ರಾಜಕೀಯ ಸುದ್ದಿಗಳು

ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಹೆಸರು ಬದಲಿಸಲು ಕೆಪಿಸಿಸಿಗೆ ಮನವಿ-ಎಸ್ ಪಿ ದಿನೇಶ್

ಸುದ್ದಿಲೈವ್/ಶಿವಮೊಗ್ಗ

ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿಯ ಹೆಸರು ಘೋಷಣೆಯಾಗಿದ್ದು, ಈ ಬಗ್ಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಎಸ್ ಪಿ ದಿನೇಶ್ ಮತ್ತು ರಂಗಸ್ವಾಮಿ ಗೌಡ ಅಭ್ಯರ್ಥಿಯ ಹೆಸರು ಬದಲಿಸಲು ಕೆಪಿಸಿಸಿ ಅಧ್ಯಕ್ಷ ಮತ್ತು ಡಿಸಿಎಂ ಡಿಕೆಶಿಗೆ ಮನವಿ ಮಾಡಿರುವುದಾಗಿ ತಿಳಿಸಿದರು.

ಈಶ್ವರಪ್ಪನವರಿಗೆ ನನ್ನ ಮತ, ತಾಕತ್ತಿದ್ದರೆ ಸ್ಪರ್ಧಿಸಿ ಎಂದು ಹೇಳುವ ಕೆಪಿಸಿಸಿ ವಕ್ತಾರರು ಒಬಿಸಿ ಮತಗಳು ವಿಭಜನೆಯಾಗುವ ಪ್ರಜ್ಞೆಯಿಲ್ಲದೆ ಮಾತನಾಡಿದ್ದಾರೆ ಎಂದು ದೂರಿದರು.

ಡಿಕೆಶಿ ಗಮನಕ್ಕೆ ಬಾರದೆ ನೈರುತ್ಯ ಪದವೀಧರಕ್ಷೇತ್ರದ ಅಭ್ಯರ್ಥಿಗಳ ಹೆಸರು ಘೋಷಣೆಯಾಗಿರುವುದು ತಿಳಿದುಬಂದಿದೆ. ಡಿಕೆಶಿಗೆ ವಾಟ್ಸಪ್ ನಲ್ಲಿರುವ ಆದೇಶ ಪತ್ರ ನೀಡಿದಾಗ ಅಚ್ಚರಿ ವ್ಯಕ್ತಡಿಸಿದ್ದಾರೆ. ನೋಂದಾಣಿಗೆ ಓಡಾಡಿದ ವ್ಯಕ್ತಿ ಎಂದರೆ ನಾನು ಮತ್ತು ರಂಗಸ್ವಾಮಿ ಗೌಡರಾಗಿದ್ದೇವೆ.

ನೋಂದಣಿ ಅರ್ಜಿಯನ್ನ ಕಳುಹಸದ ಜೆಡಿಎಸ್ ನಿಂದ ವಿಧಾನ ಸಭೆ ಕ್ಷೇತ್ರಕ್ಕೆ ಸ್ಪರ್ಧಿಸಿ ಸೋತಿರುವ ಅಭ್ಯರ್ಥಿಯನ್ನ ಕಾಂಗ್ರೆಸ್ ಪಕ್ಷದ ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿಯಾಗಿರುವುದು ದುರಂತ, ಕಳೆದ ಬಾರಿಯ ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಸಿದ್ದರಾಮಯ್ಯನವರ ವಿರುದ್ಧ ಪ್ರಚಾರ ಮಾಡಿರುವ ಆಯನೂರು ಮಂಜುನಾಥ್ ಈ ಬಾರಿ ಪಕ್ಷ ಬದಲಾಯಿಸಿ ಸ್ಪರ್ಧಿಸಿದ್ದಾರೆ.

ಪದವೀಧರ ಕ್ಷೇತ್ರದ ಬದಲಾವಣೆ ಮಾಡಬೇಕಿದೆ. ಎಐಸಿಸಿ ಬಂದ ಮಾಹಿತಿ ಕೆಪಿಸಿಸಿಯಿಂದ ಮಾಹಿತಿ ನಮಗೆ ಬರಬೇಕು. ಇದು ನೇರವಾಗಿ ಎಐಸಿಸಿಯಿಂದ ಬಂದ ವಾಟ್ಸಪ್ ಆದೇಶ ಕಾಪಿಇದಾಗಿದೆ.

