ರಾಜಕೀಯ ಸುದ್ದಿಗಳು

ಮಾರಿ ಹಬ್ಬದಲ್ಲಿ ಕುರಿ ಕೊಚ್ಚಿದ ಹಾಗೆ ಕೊಚ್ಚಿ ಹಾಕಲು ನಮಗೂ ಬರ್ತಿತ್ತು-ಈಶ್ವರಪ್ಪ

ಸುದ್ದಿಲೈವ್/ಶಿವಮೊಗ್ಗ

ಸಿದ್ದರಾಮಯ್ಯರ ಮೈಯಲ್ಲಿ ಹಸಿರು ರಕ್ತ ಹರಿಯುತ್ತಿದೆಯೋ ಅಥವಾ ಹಿಂದೂ ರಕ್ತ ಹರಿತುತ್ತಿದೆಯೋ ಎಂಬುದೇ ಅನುಮಾನವೆಂದು  ಮಾಜಿ ಸಚಿವ ಈಶ್ವರಪ್ಪ ಗುಡುಗಿದರು.

ನಗರದ ಬಾಲರಾಜ್ ಅರಸ್ ರಸ್ತೆಯಲ್ಲಿ ಜಿಲ್ಲಾ ಬಿಜೆಪಿವತಿಯಿಂದ  ಕಾಂಗ್ರೆಸ್ ಹಿಂದೂ ವಿರೋಧಿ ಧೋರಣೆ ವಿರುದ್ಧ ಬೃಹತ್ ಪ್ತತಿಭಟನೆಯಲ್ಲಿ ಭಾಗವಹಿಸಿ  ಮಾತನಾಡಿದರು. ಅಖಂಡ ಭಾರತಕ್ಕಾಗಿ ನಮ್ಮ ಪೂರ್ವಜರು ರಕ್ತಹರಿಸಿದ್ದಾರೆ. ದೇಶದ್ರೋಹಿ ಕೆಲ ಮುಸ್ಲೀಮರು ಹಸಿರು ಬಣ್ಣ ಬಳಿದು ಅಖಂಡ ಭಾರತ ನಿರ್ಮಿಸಿದ್ದಾರೆ.  ಅದನ್ನ ಕಿತ್ತು ಹಾಕಿ ಕೇಸರಿ ಬಣ್ಣ ಬಳಿಯುವ ವರೆಗೂ  ಸಂಘರ್ಷ ನಡೆಯಲಿದೆ ಎಂದು ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ.

ತಿಲಕವಿಡದ, ದೇವಸ್ಥಾನಕ್ಕೆ ಹೋಗದ ಸಿದ್ದರಾಮಯ್ಯ ಇತ್ತೀಚೆಗೆ ತಿಲಕನೂ ಇಟ್ಟುಕೊಂಡಿದ್ದಾರೆ. ದೇವಸ್ಥಾನಕ್ಕೂ ಹೋಗಿ ಬರುತ್ತಿದ್ದಾರೆ.‌ಆದರೆ ಹೇಡಿಯಂತಾಗಿದ್ದಾರೆ. ಹೇಡಿಗಳಕೈಯಲ್ಲಿ  ಸಮಗ್ರ ಹಿಂದೂ ರಕ್ಷಣೆ ಅಸಾಧ್ಯವೆಂದರು.

