ಶಿವಮೊಗ್ಗದಲ್ಲಿ ಹೊನ್ನಾಳಿ ಹುಲಿ, ಯಡಿಯೂರಪ್ಪ ನನ್ನನ್ನ ತಿದ್ದಿ ತೀಡಿದವರು-ರೇಣುಕಾಚಾರ್ಯ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ವಿದ್ಯಾನಗರದಲ್ಲಿ ಭಾನು ಯುವಕರ ಗಣಪತಿ ಪ್ರತಿಷ್ಠಾಪಿಸಿದ ಗಣಪತಿಯ ದರ್ಶನ ಪಡೆಯಲು ಮಾಜಿ ಸಚಿವ ರೇಣುಕಾಚಾರ್ಯ ಭೇಟಿ ನೀಡಿ ಅನ್ನ ಸಂತರ್ಪಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ದೇವರ ದರ್ಶನಕ್ಕೂ ಮೊದಲು ಮಾಧ್ಯಮಗಳಿಗೆ ಮಾತನಾಡಿದ ಮಾಜಿ ಸಚಿವರು ರಾಗಿಗುಡ್ಡದ ವಿಚಾರದಲ್ಲಿ ಕಾಂಗ್ರೆಸ್ ವಿರುದ್ಧ ಗುಡುಗಿದ್ದಾರೆ. ಓಟ್ ಬ್ಯಾಂಕ್ ರಾಜಕಾರಣ ಯಾರೂ ಮಾಡಬಾರದು. ಖಡ್ಗ, ಔರಂಗಜೇಬನ ಚಿತ್ರ ಪ್ರದರ್ಶನ ಸಂಘರ್ಷ ತರುತ್ತೆ. ಜಿಲ್ಲಾಡಳಿತ ಇದನ್ನ ತಡೆಯಬೇಕಿತ್ತು, ಅದನ್ನು ಮಾಡಿಲ್ಲ ಯಾಕೆ ಎಂದು ಪ್ರಶ್ನಿಸಿದರು.
ಮತವಿಭಜನೆ ಮಾಡಲು ಹೊರಟಿದ್ದಾರೆ!
ಮತಗಳನ್ನು ಡಿವೈಡ್ ಮಾಡುವ ಕಾರ್ಯ ನಡೆದಿದೆ. ತಪ್ಪಿತಸ್ಥರನ್ನು ಮುಲಾಜಿಲ್ಲದೆ ಎನ್ ಕೌಂಟರ್ ಮಾಡಬೇಕು. ಕೇವಲ ಬಂಧಿಸಿದರೆ ಸಾಲದು. ತನಿಖಾಧಿಕಾರಿ ಅಮಾನತು ಆಗಬಾರದಿತ್ತು.ಎಸ್ಪಿ ಹೇಳಿಕೆ ನೋಡಿದೆ, ಹಾಗಾದರೆ ಗಲಾಟೆ ಮಾಡಿದವರು ಯಾರು? ಭಯೋತ್ಪಾದನೆ ಮಟ್ಟಹಾಕದಿದ್ದರೆ ಕಷ್ಟವಾದೀತು ಎಂದು ಹೊನ್ನಾಳಿ ಹುಲಿ ಗುಡುಗಿದೆ.
ರಾಜ್ಯಾಧ್ಯಕ್ಷರ ಮೇಲೆ ಗೌರವವಿದೆ. ಯಡಿಯೂರಪ್ಪ ಅವರಂತಹ ನಾಯಕ ದಕ್ಷಿಣ ಭಾರದತದ ಬಿಜೆಪಿಯಲ್ಲಿ ಸಿಗಲಾರರು. ಮೋದಿ ಭಾವಚಿತ್ರ ಹಿಡಿದು ಹೋದರೆ ಮತ ಸಿಗುತ್ತಾ? ಯಡಿಯೂರಪ್ಪ ಅವರಿಗೆ ಮಾತ್ರ ಮತ ಗಳಿಸುವ ಶಕ್ತಿ ಇದೆ. ಯಡಿಯೂರಪ್ಪ ಕಡೆಗೆಣಿಸಿ ರಬ್ಬರ್ ಸ್ಟಾಂಪ್ ರಾಜ್ಯಾಧ್ಯಕ್ಷರು ಬೇಕಾ? ಯಡಿಯೂರಪ್ಪ ಕಣ್ಣೀರಿನಿಂದ ಬಿಜೆಪಿ ನೆಲಕಚ್ಚಿದೆ ಎಂದು ಸ್ವ ಪಕ್ಷದ ವಿರುದ್ಧ ಗುಡುಗಿದ್ದಾರೆ.
