ಸ್ಥಳೀಯ ಸುದ್ದಿಗಳು

ಅ.16 ರಂದು ಮಹಿಳಾ ದಸರಾ ಕಾರ್ಯಕ್ರಮ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ಮಹಿಳಾ ದಸರಾ ಕಾರ್ಯಕ್ರಮವನ್ನು ಅ.16 ರಂದು ಸಂಜೆ 05 ಗಂಟೆಗೆ ನಗರದ ಫ್ರೀಡಂ ಪಾರ್ಕ್‍ನಲ್ಲಿ ಆಯೋಜಿಸಲಾಗಿದ್ದು, ವಿವಿಧ ಸಂಘ ಸಂಸ್ಥೆಗಳಿಂದ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮವನ್ನು ಚಲನಚಿತ್ರ ನಟಿ ಪದ್ಮಜಾರಾವ್ ಹಾಗೂ ಕಿರುತೆರೆ ನಟಿ ಸುಷ್ಮಾ ಅವರು ಉದ್ಘಾಟಿಸಲಿದ್ದಾರೆ. ನಗರದ ವಿವಿಧ ಮಹಿಳಾ ಸಂಘಗಳು ಹಾಗೂ ಸ್ಥಳೀಯ ಕಲಾವಿದರಿಂದ ಸಾಂಸ್ಕøತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಶಿವಮೊಗ್ಗ ಮಹಾನಗರ ಪಾಲಿಕೆ ಮಹಿಳಾ ದಸರಾ ಸಮಿತಿ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಹಿಳಾ ದಸರಾ ಅಂಗವಾಗಿ ಅ.09 ರಂದು ವೀರಶೈವ ಕಲ್ಯಾಣ ಮಂದಿರದ ಆವರಣದಲ್ಲಿ ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ, ಲೆಮನ್ & ಸ್ಪೂನ್, ಮ್ಯೂಸಿಕಲ್ ಛೇರ್, ಪಾಸ್ ಇನ್ ದ ಬಾಲ್, ಹಗ್ಗಜಗ್ಗಾಟ, ಫ್ಲೇವುಡ್‍ನೊಂದಿಗೆ ಬಾಲ್ ಬ್ಯಾಲನ್ಸ್, ಸಮೂಹ ಗಾಯನ, ಸಮೂಹ ನೃತ್ಯ ಮುಂತಾದ ಸಾಂಸ್ಕøತಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.

ಇದನ್ನೂ ಓದಿ-https://suddilive.in/archives/1134

Related Articles

Leave a Reply

Your email address will not be published. Required fields are marked *

Back to top button