ಸ್ಥಳೀಯ ಸುದ್ದಿಗಳು

ನೀತಿ ಸಂಹಿತೆ ಜಾರಿ-ಸುದ್ದಿಗೋಷ್ಠಿಯಲ್ಲಿ ಡಿಸಿ ಏನಂದರು?

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದಲ್ಲಿ ಮೇ.7 ರಂದು ನಡೆಯುವ ಚುನಾವಣೆ ಪ್ರಕ್ರಿಯೆಗೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸುದ್ದಿಗೋಷ್ಠಿ ನಡೆಸಿದರು.

ನೋಟಿಫಿಕೇಶನ್ ಏ.12 ಕ್ಕೆ, ನಾಮಪತ್ರ ಸಲ್ಲಿಕೆಯ ಕೊನೆ ದಿನಾಂಕ ಏ.19ಕ್ಕೆ,  ನಾಮಪತ್ರ ಸ್ಕ್ರೂಟಿನಿಗೆ ಏ.20 ಕ್ಕೆ,  ನಾಮಪತ್ರ ಹಿಂಪಡೆಯುವಿಕೆ ಏ.22 ರಂದು  ಮತದಾನ ಮೇ.7 ಚುನಾವಣೆಯ ಫಲಿತಾಂಶ ಜೂ.04 ಜೂ.6 ಕ್ಕೆ ಚುನಾವಣೆ ಸಂಪೂರ್ಣ ಕೊನೆಗೊಳ್ಳಲಿದೆ ಎಂದು ತಿಳಿಸಿದರು.

ಚುನಾವಣೆ ಸ್ಪರ್ಧಿಸುವವರಿಗೆ 25 ಸಾವಿರ ಭದ್ರತಾ ಠೇವಣಿ, ಪರಿಶಿಷ್ಠ ಜಾತಿ ಮತ್ತು ಪರಿಸಿಷ್ಠ ಜಾತಿಗೆ 12,500 ರೂ. ನೀಡಬೇಕು. ಪಕ್ಷದ ಟಿಕೇಟ್ ನಿಂದ ಸ್ಪರ್ಧಿಸುವವರು ಎ ಮತ್ತು ಬಿ ಫಾರಮ್ ನೀಡಬೇಕು. ಅಭ್ಯರ್ಥಿಯ ಚುನಾವಣೆ ವೆಚ್ಚದಲ್ಲಿ 95 ಲಕ್ಷ ರೂ. ಖರ್ಚು ಮಾಡಲು ಅವಕಾಶವಿದೆ. ಚುನಾವಣೆಯಲ್ಲಿ ಸ್ಪರ್ಧಿಸಲು 25 ವರ್ಷ ತುಂಬಿರಬೇಕು ಎಂದರು.

ಮಹಿಳ ಮತದಾರರು ಹೆಚ್ಚು

ಬೈಂದೂರು ಸೇರಿದಂತೆ ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ1729901 ಮತಗಳಿವೆ. 8,52,107 ಗಂಡಸರು, 877761 ಜನ ಮಹಿಳೆಯರು ಮತಚಲಾಯಿಸಲಿದ್ದಾರೆ. ಇದರಿಂದ ಮಹಿಳೆಯರು ಜಿಲ್ಲೆಯಲ್ಲಿ ಹೆಚ್ಚಿನ ಮತದಾರರಿದ್ದಾರೆ.‌ ಸೂಕ್ಷ್ಮ ಮತಗಟ್ಟೆಗಳು 325 ಇವೆ. ಬೈಂದೂರು ಸೇರಿ 2039 ಚುನಾವಣೆ ಮತಗಟ್ಟೆಗಳಿವೆ ಎಂದರು.

ಸಾರ್ವಜನಿಕರು ಸಿ-ವಿಜಿಲ್ ನಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ದೂರುಗಳನ್ನ ಸಲ್ಲಿಸಬಹುದು. 1950 ಟೋಲ್ ಫ್ರೀ ಗೂ ದೂರು ಸಲ್ಲಿಸಬಹುದು. ಓಟ್ಟಾರೆ ಸಮಸ್ಯೆಗಳು ಹಣದ ಆಮಿಷದ ಬಗ್ಗೆ ದೂರು ಸಲ್ಲಿಸಬಹುದು ಎಂದರು.

