ಸ್ಥಳೀಯ ಸುದ್ದಿಗಳು

ಮನೆ ಮುಂದೆ ವಾಹನಗಳು ಜಖಂ

ಸುದ್ದಿಲೈವ್/ಶಿವಮೊಗ್ಗ

ಮನೆ ಮುಂದೆ ನಿಲ್ಲಿಸಿದ್ದ ಕಾರು, ಬೈಕ್‌ ಗಾಜನ್ನು ಕಿಡಿಗೇಡಿಗಳು ಒಡೆದಿರುವ ಬಗ್ಗೆ ದೊಡ್ಡಪೇಟೆ ಪೊಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮನೆಯೊಂದಕ್ಕೆ ನುಗ್ಗಿ ಪೀಠೋಪಕರಣಗಳನ್ನು ಮುರಿದಿರುವ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ.‌

ಕಳೆದ ರಾತ್ರಿ ಬೈಕುಗಳಲ್ಲಿ ಬಂದ ದುಷ್ಕರ್ಮಿಗಳು ಮನೆಯೊಂದರ ಮುಂದೆ ನಿಲ್ಲಿಸಿದ್ದ ಓಮ್ನಿ ಕಾರಿನ ಗಾಜು ಒಡೆದಿದ್ದಾರೆ. ಬೈಕ್‌ ಒಂದರ ಲೈಟ್‌ ಒಡೆದು ಹಾಕಿದ್ದಾರೆ. ಇನ್ನು ಮನೆಯೊಂದಕ್ಕೆ ನುಗ್ಗಿ ಪೀಠೋಪಕರಣಗಳಿಗೆ ಹಾನಿ ಮಾಡಿದ್ದಾರೆ. ಬೈಕ್ ನಲ್ಲಿ ಬಂದ ಯುವಕರ ದೃಶ್ಯಾವಳಿಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು ಇವರಿಂದಲೇ ಈ ಕೃತ್ಯ ನಡೆದಿದೆ ಎಂದು ಶಂಕಿಸಲಾಗಿದೆ.

ರಾತ್ರಿ ಬೈಕಿನಲ್ಲಿ ಬಂದ ಗ್ಯಾಂಗ್‌ ಲಾಂಗು, ಮಚ್ಚು ಹಿಡಿದು ಸುತ್ತಾಡಿದೆ. ಇದೆ ಗ್ಯಾಂಗ್‌ ದುಷ್ಕೃತ್ಯ ಎಸಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ದೊಡ್ಡಪೇಟೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

ಇದನ್ನೂ ಓದಿ-https://suddilive.in/archives/11263

Related Articles

Leave a Reply

Your email address will not be published. Required fields are marked *

Back to top button