ರಾಜ್ಯ ಸುದ್ದಿಗಳು

ಒಗಟು ಒಗಟಾಗಿಯೇ ಮುಗಿದ ಆರ್ ಎಂ ಎಂ ಸುದ್ದಿಗೋಷ್ಠಿ

ಸುದ್ದಿಲೈವ್/ಶಿವಮೊಗ್ಗ

ಮಂಜುನಾಥ್ ಗೌಡರು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ನೇಮಗೊಂಡು 24 ಗಂಟೆ ಕಳೆದಿದೆ. 24 ಗಂಟೆಯಲ್ಲಿ ಗೌಡರು ಎರಡು ಬಾರಿ ಮಾಧ್ಯಮಗಳ ಮುಂದೆ ಮಾತನಾಡಿದ್ದಾರೆ. ಅಧ್ಯಕ್ಷರಾಗಿ ನೇಮಕಗೊಂಡ ಮೊದಲ ಪ್ರತಿಕ್ರಿಯೆಯಲ್ಲಿ ಉಬಯ ಕುಶಲೋಪರಿ ಮಾತನಾಡಿದ್ದರು.

ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಯಾವ ಹಗರಣದ ಬಗ್ಗೆಯಾಗಲಿ, ಬ್ಯಾಂಕ್ ಎಷ್ಟು ಲಾಭದಲ್ಲಿ ಇದೆ ಎಂಬ ಅಂಕಿ ಅಂಶದ ಬಗ್ಗೆ ಬೆಳಕು ಚೆಲ್ಲದೆ ಒಗಟಾಗಿಯೇ ಹಾಗೂ  ತುಂಬ ನಾಜೂಕಾಗಿಯೇ ಸುದ್ದಿಗೋಷ್ಠಿ ಮುಗಿಸಿದ್ದು ಮಾತ್ರ ಗಮನಸೆಳೆದಿದೆ.

ನಿನ್ನೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆಗೊಂಡ ನಂತರ ನನ್ನ ಶಕ್ತಿ ಅನಾವರಣ ಆಗಿದೆ. ನನ್ನನ್ನ ಸಹಕಾರಿ ಕ್ಷೇತ್ರದಿಂದ ಹೊರಗಿಡುವ ಯತ್ನ ವಿಫಲವಾಗಿದೆ ಎಂದು ಆರ್ ಎಂ.ಮಂಜುನಾಥ್ ಗೌಡರು ಹೇಳುವುದನ್ನ ಮಾತ್ರ ಬಿಡಲಿಲ್ಲ.

1000 ಕ್ಕಿತ ಹೆಚ್ಚು ಸಹಕಾರಿ ಕ್ಷೇತ್ರದ  ಅಭಿವೃದ್ಧಿಯ ಗುರಿ ಹೊಂದಲಾಗಿದೆ. 174 ಹಾಲು ಉತ್ಪಾದನೆ, ಪ್ರಾಥಮಿಕ ಸಹಕಾರಿ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಇನ್ನು 8-10 ದಿನಗಳಲ್ಲಿ ನೀಲಿ ನಕ್ಷೆಯನ್ನ‌ಬಿಡುಗಡೆಗೊಳಿಸುವೆ ಎಂದರು.

ಸೇವಾ ಕ್ಷೇತ್ರಗಳು  ಸಹಕಾರಿ ಕ್ಷೇತ್ರವನ್ನಾಗಿ ಬದಲಾಯಿಸಲಾಗುವುದು

ಎಲ್ಲಾ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಸ ಯೋಜನೆ ಬಂದಿದೆ ಪ್ರಾಥಮಿಕ ಸಹಕಾರ‌ ಕ್ಷೇತ್ರವನ್ನ ಸೇವಾ ಕ್ಷೇತ್ರಗಳನ್ನಾಗಿಸಲಾಗುತ್ತಿದೆ. ರೈತರಿಗೆ ಗೊಬ್ಬರ, ಬೆಳೆದ ಬೆಲೆ ಮಾರುಕಟ್ಟೆ ಸೌಲಭ್ಯವನ್ನ ನೀಡಲಾಗುತ್ತದೆ. ಮುಂದಿನ ಐದು ವರ್ಷದಲ್ಲಿ ಸಂಪೂರ್ಣವಾಗಿ ಸಹಕಾರಿ ಕ್ಷೇತ್ರ ವನ್ನಾಗಿ ಬದಲಾಯಿಸಲಾಗುವುದು. ಅಚ್ಚುಕಟ್ಟಾದ ಕಟ್ಟಡಗಳನ್ನ ಒದಗಿಸಲಾಗುತ್ತದೆ. ಇದನ್ನ ಸರ್ಕಾರದ ಸಹಕಾರ ವಿಲ್ಲದೆ ಒದಗಿಸಲಾಗುವುದು ಎಂದು ತಿಳಿಸಿದರು.