ಹಮ್ ಪಾಂಚ್ ಹಮಾರ ಪಚ್ಚೀಸ್

ಏಕರೂಪ ನಾಗರೀಕ ನೀತಿ ಜಾರಿಯ ಬಗ್ಗೆ ಮುಸ್ಲೀಂರಿಗಿಂತ ಕಾಂಗ್ರೆಸ್ ಗೆ ಆಘಾತವಾಗಿದೆ. ಅತಿಹೆಚ್ಚು  ವಿರೋಧಿಸುತ್ತಿದೆ. ಕಾಂಗ್ರೆಸ್ ನವರು ಹಮ್ ಪಾಂಚ್ ಹಮಾರ ಪಚ್ಚೀಸ್ ಎಂಬ ಕಾನೂನು ಜಾರಿಗೊಳಿಸಿದ್ದರು. ಆದರೆ ಪ್ರಧಾನಿ  ನರೇಂದ್ರ ಮೋದಿ ಏಕರೂಪ ಕಾನೂನು ಜಾರಿ ಮೂಲಕ ಸಮಗ್ರ ದೇಶಕ್ಕೆ ಒಂದೇ ಕಾನೂನು ಜಾರಿಗೊಳಿಸಲು ಸಜ್ಜಾಗಿದ್ದಾರೆ.  ಮೋದಿ ಮುಂದೆ ಕಾಂಗ್ರೆಸ್ ಆಟ ನಡೆಯಲ್ಲವೆಂದರು.‌

ಈ ದೇಶ ಉಳಿಯಲು ನಾನು ನನ್ನ ಹೆಂಡತಿ  ಮಕ್ಕಳು ಚೆನ್ನಾಗಿದ್ದಾರೆ ಸಾಕು ಎಂಬ ಮನೋಭಾವವಿದೆ ಅದು ಸರಿಯಲ್ಲ.  ಹಿಂದೂಗಳ ಸಂಖ್ಯೆ ಹೆಚ್ಚಾದರೆ ಕಾಂಗ್ರೆಸ್ ಸಹಿಸಲ್ಲ.  ಮುಸ್ಲೀಂ ಸಂಖ್ಯೆ ಹೆಚ್ಚಾದರೆ ಖುಷಿಯಾಗುತ್ತೆ. ರಾಗಿಗುಡಗಡದಲ್ಲಿ 8 ಜನರ ಮೇಲೆ ದಾಳಿ ನಡೆಯಿತು. ಖಡ್ಗ‌ ಹಿಡಿದು ಕಲ್ಲು ಹಿಡಿದವರು ದಾಳಿ ನಡೆಸಿದವರನ್ನ ಬಿಟ್ಟು ಪೊಲೀಸರು ಯಾರೋ ಮನೆಗೆ ಕಲ್ಲು ಹೊಡೆದ ಎಂಬ ಕಾರಣಕ್ಕೆ ಹಿಂದೂ ಯುವಕನನ್ನ ಬಂಧಿಸಿದ್ದಾರೆ.

ಮಾರಿ ಹಬ್ಬದಲ್ಲಿ ಕುರಿ ಕೊಚ್ಚಿ ಹಾಕಿದ ಹಾಗೆ ಹಾಕುತ್ತಿದ್ದೆವು

ಅವತ್ತು ಶಾಂತಮ್ಮನಿಗೆ ಹೊಡೆದು ಹೋದ ಅನ್ಯಕೋಮಿನ ಯುವಕತು ಇವತ್ತು ಬರಲಿ ನೋಡೋಣ.  ಹರ್ಷನ  ಕೊಲೆಯಾದಾಗ ನಾವು ಮುಸ್ಲೀಂ ಏರಿಯಾಕ್ಕೆ ಹೋದರೆ ಮಾರಿಹಬ್ಬಕ್ಕೆ ಕುರಿ ಕೊಚ್ಚಿ ಹಾಕಿದ ಹಾಗೆ ಕೊಚ್ಚಿಹಾಕ ಬರಬಹುದಿತ್ತು. ಆದರೆ ಹಾಗೆ ಮಾಡಲಿಲ್ಲ. ಮುಸ್ಲೀಂ ಮತ್ತು ಹಿಂದೂಗಳು ಒಟ್ಟಾಗಿ ಬದಕಬೇಕೆಂಬ ಆಸೆ ಇದೆ. ಆದರೆ ಕೆಲವರು ಇದನ್ನ ಬಿಡ್ತಾಯಿಲ್ಲ ಎಂದರು.

