ರಾಜಕೀಯ ಸುದ್ದಿಗಳು

ಸರ್ಕಾರಿ ಜಾಗ ಒತ್ತುವರಿ ವಿಷಯ-ಕಿಮ್ಮನೆ ವಿರುದ್ಧವೇ ಗ್ರಾಪಂ ಸದಸ್ಯನ ಆರೋಪ

ಸುದ್ದಿಲೈವ್/ಶಿವಮೊಗ್ಗ

ತೀರ್ಥಹಳ್ಳಿ ತಾಲೂಕಿನ ಹೊದಲ ಹರಳಾಪುರ ಗ್ರಾಮ ಪಂಚಾಯಿತಿ ಸದಸ್ಯ ವಿನಾಯಕ ಗೌಡ ತಾಲೂಕಿನಲ್ಲಿ ಸರ್ಕಾರಿ ಜಾಗವನ್ನೇ ಮೂವರು ಕಬಳಿಸಿದರೂ ಅರಣ್ಯ ಇಲಾಖೆ ರಾಜಸ್ವ ಇಲಾಖೆ ಕಣ್ಣು ಮುಚ್ಚಿ ಕುಳಿತಿದೆ ಎಂದು ಆರೋಪಿಸಿದ್ದಾರೆ.

ತಾಲೂಕಿನ ಮಂಡಗದ್ದೆ ಹೋಬಳಿಯ ನಾಯದಹಳ್ಳಿ ಗ್ರಾಮ ಪಂಚಾಯಿತಿ ಸರ್ವೆ ನಂಬರ್ 114 ರ ನಕ್ಷೆಯಲ್ಲಿ ಎನ್ ಡಿ ರಮೇಶ್ ಅವರು ಬ್ಲಾಕ್ ನಂಬರ್ 1 ರಲ್ಲಿ, 06 ಗುಂಟೆ, ಶ್ರೀನಾಥ್ ಬ್ಲಾಕ್ 02 ರಲ್ಲಿ 13 ಗುಂಟೆ ಸರ್ಕಾರಿ ಜಾಗ, ಯೋಗೀಶ್ ಎಂಬುವರು ಬ್ಲಾಕ್ 03 ರಲ್ಲಿರುವ 0.04 ಗುಂಟೆಯ ಸರ್ಕಾರಿ ಜಾಗವನ್ನ ಒತ್ತುವರಿ ಮಾಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.

ಈ ಕುರಿತು ತೀರ್ಥಹಳ್ಳಿ ತಹಶೀಲ್ದಾರ್ ಅವರು 2023 ರ ನ.6ರಂದು ಭೂದಾಖಲೆಗಳ ಸಹಾಯಕ ನಿರ್ದೇಶಕರಿಗೆ, ರಾಜಸ್ವ ನಿರೀಕ್ಷಕರಿಗೆ, ವಲಯ ಅರಣ್ಯ ಅಧಿಕಾರಿಗಳ ಕಚೇರಿಗೆ ಪತ್ರ ಬರೆದರೂ ಯಾವ ಕ್ರಮ ಕೈಗೊಂಡಿಲ್ಲ ಎಂದು ಗ್ರಾಪಂ ಸದಸ್ಯ ವಿನಾಯಕ ಗೌಡ ಆರೋಪಿಸಿದ್ದಾರೆ.

ನ.06 ರಂದು ಪತ್ರ ಬರೆದು 17 ರ ಒಳಗೆ ಒತ್ತುವರಿ ಸರ್ಕಾರಿ ಜಾಗವನ್ನ ತೆರವುಗೊಳಿಸಿ ಎಂದು ಹೇಳಿದರೂ ಯಾವ ಕ್ರಮ‌ರುಗಿಸಿಲ್ಲ. ಶೀಘ್ರದಲ್ಲಿಯೇ ಈ ಕುರಿತು ಕ್ರಮ ಕೈಗೊಳ್ಳದಿದ್ದರೆ ಕಾಂಗ್ರೆಸ್ ಪಕ್ಷದ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಎಚ್ಚರಿಸಿದ್ದಾರೆ. ಈ ಒತ್ತುವರಿ ವಿಚಾರದಲ್ಲಿ ಕಿಮ್ಮನೆ ರತ್ನಾಕರ್ ಅವರ ಕೈವಾಡವಿದೆ ಎಂದು ಅವರ ಪಕ್ಷದ ಗ್ರಾಪಂ ಸದಸ್ಯ ಗಂಭೀರ ಆರೋಪ ಮಾಡಿದ್ದಾರೆ.

ಇದನ್ನೂ ಓದಿ-https://suddilive.in/archives/9030

Related Articles

Leave a Reply

Your email address will not be published. Required fields are marked *

Back to top button