ಸಮಿತಿ ರಚನೆ

ಜಿಲ್ಲಾ‌ಮಟ್ಟದಲ್ಲಿ ಕೋಡ್ ಆಫ್ ಕಂಡಕ್ಟ್ ಗೆ ಡಿಸ್ಟ್ರಿಕ್ ಮೀಡಿಯಾ ಮಾನಿಟರಿಂಗ್ ಸಮಿತಿ, ಡಿಜಿಟಲ್ ಮೀಡಿಯಾದಲ್ಲಿ ಜಾಹೀರಾತು ಪ್ರಕಟಿಸಲು ಸಮಿತಿ ಅನುಮತಿ ಪಡೆಯಬೇಕಿದೆ. ಸಿಂಗಲ್ ವಿಡಿಯೋ ಸಿಸ್ಟಮ್ ಆರಂಭಿಸಿ ಖಾಸಗಿ ಕಾರ್ಯಕ್ರಮಕ್ಕೆ ಅನುಮತಿ ಪಡೆಯಬೇಕಿದೆ.

ಮದುವೆ, ಮುಂಜಿ ಹೊರತು ಪಡಿಸಿ ಬೇರೆ ಎಲ್ಲಾ ಖಾಸಗಿ ಕಾರ್ಯಕ್ರಮ ನಡೆಸಲು ಈ ಸಿಂಗಲ್ ವಿಂಡೋ ಅನುಮತಿ ಆರಂಭಿಸಲಾಗುವುದು.ಖಾಸಗಿ ಕಾರ್ಯಕ್ರಮದಲ್ಲಿ ರಾಜಕೀಯ ವೇದಿಕೆ ಯಾಗಬಾರದು. ಜಾತ್ರೆಗೆ ಅನುಮತಿ ಪಡೆಯಬೇಕಿದೆ. ಎರಡು ಮೂರು ದಿನಗಳಲ್ಲಿ ತಾಲೂಕಿನಲ್ಲಿ ಸಿಂಗಲ್ ವಿಂಡೋ‌ಅರಂಭಿಸಲಾಗವುದು ಎಂದು ತಿಳಿಸಿದರು.

 ಚೆಕ್ ಪೋಸ್ಟ್ ರಚನೆ

26 ಚೆಕ್ ಪೋಸ್ಟ್ ಗಳನ್ನ ಆರಂಭಿಸಲಾಗುತ್ತಿದೆ. ಇದನ್ನ ಶಿವಮೊಗ್ಗ ಜಿಲ್ಲೆಯಲ್ಲಿರುತ್ತದೆ. ಎಲ್ಲಾ ಚೆಕ್ ಪೋಸ್ಟ್ ಗಳಲ್ಲಿ ಪೊಲೀಸರನ್ನ ನೇಮಿಸಲಾಗುತ್ತಿದೆ. ಲಿಕ್ಕರ್ ಮತ್ತು ಹಣ ಸಾಗಾಣಿಕೆ ತಡೆಯಲು ಈ ಕೇಂದ್ರ ಆಕ್ಟಿವ್ ಆಗಲಿದೆ ಎಂದ ಅವರು ಈ ಬಾರಿ. ಪ್ರತಿ ವಿಧಾನ ಸಭೆ ಚುನಾವಣೆಯಲ್ಲಿ 5 ಪಿಂಕ್ ಮತಗಟ್ಟೆ, ವಿಕಲ ಚೇತನರಿಗೆ ಮತಗಟ್ಟೆ ಆರಂಭಿಸಲಾಗುತ್ತಿದೆ ಎಂದರು.

ನೋಂದಣಿಗೆ ಅವಕಾಶ

ಮತದಾರಪಟ್ಟಿಯಲ್ಲಿ ಸೇರಲು ಮತದಾರರಿಗೆ ಅಬಕಾಶ ನೀಡಲಾಗುವುದು.  ಮತದಾರರು ತಮ್ಮ ಹೆಸರುಗಳನ್ನ ಪರಿಶೀಲಿಸಿಕೊಳ್ಳಬಹುದು. ಏ.19 ರ ತನಕ ಹೊಸ ಮತದಾರರು ಸೇರ್ಪಡೆಗೆ ಅವಕಾಶ ನೀಡಲಾಗಿದೆ ಎಂದರು.

