ರಾಜ್ಯ ಸುದ್ದಿಗಳು

ಚುನಾವಣೆ ಪೂರ್ವ ಸಮೀಕ್ಷೆ ಪ್ರಕಟಿಸಿದ ಈದಿನ.ಕಾಂ

ಸುದ್ದಿಲೈವ್/ಶಿವಮೊಗ್ಗ

ಈ ದಿನ.ಕಾಂ ಎಂಬ ವೆಬ್ ಪೋರ್ಟಲ್ ಸಮೀಕ್ಷೆಯೊಂದು ಬಿಡುಗಡೆ ಮಾಡಿದೆ. ಚುನಾವಣೆ ಘೋಷಣೆಗೂ ಮುನ್ನ ನಡೆದ ಸಮೀಕ್ಷೆಯಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ 28 ರಲ್ಲಿ 17 ಸ್ಥಾನ ಪಡೆಯುವ ಸಾಧ್ಯತೆಯ ಬಗ್ಗೆ ವರದಿ ಮಾಡಿದೆ.

ಈ 17ಕ್ಷೇತದರದಲ್ಲಿ 6 ಕ್ಷೇತ್ರಗಳು ತೀವ್ರ ಪೈಪೋಟಿ ನೀಡಲಿದೆ ಎಂದು ಸಮೀಕ್ಷೆ ತಿಳಿಸಿದೆ. ಬಿಜೆಪಿ ಮತ್ತು ಮಿತ್ರಕೂಟ 11 ಕ್ಷೇತ್ರದಲ್ಲಿ ಗೆಲ್ಲಲಿದೆ ಎಂದು ತಿಳಿಸಿದೆ. ಫೆ.25 ರಿಂದ ಮಾ.05 ರ ವರೆಗೆ 56,678 ಜನರಿಂದ ಸ್ಯಾಂಪಲ್ಸ್ ಸಂಗ್ರಹಿಸಿದೆ.

ಬೆಲೆ ಏರಿಕೆ, ಉದ್ಯೋಗ ಅವಕಾಶ, ಭ್ರಷ್ಠಾಚಾರ, ಶ್ರೀಮಂತರು ಮತ್ತು ಬಡವರ ನಡುವಿನ ಅಂತರ, ಮೊದಲಾದ ಪ್ರಶ್ನೆಗಳಿಗೆ ಶೇಕಡವಾರು ಅಭಿಪ್ರಾಯ ಸಂಗ್ರಹಿಸಲಾಗಿದೆ. ಕಾಂಗ್ರೆಸ್ ನ ಗ್ಯಾರೆಂಟಿಗಳ ಪರ 56.14% ಜನ ಬೆಂಬಲಿಸಿದರೆ,

ಮೋದಿಯಿಂದ ಭಾರತ ಸ್ಥಾನ ಮತ್ತು‌ ಖ್ಯಾತಿ ಹೆಚ್ಚಿದೆ ಎಂದು ಶೇ.47.64% ಜನ ಒಪ್ಪಿಕೊಂಡಿದ್ದಾರೆ. 59.28% ರಷ್ಟು ಜನ ಮಹಿಳೆಯರು ಕಾಂಗ್ರೆಸ್ ಗ್ಯಾರೆಂಟಿ ಪರ ಮತಚಲಾಯಿಸಿದ್ದಾರೆ. ಅದರಂತೆ ಅಚ್ಚರಿ ಅಂದರೆ ಪ್ರಧಾನಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ ಎಂದು ಜನ ಮತ ಹಾಕಿರುವುದು ಸಮೀಕ್ಷೆ ತಿಳಿಸಿದೆ.

ಇದು ಚುನಾವಣೆ ಪೂರ್ವ ಸಮೀಕ್ಷೆಯಾಗಿದೆ. ಅಭ್ಯರ್ಥಿಗಳು ಘೋಷಣೆಯಾಗುವ ಮುನ್ನ ನಡೆಸಿದ ಸಮೀಕ್ಷೆ ಎಂದು ವೆಬ್ ಪೋರ್ಟಲ್ ಘೋಷಿಸಿದೆ.

ಇದನ್ನೂ ಓದಿ-https://suddilive.in/archives/11062

Related Articles

Leave a Reply

Your email address will not be published. Required fields are marked *

Back to top button