ನಗರ‌ ಸುದ್ದಿಗಳು

ಡಿಸಿಸಿ ಬ್ಯಾಂಕ್ ಅಧ್ಯಕ್ಷರ ವಿರುದ್ಧ ಜಿಲ್ಲಾ ಬಿಜೆಪಿಯಿಂದ ಡಿಸಿಗೆ ಮನವಿ

ಸುದ್ದಿಲೈವ್/ಶಿವಮೊಗ್ಗ

ಡಿಸಿಸಿ ಬ್ಯಾಂಕ್ ಚುನಾವಣೆಗೆ ವಿಎಸ್ ಎಸ್ ಎನ್ ನಿಂದ ಕಳುಹಿಸುವ ಡೆಲಿಗೇಷನ್ ಕುರಿತು ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಮತ್ತು ಅಧಿಕಾರಿಗಳು ಹಸ್ತಕ್ಷೇಪ ಮಾಡಿರುವುದಾಗಿ ಆರೋಪಿಸಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ.ಮೇಘರಾಜ್ ಅವರ ನೇತೃತ್ವದಲ್ಲಿ ಡಿಸಿಗೆ ಮನವಿ ನೀಡಿದ್ದಾರೆ.

ಶಿವಮೊಗ್ಗ ತಾಲ್ಲೂಕಿನಲ್ಲಿ ಸುಮಾರು 25 ವಿ.ಎಸ್.ಎಸ್.ಎನ್ (ವ್ಯವಸಾಯ ಸಹಕಾರ ಸಂಘ ನಿಯಮಿತ) ಗಳು ಮತ ಹಾಕಲು ಅರ್ಹತೆ ಪಡೆದಿದ್ದು, ಪ್ರತಿ ವಿ.ಎಸ್.ಎಸ್.ಎನ್ ನಿಂದ ಡೆಲಿಗೇಷನ್ ತರಬೇಕಾಗಿದೆ.

ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಹಾಗೂ ಅಧಿಕಾರಿಗಳು ಅನಗತ್ಯ ಹಸ್ತಕ್ಷೇಪ ಮಾಡಿ, ಪ್ರಭಾವ ಬೀರಿ ಅಧಿಕಾರಿಗಳಿಂದ ವಿ.ಎಸ್.ಎಸ್.ಎನ್ ಸೊಸೈಟಿಯ ಮೇಲೆ ಒತ್ತಡ ಹೇರಿ ನಾವು ಹೇಳಿದವರನ್ನೇ ನೀವು ಡೆಲಿಗೇಷನ್ ಕಳುಹಿಸಬೇಕು, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ನಿಮ್ಮ ಸೊಸೈಟಿಗೆ ಯಾವುದೇ ಅನುದಾನ ಹಾಗೂ ಆರ್ಥಿಕ ಸಹಾಯ ನೀಡುವುದಿಲ್ಲ ಎಂದು ಬೆದರಿಸುತ್ತಿದ್ದಾರೆ.

ಈ ಬಗ್ಗೆ ಜಿಲ್ಲಾಧಿಕಾರಿಗಳು ಜಿಲ್ಲಾ ಸಹಕಾರಿ ಇಲಾಖೆಯ ಡಿ.ಆರ್ (District Register) ಮತ್ತು ಎ.ಆರ್ (Assistant Register) ಗೆ ಸೂಚನೆ ಕೊಟ್ಟು. ಈ ರೀತಿ ಆಗದಂತೆ ಎಚ್ಚರ ವಹಿಸಲು ಮನವಿಯಲ್ಲಿ ಕೋರಿದ್ದಾರೆ.

ಮೇಲಿನ ಹನಸವಾಡಿ, ಸೂಗೂರು, ಹರಮಘಟ್ಟ, ಮಂಡಗಟ್ಟ ಮುಂತಾದ ಸೊಸೈಟಿಗಳಲ್ಲಿ ಅಧ್ಯಕ್ಷರು ಹಸ್ತಕ್ಷೇಪ ಮಾಡಿದ್ದಾರೆ. ಸಮಿತಿ ತಿರ್ಮಾನ ಮಾಡಿದ್ದರು ಅಧ್ಯಕ್ಷರಿಗೆ ಸಹಿ ಹಾಕದಂತೆ ತಾಕೀತು ಮಾಡಿರುವುದಾಗಿ ಆರೋಪಿಸಲಾಗಿದ್ದು, ಆದ್ದರಿಂದ ಡಿಸಿಯವರು ಸೂಕ್ತವಾದ ಸೂಚನೆ ನೀಡುವಂತೆ ಮನವಿಯಲ್ಲಿ ಒತ್ತಾಯಿಸಲಾಯಿತು.

ಇದನ್ನೂ ಓದಿ-https://suddilive.in/archives/10243

Related Articles

Leave a Reply

Your email address will not be published. Required fields are marked *

Back to top button