಯಾವುದೋ ಪರಿಸ್ಥಿತಿ ಸಂದರ್ಭ ಈ ಸನ್ನಿವೇಶಕ್ಕೆ ತಮ್ಮನ್ನು ದೂಡಿದೆ. ಮೋದಿ ಪ್ರಧಾನಮಂತ್ರಿ ಆಗಲು ಪಕ್ಷದ ಹಿತದೃಷ್ಟಿಯಿಂದ ತಾವು ಕೈಜೋಡಿಸಬೇಕು. ರಾಘವೇಂದ್ರ ಅಭಿವೃದ್ಧಿ ಬಗ್ಗೆ ಜನ ಮಾತನಾಡ್ತಿದ್ದಾರೆ ಎಂದರು.

ರಾಘವೇಂದ್ರ ಈ ಬಾರಿ ಎರಡು ಲಕ್ಷದ ಅಂತರದಲ್ಲಿ ಗೆಲ್ತಾರೆ. ಈಶ್ವರಪ್ಪ ಅವರಿಗೆ ಇನ್ನು ಕಾಲ ಮಿಂಚಿಲ್ಲ. ಕೈ ಜೋಡಿಸಿ ತಮಗೆ ವಿನಂತಿ ಮಾಡ್ತೇನೆ.  ಸಮಸ್ಯೆ ಇದ್ದರೆ ದೆಹಲಿ ನಾಯಕರ ಜೊತೆ ಮಾತನಾಡಿ. ನಾವಂತು ನಿಮ್ಮ ಜೊತೆ‌ ಇರುತ್ತೇನೆ. ನೀವು ಸಹ ನಮ್ಮ ಜೊತೆ ಇರಬೇಕು ಎಂಬುದು ನಮ್ಮ ಆಸೆ ಎಂದರು.

ಪ್ರೀತಂಗೌಡ ಜೊತೆ ಮಾತನಾಡಿದ್ದೇನೆ. ಮೈಸೂರು ಚಾಮರಾಜನಗರ ‌ಜವಾಬ್ದಾರಿ ಕೊಟ್ಟಿದ್ದೇವೆ. ಎಲ್ಲವೂ ಸರಿ ಹೋಗುತ್ತದೆ. ಪ್ರಜ್ವಲ್ ರೇವಣ್ಣ ಹೆಚ್ಚಿನ ಬಹುಮತದಿಂದ ಗೆಲ್ಲುತ್ತಾರೆ. ಪ್ರಧಾನಮಂತ್ರಿ, ಅಮಿತ್ ಶಾ ಇನ್ನು ನಾಲ್ಕೈದು ಬಾರಿ ರಾಜ್ಯಕ್ಕೆ ಪ್ರಚಾರಕ್ಕೆ ಬರುತ್ತಾರೆ ಎಂದರು.

ಯೋಗಿ ಆದಿತ್ಯನಾಥ್ ಸಹ ರಾಜ್ಯಕ್ಕೆ ಪ್ರಚಾರಕ್ಕೆ ಬರುತ್ತಾರೆ. ರಾಜ್ಯ ಸರಕಾರ ಗ್ಯಾರಂಟಿ ಯೋಜನೆ ನಿಲ್ಲಿಸಿದರೆ‌ ನಾವು ಬಿಡಲ್ಲ. ಗ್ಯಾರಂಟಿ ಯೋಜನೆ ಮೇಲೆ ಅಧಿಕಾರಕ್ಕೆ ಬಂದಿದ್ದೀರ ಅದನ್ನು ‌ಮುಂದುವರಿಸಿ ಎಂದರು.

ಬರದ ವಿಚಾರದಲ್ಲಿ ರಾಜ್ಯ ಸರಕಾರ ರೈತರಿಗೆ ಏನು ಮಾಡಿದೆ. ಯಡಿಯೂರಪ್ಪ ಸರಕಾರ ಇದ್ದಾಗ ಸಾಕಷ್ಟು ಅನುದಾನ ಕೊಟ್ಟಿತ್ತು. ನಿಮಗೆ ಏನು ದಾಡಿ ಆಗಿದೆ ಪರಿಹಾರ ಕೊಡಲು? ರೈತರಿಗೆ ಮೊದಲು‌ ಪರಿಹಾರ ಕೊಡಿ. ಕಳೆದ ಬಾರಿಗಿಂತ ರೈತರ ಆತ್ಮಹತ್ಯೆ ‌ಕಡಿಮೆ ಆಗಿದೆ ಅಂತಾರೆ ಹಾಗಾದರೆ ಅದೇ ನಿಮ್ಮ ಸಾಧನೆನಾ ಎಂದು ಸರ್ಕಾರಕ್ಕೆ ಚಾಟಿ ಬೀಸಿದರು.

ಕೇಂದ್ರ ಸರಕಾರದ ಯೋಜನೆ ರಾಜ್ಯದ ಜನರಿಗೆ ಸಿಗಬಾರದು ಅಂತಾ ರಾಜ್ಯ ಸರಕಾರ ದುರುದ್ದೇಶದ ರಾಜಕಾರಣ ಮಾಡ್ತಿದೆ ಎಂದು ದೂರಿದರು.

ಇದನ್ನೂ ಓದಿ-https://suddilive.in/archives/12282

Related Articles

Leave a Reply

Your email address will not be published. Required fields are marked *

Back to top button