ಸ್ಥಳೀಯ ಸುದ್ದಿಗಳು

ಮೇ.07 ದು ಶಿವಮೊಗ್ಗದಲ್ಲಿ ಮತದಾನ

ಸುದ್ದಿಲೈವ್/ಶಿವಮೊಗ್ಗ

ದೇಶದಲ್ಲಿ 7 ಹಂತದಲ್ಲಿ ಚುನಾವಣೆಯನ್ನ‌ ಚುನಾವಣೆ ಆಯೋಗ ಘೋಷಿಸಿದ್ದು, ಕರ್ನಾಟಕದಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆಸಲು ಆಯೋಗ ಪ್ರಕಟಿಸಿದೆ.

95 ಕೋಟಿ ದೇಶದಲ್ಲಿ ಮತದಾರರು ಈ ಬಾರಿ 2024 ರ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಲಿದ್ದಾರೆ. ಜೂ.4 ರಂದು ದೇಶಾದ್ಯಂತ ಫಲಿತಾಂಶ ನಡೆದಿದೆ. ಕರ್ನಾಟಕದ 28 ಕ್ಷೇತ್ರದಲ್ಲಿ ಮೊದಲ 14 ಕ್ಷೇತ್ರಗಳಾದ ಬೆಂಗಳೂರು, ತುಮಕೂರು, ಹಾಸನ ಚಿತ್ರದುರ್ಗ, ಕೋಲಾರ ಸೇರಿದಂತೆ 14 ಕ್ಷೇತ್ರದಲ್ಲಿ ಚುನಾವಣೆ ನಡೆಯಲಿದೆ.

ಮೇ.7 ರಂದು ಉಳಿದ 14 ಕ್ಷೇತ್ರದಲ್ಲಿ ಉತ್ತರಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದಲ್ಲಿ ಮತದಾನ ನಡೆಯಲಿದೆ. ಅದರಂತೆ ಶಿವಮೊಗ್ಗದಲ್ಲಿ ಮೇ.7 ರಂದು ಮತದಾನ ನಡೆಯಲಿದೆ. 10 ದಿನ ಗ್ಯಾಪ್ ನಲ್ಲಿ ಒಂದು ಮತ್ತು ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿದೆ.

ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗಿದೆ. ಮುಂದಿನ ಎರಡು ವರೆ ತಿಂಗಳ ವರೆಗೆ ನೀತಿ ಸಂಹಿತೆ ಜಾರಿಯಾಗಲಿದೆ.

ಇದನ್ನೂ ಓದಿ-https://suddilive.in/archives/10847

Related Articles

Leave a Reply

Your email address will not be published. Required fields are marked *

Back to top button