ಕದ್ದು ಕಾವೇರಿ ನೀರು ಬಿಡಲಾಯಿತು. ಡಿಕೆಶಿ ಕಳ್ಳ ಎಂದೆ. ಸೆಟ್ಲುಮೆಂಟ್ ಮಾಡಿದ್ದೀನಿ ಎಂದು ಡಿಕೆಶಿ ಹೇಳುದ್ರು. ಡಿಕೆಶಿ ಡಿಸಿಎಂ ಆಗುವ ಮೊದಲು ನಾನು ಎಲ್ಲಾ ಅಧಿಕಾರವನ್ನ‌ ಅನುಭವಿಸಿದ್ದೇನೆ. ಕಾಂಗ್ರೆಸ್ ದೋಖಾದ ಗ್ಯಾರೆಂಟಿ ನೀಡಿ ಅಧಿಕಾರಕ್ಕೆ ಬಂದಿದೆ. ಆದರೆ ರಾಘವೇಂದ್ರರನ್ನ ಗೆಲ್ಲಿಸುವ ಮೂಲಕ ಪ್ರಧಾನಿ ಮೋದಿಯಿಂದ ಹಿಂದೂ ರಕ್ಷಣೆಯ ಸರ್ಕಾರ‌ ನೀಡುತ್ತೇವೆ. ಇದು ಬಿಜೆಪಿಯ ಗ್ಯಾರೆಂಟಿ ಎಂದರು.

ಯತೀಂದ್ರನ ಅಥವಾ ಡಿಕೆಸು ಕೊಲೆಯಾದರೆ ಹೊಟ್ಟೆ ಉರಿಯುತ್ತಿರಲಲ್ಲವೆ?

ಬೈದು ಹೋಗಲು ಈ ಪ್ರತಿಭಟನ ಸಭೆ ನಡೆಸುತ್ತಿಲ್ಲ. ಇನ್ನು ಮುಂದೆ ಹಿಂದೂ ಕಾರ್ಯಕರ್ತನನ್ನ‌ ಮುಟ್ಟಿದರೆ ಅದೇ ತಲ್ವಾರ್ ನಿಂದ ಉತ್ತರಕೊಡಲು ಬರುತ್ತೆ ಎಂದು ಶಪಥ ಪಡೆದು ಹೋಗೋಣ. ಮದ್ಯದ ಅಂಗಡಿಯ ವಿಚಾರದಲ್ಲಿ ಸಿಎಂ ಮತ್ತು ಡಿಸಿಎಂ ದ್ವಂಧ್ವ ನಿಲುವಿದೆ.

ಯತೀಂದ್ರನನ್ನ ಮುಸ್ಲೀಂ‌ಗೂಂಡಾಗಳು  ಕೊಲೆಯಾಗಿದ್ದಾರೆ, ಡಿಕೆಶಿ ಬ್ರದರ್ ಡಿಕೆಸು ಕೊಲೆಯಾದರೆ ನಿಮ್ಮ ಹೊಟ್ಟೆ ಉರಿಯುತ್ತಿರಲಿಲ್ಲವಾ? ಇವೆಲ್ಲದಕ್ಕೂ ಉತ್ತರ ಎಂಬಂತೆ  ಬರುವ‌ ಲೋಕ ಸಭಾ ಚುನಾವಣೆಯಲ್ಲಿ ಜನ ಕಾಂಗ್ರೆಸ್ ಗೆ  ಉತ್ತರ ನೀಡುವ ಮೂಲಕ ಹಿಂದೂ ರಕ್ಷಣೆಗೆ ನಿಲ್ಲಬೇಕೆಂದು ಹಿಂದೂಗಳಿಗೆ ಕರೆ ನೀಡಿದರು.

ಇದನ್ನೂ ಓದಿ-https://suddilive.in/archives/1099

Related Articles

Leave a Reply

Your email address will not be published. Required fields are marked *

Back to top button