ಸೈಕಲ್ಲು, ಬೈಕು ಕಾರು ಮೂಲಕ ಬಿಎಸ್ ವೈ ಪಕ್ಷ ಕಟ್ಟಿದ್ದಾರೆ
ಯಡಿಯೂರಪ್ಪ ಸೈಕಲ್, ಬೈಕ್, ಕಾರು ಮೂಲಕ ಪಕ್ಷ ಸಂಘಟನೆ ಮಾಡಿದವರು. ಯಡಿಯೂರಪ್ಪ ಬಿಟ್ಟು ಬಿಜೆಪಿ ನಿಯಂತ್ರಣ ಮಾಡಿದರೆ ಆಗುತ್ತಾ?ಕೋರ್ ಕಮಿಟಿ ಯಾಕೆ ಬೇಕು, ನಿಮ್ಮ ನಿಯಂತ್ರಣದಲ್ಲಿ ಬಿಜೆಪಿ ಬೇಕಾ ಎಂದು ಹೆಸರು ಹೇಳದೆ ಬಿ.ಎಲ್ ಸಂತೋಷ್ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.
ಯಡಿಯೂರಪ್ಪ ಅವರನ್ನು ಮುಗಿಸಿದರಲ್ವ? ಆತ್ಮಾವಲೋಕನ ಮಾಡಿಕೊಳ್ಳಿ. ಸರ್ವಾಧಿಕಾರಿ ಧೋರಣೆ ಮಾಡಬೇಡಿ. ರಾಜ್ಯಸಭೆ, ವಿಧಾನಪರಿಷತ್ ನೇಮಕ ಆದವರು ಯಾರಿಗೋ ಮಂಡಿಯೂರಿದ್ದಾರೆ. ಹೋರಾಟ ಹಿನ್ನೆಲೆಯಿಂದ ಯಡಿಯೂರಪ್ಪ ಬಂದವರು. ನಾನು ಕೂಡ ಪಾದಯಾತ್ರೆ ಮಾಡಿ ಬಂದವನು. ರಾಜ್ಯದಲ್ಲಿ ಯಡಿಯೂರಪ್ಪ ನಿರ್ಲಕ್ಷಿಸಿದರೆ ಬಿಜೆಪಿ ಇನ್ನಷ್ಟು ನೆಲೆಕಚ್ಚುತ್ತೆ ಎಂದು ಗುಡುಗಿದರು.
ಎಣ್ಣೆಹೊಡ್ಕೊಂಡು ಇರ್ತಿಧ್ದೆ
ಯಡಿಯೂರಪ್ಪ ಒಬ್ಬ ಶಿಲ್ಪಿಯಿದ್ದಂತೆ. ನಾನೊಬ್ಬ ಕಾಡಿನಗಲ್ಲುವಿದ್ದಂತೆ. ನನ್ನನ್ನು ಪರಿವರ್ತನೆ ಮಾಡಿದವರು ಯಡಿಯೂರಪ್ಪ. ಇಲ್ಲಾಂದ್ರೆ ಬೀಡಿ ಸೇದುತ್ತ, ಎಣ್ಣೆ ಹೊಡ್ಕೊಂಡು ಇರ್ತಿದ್ದೆ. ಗುಜರಾತ್ ಮಾದರಿ ಮಾಡಲು ಹೋಗಿ 70 ಜನ ಹೊಸಬರಿಗೆ ಟಿಕೆಟ್ ನೀಡಿದರು. ಜಗದೀಶ್ ಶೆಟ್ಟರ್ ಅಂಥವರನ್ನು ಕಡೆಗೆಣಿಸಿದರು. ಯಡಿಯೂರಪ್ಪ ಎಲ್ಲ ಸಮುದಾಯದವರಿಗೆ ಮೀಸಲಾತಿ ಕೊಡಲು ಹೋಗಿದ್ರು. ಅದಕ್ಕೆ ಬ್ರೇಕ್ ಹಾಕಿದ್ರು. ನಾನು ಬಿಜೆಪಿ ಕಟ್ಟಾಳು, ಕೇಸರಿ- ಹಿಂದುತ್ವ ಎಂದಿಗೂ ಇರುತ್ತೆ ಎಂದು ಪುನರುಚ್ಚರಿಸಿದರು. ಇದರಿಂದ ಪಕ್ಷ ಬಿಡುವ ಗೊಂದಲಕ್ಕೆ ತೆರೆ ಎಳೆದರು.
ಇದನ್ನೂ ಓದಿ-https://suddilive.in/archives/871