ಕಾಂಗ್ರೆಸ್ ವಿರುದ್ಧ ಮಾತಾಡಿರುವ ಅಭ್ಯರ್ಥಿಗೆ ಕಾಂಗ್ರಸ್ ಮತ ಬರುತ್ತದಾ? ಎಂದು ಪ್ರಶ್ನಿಸಿದ ಎಸ್ ಪಿ. ದಿನೇಶ್, ಈಶ್ವರಪ್ಪನವರನ್ನ ಕಿಚಾಯಿಸಿ ಸ್ಪರ್ಧಿಸುವಂತೆ ಪ್ರಚೋದಿಸಿರುವುದು ಕಾಂಗ್ರೆಸ್ ಪಕ್ಷಕ್ಕೆ ಡ್ಯಾಮೇಜ್ ಆಗುವುದಿಲ್ಲವೇ? ಎಂದು ಪ್ರಶ್ನಿಸಿದರು.

ಸ್ಪರ್ಧೆಯಿಂದ ಹಿಂದಕ್ಕೆ ಸರಿಯುವಂತೆ ಬಿ ಫಾರಂ ನೀಡಿದ ಅಭ್ಯರ್ಥಿಗೆ ಸಿ ಫಾರಂ ನೀಡಿರುವ ಉದಾಹರಣೆಗಳಿವೆ, ಘೋಷಣೆಯಾಗಿ ಅಭ್ಯರ್ಥಿ ಸ್ಪರ್ಧೆಯಿಂದ ಹಿಂದಕ್ಕೆ ಸರಿಸಿದ ಉದಾಹರಣೆಗಳಿವೆ. ನಾನು ಕಾಂಗ್ರೆಸ್ ಲಿಂಗಾಯಿತ. ಪಕ್ಷದಲ್ಲಿ ದುಡಿದ ಬೇರೆಯರಿಗೆ ಟಿಕೇಟ್ ನೀಡಿದರೂ ನನಗೆ ಬೇಸರವಾಗುತ್ತಿಲ್ಲ. ಮೂರು ತಿಂಗಳಿಗೆ ಜಾತ್ರೆ ನಡೆಸಲು ಬಂದವರಿಗೆ ಟಿಕೇಟ್ ನೀಡಿರುವುದು ದುರಂತೆಂದರು. ಟಿಕೇಟ್ ಬದಲಾವಣೆಯ ವಿಶ್ವಾಸವಿದೆ.

ರಂಗಸ್ವಾಮಿ ಗೌಡ ಮಾತನಾಡಿ, ಘೋಷಣೆ ಆದ ಅಭ್ಯರ್ಥಿಯನ್ನ ಮರುಪರಿಶೀಲಿಸಬೇಕು ಎಂದು ಆಗ್ರಹಿಸಿದರು. ಆಯನೂರು, ನನ್ನ ಪರವಾಗಿ ಮತಯಾಚಿಸುವ ಹೇಳಿಕೆ ಬೆಣ್ಣೆಹಚ್ಚುವ ಕೆಲಸವಾಗಿದೆ. ಸ್ವತಂತ್ರ್ಯ ಸ್ಪರ್ಧೆಗೆ ಇನ್ನೂ ಸಮಯವಿದೆ. ಆಯೂರು ಪರ ನಿಲ್ಲುವುದಿಲ್ಲ ಎಂದು ತಮ್ಮ ನಿಲುವು ಸ್ಪಷ್ಟಪಡಿಸಿದರು.

ವಿಶ್ವನಾಥ್ ಕಾಶಿ, ಸತೀಶ್, ಜಗದೀಶ್, ಮಹಲಿಂಗೇಗೌಡ, ಕುಮಾರ್ ಮೊದಲಾದವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ-https://suddilive.in/archives/11557

Related Articles

Leave a Reply

Your email address will not be published. Required fields are marked *

Back to top button