ಕ್ರೈಂ ನ್ಯೂಸ್

ಆನ್ ಲೈನ್ ವಂಚನೆ-ಪ್ರಕರಣ ದಾಖಲು

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದಲ್ಲಿ ಗೇಮ್ ಆಪ್ ನಲ್ಲಿ ಹಣ ತೊಡಗಿಸಿದ್ದ ಜನರಿಗೆ ವಂಚನೆಯಾಗಿದೆ ಎಂದು ಆರೋಪಿಸಿ ನಿನ್ನೆ ರಾತ್ರಿ ಇಲಿಯಾಜ್ ನಗರದ ನಿವಾಸಿಗಳು ದೊಡ್ಡಪೇಟೆ ಪೊಲೀಸ್ ಠಾಣೆಯ ಎದುರು ಜಮಾವಣೆಗೊಂಡಿದ್ದರು.

ಮುಂಜಾಗೃತ ಕ್ರಮವಾಗಿ ವಂಚನೆ ಪ್ರಕರಣದಲ್ಲಿ ಯುವತಿಯನ್ನ ವಶಕ್ಕೆ ಪಡೆದುಕೊಳ್ಳಲಾಗಿದೆ. ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಗೇಮಿಂಗ್ ಆಪ್ ನಲ್ಲಿ ಹಣ ಹಾಕಿದವರಿಗೆ ಡಬಲ್ ಆಗಲಿದೆ ಎಂದು ಅನೇಕರು ಹಣ ಹೂಡಿಕೆ ಮಾಡಿದ್ದಾರೆ.

ಆರಂಭದಲ್ಲಿ ಹಣ ಬಂದಿದೆ. ನಂತರದಲ್ಲಿ ಹಣ ಕಳೆದಿದೆ. ಈ ಹಣ ವಂಚನೆ ಪ್ರಕರಣದಲ್ಲಿ ಹಣ ಕಳೆದುಕೊಂಡವರು ಯುವತಿಯ ವಿರುದ್ಧ ದೂರು ನೀಡಲು ಬಂದಿದ್ದರು. ಆನ್ ಲೈನ್ ವಂಚನೆಯ ಪ್ರಯುಕ್ತ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಧ್ಯಕ್ಕೆ ಎರಡು ಲಕ್ಷ ರೂ‌.ಗೂ ಹೆಚ್ಚು ಹಣ ವಂಚೆನೆಯಾಗಿದೆ ಎಂದು ಕೇಳಿ ಬಂದಿದೆ ಆದರೂ ಇದಕ್ಕೂ ಅಧಿಕ‌ ಹಣ ಕಳೆದುಕೊಂಡಿರುವ ಸಾಧ್ಯತೆ ಹೆಚ್ಚು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ-https://suddilive.in/archives/11155

Related Articles

Leave a Reply

Your email address will not be published. Required fields are marked *

Back to top button