ರಿಟರ್ನಿಂಗ್ ಆಫೀಸರ್ ನೇಮಕ

ಶಿವಮೊಗ್ಗದಲ್ಲಿ ಚುನಾವಣೆ ರಿಟರ್ನಿಂಗ್ ಆಫೀಸರ್ ಆಗಿ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಎಆರ್ ಒ ಆಗಿ ಅಪಾರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ ಅವರನ್ನ ಸೇರಿಸಬಹುದು. ಶಿವಮೊಗ್ಗ ಗ್ರಾಮಾಂತರದಲ್ಲಿ ವಿಶ್ವನಾಥ್ ಪಿ ಮುದಜ್ಜಿಗೆ 9483871646, ಎಆರ್ ಒ ಆಗಿ, ಎಇಆರ್ ಒ ಆಗಿ ತಹಶೀಲ್ದಾರ್ ಗಿರೀಶ್ 805003886, ಭದ್ರಾವತಿಯಲ್ಲಿ ಎಸಿ ಸತ್ಯನಾರಾಯಣ 9008305426, ತಹಶೀಲ್ದಾರ್ ಕೆ.ಅರ್ ನಾಗರಾಜ್ 9980902154, ಶಿವಮೊಗ್ಗ ನಗರಕ್ಕೆ ಪಾಲಿಕೆ ಆಯುಕ್ತ ಮಾಯಣ್ಣ ಗೌಡ-9448045397, ತೀರ್ಥಹಳ್ಳಿಗೆ ಜಿಂ ನ ಉಪಕಾರ್ಯದರ್ಶಿ-1 9480876010, ಶಿಕಾರಿಪುರ ಜಿಪಂನ ಉಪಕಾರ್ಯದರ್ಶಿ ಬಂಗಾರಪ್ಪನವರ್ 9480876001

ಸೊರಬಕ್ಕೆ ಡಯಟ್ ನ ಪ್ರಾಂಶುಪಾಲ ರಾಜೇಶ್ 9731053073, ಸಾಗರದ ರಿಟರ್ನ್ ಆಫೀಸರ್ ಆಗಿ‌ ಯತೀಶ್-9663633894, ಬೈಂದೂರಿನಲ್ಲಿ ಉಡುಪಿಯ‌ಭೂಸೇನಾಧಿಕಾರಿ ಮಂಜುನಾಥ್ 91911024124 ಇವರನ್ನ ನೇಮಿಸಲಾಗಿದೆ ಎಂದರು.‌

ನೀರು ಮಜ್ಜಿಗೆಗೆ ಅವಕಾಶ

ನೀರು ಮತ್ತು‌ಮಜ್ಜಿಗೆ ಬಿಟ್ಟು, ಸಸ್ಯಹಾರ ಊಟಕ್ಕೆ, ಬಾಡೂಟಕ್ಕೆ ಅವಕಾಶವಿಲ್ಲ. ಬಿಜೆಪಿ ಮೋದಿ‌ಕಾರ್ಯಕ್ರಮಕ್ಕೆ ಪಕ್ಷದ ಬಾವುಟ, ನಾಮಫಲಕ ಬ್ಯಾನರ್ ಫ್ಲೆಕ್ಸ್ ಗೂ ನಿರ್ಬಂಧಿಸಲಾಗುತ್ತದೆ ಕಾರ್ಯಕ್ರಮದ ಜಾಗದಲ್ಲಿ ಮಾತ್ರ ಫ್ಲೆಕ್ಸ್ ಗೆ ಅವಕಾಶಕಲ್ಪಿಸಲಾಗಿದೆ. ಇದನ್ನ‌ ಪಕ್ಷಕ್ಕೆ ತಿಳಿಸಲಾಗುತ್ತದೆ. ಬಿಜೆಪಿ ಪಕ್ಷದಿಂದಲೇ ಕಾರ್ಯಕ್ರಮ ನಡೆಯುತ್ತಿದೆ. ಪ್ರೊಟೋಕಾಲ್ ನ್ನ ನಾವು ಪಾಲಿಸಲ್ಲ. ನೀತಿ ಸಂಹಿತೆ ನಮ್ಮಿಂದ ಪಾಲಿಸಲಾಗುವುದು ಎಂದರು.

ಮೋದಿ ಕಾರ್ಯಕ್ರಮಕ್ಕೆ ಸ್ವಯಂ ಪ್ರೇರಿತರಾಗಿ ಜನ ಬರಬೇಕು.  ಬಸ್ಸು, ಮತ್ತು ಇತರೆ ಖಾಸಗಿ ವಾಹನದಲ್ಲಿ ಬಂದರೆ ದೂರು ದಾಖಲಾಗುತ್ತದೆ.