ಮುಂದಿನ ಐದು ವರ್ಷದಲ್ಲಿ 5000 ಕೋಟಿ ಬಂದಡವಾಳದ ಗುರಿ ಮುಟ್ಟಲಾಗುವುದು. 30 ವರ್ಷದ ಹಿಂದ 30 ಕೋಟಿ ಇತ್ತು. ಈಗ 2000 ಕೋಟಿ ವರ್ಕಿಂಗ್ ಕ್ಯಾಪಿಟಲ್ ಇದೆ. ಅಪೆಕ್ಸ್ ಬ್ಯಾಂಕ್ ಕೆಳಹಂತದ ಸಹಕಾರಿ ಸಂಸ್ಥೆಯಿಂದ ಅಪೆಕ್ಸ್ ಬ್ಯಾಂಕ್ ಫೆಡರೇಷನ್ ವರೆಗೆ ಹಣ ಒದಗಿಸಿದ್ದೇವೆ.  ಜಾತಿ ಆಧಾರಿತ ಮತ್ತು ಪಕ್ಷದ ಆಧಾರ ರಹಿತ ಬ್ಯಾಂಕ್ ರಚಿಸುವ ಗುರಿ ಹೊಂದಲಾಗಿದೆ ಎಂದರು.

ಆಗುಂಬೆ, ನಗರ ಹೋಬಳಿ, ಸಾಗರದ ಬಾರಂಗಿ ಹೋಬಳಿ ಹೊರತು ಪಡಿಸಿ ಜಿಲ್ಲೆಯಲ್ಲಿ ಸಂಪೂರ್ಣ ಬರವಿದೆ. ರೈತರಿಗೆ ಸಹಕಾರ ಸಂಘದಿಂದ ಏನು ಅನುಕೂಲ ಒದಗಿಸಬಹುದು ನೀಡಲು ಸಹಕಾರ 2.60 ಲಕ್ಷ ರೈತ ಸದಸ್ಯರಿದ್ದಾರೆ. ಸಂಪೂರ್ಣವಾಗಿ ಆರ್ಥಿಕ ನೆರವು ಮುಟ್ಟಿಸಲು ಐದು ವರ್ಷಬೇಕಾಗುತ್ತದೆ 1994-95 ರಲ್ಲಿ 11 ಸಾವಿರ ರೈತರಿದ್ದರು.

10 ರೂ. ನಲ್ಲಿ ಬ್ಯಾಂಕ್ ಖಾತೆ ಆರಂಭ

11 ವರ್ಷದ ಹಿಂದೆ 160 ಕೋಟಿ ಸಾಲ ನೀಡಲಾಗಿತ್ತು. ಅದು 70 ಕೋಟಿಗೆ ಕುಸಿದಿತ್ತು. ಅದನ್ನ ಬಹಳಬೇಗ ಚೇತರಿಕೆ ಮಾಡುವ ನಿಟ್ಟಿನಲ್ಲಿ ಯೋಚಿಸಲಾಗುತ್ತಿದೆ.  ಮಹಿಳೆಯರಿಗೆ ಆರ್ಥಿಕ ಸಹಾಯ ಮಾಡಲಾಗುವುದು. ಜನ ಭರವಸೆ ಇಟ್ಟಿದ್ದಾರೆ. ನಿಭಾಯಿಸಲಾಗುವುದು ಎಂದರು.

ಗೃಹಲಕ್ಷ್ಮಿ ಯೋಜನೆಯನ್ನ ನಮ್ಮ ಬ್ಯಾಂಕ್ ನಿಂದ ಹಂಚಲಾಗುತ್ತಿದೆ. ಡಿಸಿಸಿ ಬ್ಯಾಂಕ್ ನಲ್ಲಿ 10 ರೂ ಮೂಲಕ ಖಾತೆ ಆರಂಭಿಸಬಹುದು. ವಾಣಿಜ್ಯ ಬ್ಯಾಂಕ್ ಬಿಟ್ಟು ಇಲ್ಲಿಗೆ ಬನ್ನಿ ಎಂಬ ಉದ್ದೇಶವಲ್ಲ ಬದಲಿಗೆ ನಮ್ಮಲ್ಲಿ ಉತ್ತಮ ಸೇವೆ ನೀಡುವುದಾಗಿ‌ ಭರವಸೆ ನೀಡಲಾಗುತ್ತದೆ.  ಗ್ರಾಮೀಣ ಬ್ಯಾಂಕ್ ಗಳನ್ನ‌ಜಿಲ್ಲಾ ಬ್ಯಾಂಕ್ ಅಡಿ ತರಲು ಯೋಜಿಸಲಾಗುತ್ತಿದೆ

