ರಾಜಕೀಯ ಸುದ್ದಿಗಳು

ಸಂಸದರ ವಿರುದ್ಧ ಮಾತನಾಡದೆ ಸಚಿವರು ಮಾಹಿತಿ ಪಡೆಯಲಿ-ಡಿ.ಎಸ್.ಅರುಣ್

ಸುದ್ದಿಲೈವ್/ಶಿವಮೊಗ್ಗ

ರಾಜ್ಯದಲ್ಲಿ ಎರಡು ಹಂತದ ಚುನಾವಣೆಗೆ ಸಜ್ಜಾಗಿದ್ದೇವೆ. ಈ ವೇಳೆ ರಾಜ್ಯ ಸರ್ಕಾರ‌ ಅಸ್ಥಿತ್ವಜ್ಕೆ ಬಂದ 11 ತಿಂಗಳ ಆಡಳಿತದ ಬಗ್ಗೆ ಸಿಎಂ ಸಿದ್ದರಾಮಯ್ಯ ಮತನಾಡಬೇಕಿದೆ ಎಂದು ಎಂಎಲ್ ಸಿ ಡಿ.ಎಸ್.ಅರುಣ್ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಸರ್ಕಾರ ರೈತ ವಿರೋಧಿ ಸರ್ಕಾರವಾಗಿದೆ. ನಮ್ಮ‌ಮೇಲಿನ ದ್ವೇಷದ ಕಾರಣ ರೈತರಿಗೆ ನೀಡುತ್ತಿರುವ ಕಿಸಾನ್ ಸಮ್ಮಾನ್ ಯೋಜನೆಯ‌ ಅಡಿ ಹಣ ಮತ್ತು ರೈತರ ಮಕ್ಕಳಿಗೆ ಪ್ರೋತ್ಸಾಹ ಧನ, ಹಾಲಿನ ಪ್ರೋತ್ಸಾಹಧನ 217 ಕೋಟಿ ರೂ.ಗಳನ್ನ ತಡೆಹಿಡಿಯಲಾಗಿದೆ ಎಂದರು.

ಎಪಿಎಂಸಿ ಯೋಜನೆಯನ್ನ‌ ಬಿಜೆಪಿ ರದ್ದುಪಡಿಸಿದೆ ಎಂದು ದ್ವೇಷಕ್ಕೆ ರದ್ದು ಮಾಡಲಾಗಿದೆ. ಬರನಿರ್ವಾಹಣೆಯಲ್ಲಿ ವಿಫಲ, ಯಾವುದೇ ಸಚಿವರು ಜಿಲ್ಲೆಗೆ ಹೋಗಲಿಲ್ಲ. ರೈತರ ವಿರೋಧಿ ತನವನ್ನ ಕಾಂಗ್ರೆಸ್ ತೋರಿದೆ.

ದಲಿತ ವಿರೋಧಿಯಾಗಿ ರಾಜ್ಯ ಸರ್ಕಾರ ಹಿರಹೊಮ್ಮಿದೆ. ರಾಮಮಂದಿರ ಉದ್ಘಾಟನೆಯ ವೇಳೆ ಕಾಂಗ್ರೆಸ್ ನಾಯಕರ ಹೇಳಿಕೆ ಹಿಂದೂ ವಿರೋಧಿ ಹೇಳಿಕ ನೀಡಿದರು. ಧರ್ಮದತ್ತಿ ಕಾಯ್ದೆ ಅಡಿಯ ದೇವಸ್ಥಾನದಲ್ಲಿ ಸಂಗ್ರಹವಾದ ಭಕ್ತರ ಹಣದಲ್ಲಿ ಶೇ.10 ರಷ್ಟು ಹಣ ಸರ್ಕಾರಕ್ಕೆ ನೀಡಲು ಹೇಳಿರುವುದು ಹಿಂದೂ ವಿರೋಧಿ ಸರ್ಕಾರವಾಗಿದೆ.