24 ಗಂಟೆಯಲ್ಲಿ ಸರ್ಕಾರಿ ಜಾಗದಲ್ಲಿ ತೆಗೆಯಲಾಗುವುದು. 48 ಗಂಟೆಗಳು ಸಾರ್ವಜನಿಕ ಸ್ಥಳಗಳಲ್ಲಿ 72 ಗಂಟೆಗಳಲ್ಲಿ ಖಾಸಗಿ ಜಾಗದಲ್ಲಿ ಫ್ಲೆಕ್ಸ್ ಬ್ಯಾನರ್ ಬಾವುಟ, ಗೋಡೆ ಬರಹ ಮೊದಲಾದವುಗಳನ್ನ  ತೆಗೆಸಲಾಗುವುದು. ಸ್ಥಳದಲ್ಲಿ ಬಾವುಟ ಮೊದಾದ ಪ್ರದರ್ಶನಗಳು ಕಂಡು ಬಂದರೆ ಪಕ್ಷದ ಕರ್ಚಿಗೆ ಸೇರಿಸಲಾಗುತ್ತದೆ.

50 ಸಾವಿರ ರೂಗಿಂತ ಹೆಚ್ಚಿನ ಹಣ ಕ್ಯಾರಿ ಮಾಡುವ ಹಾಗಿಲ್ಲ

ಸಾರ್ವಜನಿಕರು 50 ಸಾವಿರಕ್ಕಿಂತ ಹೆಚ್ಚು ಹಣ ತೆಗೆದುಕೊಂಡುಬಹೋಗುವವರಿಗೆ ಸೂಕ್ತ ದಾಖಲೆಗಳನ್ನ ಹಾಜರಿ ಪಡಿಸಬೇಕು. 10 ಲಕ್ಷಕ್ಕೂ ಹೆಚ್ಚು ಹಣ ಪತ್ತೆಮಾಡಿದರೆ ಇನ್ ಕಂ ಟ್ಯಾಕ್ಸ್ ತಪಾಸಣೆ ಇರುತ್ತದೆ. ಯಾವುದೆ ಪ್ರತಿಭಟನೆ, ಅನೌನ್ಸ್ ಮೆಂಟ್ ಗೆ ಅವಕಾಶವಿರುವುದಿಲ್ಲ. 10 ಸಾವಿರಕ್ಕೂ ಹೆಚ್ಚು ಸಿಬ್ವಂದಿಗಳನ್ನ ನೇಮಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

1500 ರೌಡಿಶೀಟರ್ ಗಳಿಗೆ ಎಚ್ಚರಿಕೆ

ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಮಾತನಾಡಿ, 3000 ಕ್ಕೂ ಹೆ್ಚು ಗೃಹರಕ್ಷಕದಳ, ಪೊಲೀಸ್ ಇರ್ತಾರೆ. ಆರ್‌ಎಎಫ್ ಗಳನ್ನ ಬಳಸಿಕೊಳ್ಳಲಾಗುತ್ತಿದೆ 1500 ಹೆಚ್ಚುಜನ ರೌಡಿಶೀಟರ್, ಗಳಿಗೆ ಪ್ರಿವೆಂಟಿವ್ ಕೇಸಸ್ ನಲ್ಲಿ ಕ್ರಮಕೈಗೊಳ್ಳಲಾಗುವುದು. ಬಂದೂಕು ಇಟ್ಟುಕೊಳ್ಳಲು ಜಿಲ್ಲಾಧಿಕಾರಿಗಳ ಸಮಿತಿ ಮುಂದೆ ಹಾಜರಾಗಬೇಕಾಗುತ್ತದೆ.

26 ಕಮ್ಯೂನಲ್ ಕೇಸಸ್ ಗಳನ್ನ ಸುಮೋಟೋ ಮಾಡಿಕೊಳ್ಳಲಾಗುವುದು. ಮುಂಜಾಗೃತ ಕ್ರಮವನ್ನೆಲ್ಲಾ ತೆಗೆದುಕೊಳ್ಳಲಾಗಿದೆ. ಚುನಾವಣೆಯನ್ನ ಶಾಂತಿ ಸುವ್ಯವಸ್ಥೆಯಲ್ಲಿ ನಡೆಸಲಸಗುವುದು‌ ಎಂದರು.

ಇದನ್ನೂ ಓದಿ-https://suddilive.in/archives/10847

Related Articles

Leave a Reply

Your email address will not be published. Required fields are marked *

Back to top button