ಸಹಕಾರಿ ಚಳುವಳಿ ಜನರ ಚಳುವಳಿ

ಪೆಟ್ರೋಲ್ ಬಂಕ್, ಗ್ಯಾಸ್ ಏಜೆನ್ಸ್ ಯನ್ನ‌ ಹೋಬಳಿಯ ಭಾಗದಲ್ಲಿ ಉತ್ತೇಜನ ನೀಡಲು ಯೋಜಿಸಲಾಗುತ್ತಿದೆ. ಗೊಬ್ಬರ ಬೀಜ ವನ್ನ‌ಮಾತ್ರ ಒದಗಿಸದೆ ಸೂಪರ್ ಮಾರ್ಕೆಟ್ ರೀತಿಯಲ್ಲಿ ಸಹಕಾರಿ ಕ್ಷೇತ್ರವನ್ನ ಬದಗಿಸಲಾಗುತ್ತದೆ. ಗ್ರಾಮೀಣ ಮಟ್ಟದಲ್ಲಿ ಸಹಕಾರಿಕರಣ ಮಾಡಲಾಗುತ್ತದೆ. ಸಹಕಾರ ಚಳುವಳಿ ಸರ್ಕಾರಿ ಚಳುವಳಿ ಅಲ್ಲ ಅದು ಜನರ ಚಳುವಳಿಯಾಗಿದೆ.  ಹಾಗಾಗಿ ಗುರುತರ ಬದಲಾವಣೆ ಮಾಡಲಾಗುವುದು ಎಂದು ತಿಳಿಸಿದರು.

ಎರಡುವರೆ ವರ್ಷ ಸಹಕಾರಿ ಕ್ಷೇತ್ರದಿಂದ ದೂರವಿದ್ಧಾಗ ಚಕಾರ ಎತ್ತಿರಲಿಲ್ಲ. ದೊಡ್ಡವರೆಲ್ಲ ನನ್ನ‌ಬಗ್ಗೆ ಮಾತನಾಡಿದ್ದರು. ಸವಾಲು ಸ್ವೀಕರಿಸಿದ್ದೆ. ಟೀಕೆ ಮಾಡಲಿಲ್ಲ.ಆಶೀರ್ವಾದ ಎಂದು ತಿಳಿದಿರುವೆ. ನಾನು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನದಿಂದ  ಇಳಿದು ಹೋದಾಗ ಬ್ಯಾಂಕ್ 32 ಕೋಟಿ ಲಾಭದಲ್ಲಿತ್ತು. ಈಗಿನದ್ದು ಹೇಳಲ್ಲ. ಲಾಭದಲ್ಲಿ ಇದೆ. ಮದಿನ ದಿನಗಳಲ್ಲಿ ಅಂಕಿ ಅಂಶ ತಿಳಿಸುವೆ ಎಂದರು.

ತನಿಖಾ ವರದಿ ಕ್ಲೀನ್ ಚೀಟ್ ಆಗಿಯೇ ಬರಬಹುದು

ನೇಮಕಾತಿಯಲ್ಲಿ ಹಗರವಾಗಿದೆ. ಅಧ್ಯಕ್ಷ ನಾಗಿರುವ ಬಗ್ಗೆ ಯಾವ ಹೇಳಿಕೆ ನೀಡದೆ ಗೌಡರು ಮಾತು ಬದಲಿಸಿದ್ದು ಗಮನಾರ್ಹವಾಗಿತ್ತು. ನನ್ನ ಮೇಲೆ ಆರೋಪ ಬಂದಿತ್ತು. ಆ ಆರೋಪದ ತನಿಖೆಗೆ ಬಂದಾಗ ಸಹಕರಿಸಿದ್ದೆ. ಹಾಗೇ ನೇಮಕಾತಿಯಲ್ಲಿ ಹಗರಣವಾಗಿದೆ ಎಂಬ ಆರೋಪವಿದೆ. ಸಹಕಾರ ನೀಡೋಣ ಏನು ಇಲ್ಲವೆಂಬ ವರದಿಯೇ ಬರಬಹುದು ಎಂದು ಒಗಟಾಗಿ ನುಡಿದರು‌.

ಸುದ್ದಿಗೋಷ್ಠಿಯಲ್ಲಿ ನಿರ್ದೇಶಕರಾದ ಯೋಗೀಶ್, ಶ್ರೀಪಾದ ಹೆಗಡೆ, ದುಗ್ಗಪ್ಪಗೌಡರು, ಸಹಕಾರ ಇಲಾಖೆಯ ನಿಬಂಧಕರಾದ ವಾಸುದೇವ್ ಹಾಗೂ ಇತರರು  ಉಪಸ್ಥಿತರಿದ್ದರು.

ಇದನ್ನೂ ಓದಿ-https://suddilive.in/2023/09/29/ಅಲಂಕಾರ-ವಿಚಾರದಲ್ಲಿ-ಗೊಂದಲ/

Related Articles

Leave a Reply

Your email address will not be published. Required fields are marked *

Back to top button