ವಿಧಾನ ಸೌಧದಲ್ಲಿ ಪಾಕಿಸ್ತಾನ್ ಜಿಙದಾಬಾದ್ ಘೋಷಣೆ ಕೂಗಲಾಯಿತು. ಒಪ್ಪಿಕೊಳ್ಳಲು ಸರ್ಕಾರ ಸಿದ್ದವಿಲ್ಲ. ಡಿಜೆಹಳ್ಳಿ, ಜೆಜಿಹಳ್ಳಿ ಗಲಭೆ, ಮುಕೇಶ್ ಮೇಲೆ ಹಲ್ಲೆ ಕಾನೂನು ವ್ಯವಸ್ಥೆ ಹದಗೆಟ್ಟಿದೆ. ಕುಕ್ಕರ್ ಬಾಂಬ್ ತಯಾರಿಸಿದವರು ಅಮಾಯಕರು ಎನ್ನುವುದು. ಇವೆಲ್ಲಾ ಹಿಂದೂ ವಿರೋಧಿ ಸರ್ಕಾರವಲ್ಲವೇ ಎಂದು ಪ್ರಶ್ನಿಸಿದರು.

3.71 ಲಕ್ಷ 41 ಸಾವಿರ ಕೋಟಿ ಹಿಂದಿನ ಬಜೆಟ್ ಕಿಂತ ಹೆಚ್ಚಿನ ಬಜೆ್ ಆಗಿದೆ. ಆದಾಯ ಬರದ ಜಾಗದಲ್ಲಿ ಆದಾಯ ತೋರಿಸಲಾಗಿದೆ. ಬಂಡವಾಳಕ್ಕೆ ಒಂದು ರೂ. ಹಣ ಬರುತ್ತಿಲ್ಲ. ವಿದ್ಯುತ್ ದರ,ಕೆಎಸ್ ಆರ್ ಟಿಸಿ ಬಸ್ ಗಳ ಪ್ರಯಾಣ ದರ ಹೆಚ್ಚಲಾಗಿದೆ. ಕೇಂದ್ರ ಡಿಸೇಲ್ ಕಡಿಮೆ ಮಡಿದೆ. ಗ್ಯಾರೆಂಟಿ ಕೊಟ್ಟಿರುವುದು ಖುಷಿ ಇದೆ. ಆದರೆ ಯಾರಿಗೆ ಕೊಡಬೇಕು ಎಂಬ ಸಾನಾನ್ಯ ಜ್ಞಾನ ಸರ್ಕಾರಕ್ಕೆ ಇಲ್ಲದಿರುವುದು ದುರ್ದೈವ ಸಂಗತಿ.

ಚಿಕ್ಕೋಡಿ ಜಾರಕಿ ಹೊಳೆ, ಬಾಗಕೋಣೆ, ಬೆಳಗಾವಿ, ದಾವಣಗೆರೆ, ಬೆ.ದಕ್ಷಿಣ, ಶಿವಮೊಗ್ಗ ಕಾಂಗ್ರೆಸ್ ಅಭ್ಯರ್ಥಿಗಳು ಕುಟುಂಬ ರಾಜಕಾರಣ ಮಾಡಿಕೊಂಡು ಬಂದಿದ್ದು ಕಾರ್ಯಕರ್ತರಿಗೆ ಬೆಲೆ ಇಲ್ಲದಂತಾಗಿದೆ. ನಮ್ಮ ಜಿಲ್ಲೆಯಲ್ಲಿ ಸಂಸದ ರಾಘವೇಂದ್ರ ನಾಲ್ಕನೇಬಾರಿ ಆಯ್ಕೆ ಬಯಸಿ ಸ್ಪರ್ಧಿಸುತ್ತಿದ್ದಾರೆ. ಗೆಲುವಿನ ವಾತಾವರಣ ಇದೆ ಎಂದರು.

20 ಜನರ ಪಟ್ಟಿಯಲ್ಲಿ ಕೇಂದ್ರದ ನಾಯಕರು ಸರಿಮಾಡುತ್ತಿದ್ದಾರೆ. ನಾನು ಒಳಗೊಂಡಂತೆ ನಾನು ಸಾಮಾನ್ಯ ಕಾರ್ಯಕರ್ತರಾಗಿ ನಂತರ ಎಂಎಲ್ ಸಿ ಆಗಿರೋದು. ಸಚಿವರು ಬೈಯೋದನ್ನ‌ಬಿಟ್ಟು ಅಭಿವೃದ್ಧಿಯ ಲೀಸ್ಟ್ ನ್ನ ಹಾಕಿಕೊಳ್ಳಿ. ಸುಳ್ಳನ್ನ ಹೇಳಬೇಡಿ ಎಂದು ತಿಳಿಸಿದರು.

ಇದನ್ನೂ ಓದಿ-https://suddilive.in/archives/11288

Related Articles

Leave a Reply

Your email address will not be published. Required fields are marked *

Back to top button