ಕ್ರೈಂ ನ್ಯೂಸ್

ಸ್ವಿಫ್ಟ್ ಮತ್ತು ಬೈಕ್ ನಡುವೆ ರಸ್ತೆ ಅಪಘಾತ

ಸುದ್ದಿಲೈವ್/ಶಿವಮೊಗ್ಗ

ನಗರದ ಹೊರವಲಯದಲ್ಲಿ ಸ್ವಿಫ್ಟ್ ಕಾರೊಂದು ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದ್ದು, ಅಪಘಾತದಲ್ಲಿ ಬೈಕ್ ಸವಾರನಿಗೆ ಗಂಭೀರ ಗಾಯಗಳಾಗಿರುವ ಘಟನೆ ನಡೆದಿದೆ.

ಇಂದು ಮಧ್ಯಾಹ್ನ ಶಿವಮೊಗ್ಗದಿಂದ ಬಾಳೆಹೊನ್ನೂರಿಗೆ ಹೊರಟಿದ್ದ ಸ್ವಿಫ್ಟ್ ಕಾರು ಸಂತೆಕಡೂರಿನ ಬಂಡೇ ಡಾಬ ತಿರುವಿನ ಬಳಿ ಬಂದ ಬೈಕ್ ಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಬೈಕ್ ಸವಾರನಿಗೆ ಗಂಭೀರ ಗಾಯಗಳಾಗಿವೆ.

ಗಂಭೀರ ಗಾಯಗೊಂಡ ವ್ಯಕ್ತಿಯನ್ನ ಶ್ರೀರಾಮ್ ಪುರದ ಜನಾರ್ಧನ್ ಎಂಬ 48 ವರ್ಷ ಎಂದು ಗುರುತಿಸಲಾಗಿದೆ. ಬಂಡೆ ಡಾಬಾದ ರಸ್ತೆಯಿಂದ ಮೈನ್ ರೋಡ್ ಗೆ ಬರುವ ವೇಳೆ ಡಿಕ್ಕಿ ಉಂಟಾಗಿದೆ. ಗಾಯಗೊಂಡ ವ್ಯಕ್ತಿಯನ್ನ ಶಿವಮೊಗ್ಗದ ಆಸ್ಪತ್ರೆಗೆ ಸಾಗಿಸಲಾಗಿದೆ. ತುಂಗನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ-https://suddilive.in/archives/11524

Related Articles

Leave a Reply

Your email address will not be published. Required fields are marked *

Back to top button