ಸ್ಥಳೀಯ ಸುದ್ದಿಗಳು

ಕಾರ್ಯಕ್ರಮದ ಮುಖ್ಯಾತಿಥಿಯಾಗಿದ್ದ ಸಂಸದರೇ ಸ್ವಾಗತ ಭಾಷಣಕ್ಕೆ ನಿಮತಿದ್ದೇಕೆ?

ಸುದ್ದಿಲೈವ್/ಶಿವಮೊಗ್ಗ

ಸಂಸದ ರಾಘವೇಂದ್ರ ವೇದಿಕೆ ಮೇಲೆಯೇ ರೈಲ್ವೆ ಅಧಿಕಾರಿಯ ಮೇಲೆಯೇ ಗರಂ ಆಗಿದ್ದಾರೆ. ಇಂದು ಒಂದು ಸ್ಟೇಷನ್ ಒಂದು ಉತ್ಪನ್ನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸ್ವಾಗತ ಕೋರಿದ ಮಹಿಳಾ ಅಧಿಕಾರಿಯ ಮೇಲೆ ಗರಂ ಆಗಿದ್ದಾರೆ.

ವೇದಿಕೆ ಮೇಲೆ ರೈಲ್ವೆ ಇಲಾಖೆ ಮಹಿಳಾ ಅಧಿಕಾರಿ ಸಂಸದ ರಾಘವೇಂದ್ರರನ್ನ ಸ್ವಾಗತ ಕೋರಿದ್ದಾರೆ. ಆದರೆ ಅವರ ಜೊತೆ ಬಂದಿದ್ದ ಎಂಎಲ್ ಸಿ ರುದ್ರೇಗೌಡ, ಡಿಎಸ್ ಅರುಣ್ ಅವರುಗಳನ್ನ  ಸ್ವಾಗತ ಕೋರದ ಮಹಿಳೆಯ ವಿರುದ್ಧ ವೇದಿಕೆ ಮೇಲೆಯೇ ಗರಂ ಆಗಿದ್ದಾರೆ.

ಒಂದು ಸ್ಟೇಷನ್ ಒಂದು ಉತ್ಪನ್ನ ಯೋಜನೆಯ ಕುರಿತು

ಇದು ರೈಲ್ವೆ ಸಚಿವಾಲಯದ ಅಡಿಯಲ್ಲಿ ಭಾರತೀಯ ರೈಲ್ವೆಯ ಉಪಕ್ರಮವಾಗಿದೆ .ವೋಕಲ್ ಫಾರ್ ಲೋಕಲ್’ ಅನ್ನು ಉತ್ತೇಜಿಸುವ ದೃಷ್ಟಿಕೋನದಿಂದ ಇದನ್ನು ಪ್ರಾರಂಭಿಸಲಾಗಿದೆ .ಇದು ದೇಶೀಯ ಉತ್ಪನ್ನಗಳನ್ನು ದೇಶಾದ್ಯಂತ ಮಾರಾಟ ಮಾಡಲು ಸ್ಥಳೀಯರಿಗೆ ವಿಶಿಷ್ಟ ವಿನ್ಯಾಸದ ಮಾರಾಟ ಮಳಿಗೆಗಳನ್ನು ಒದಗಿಸುತ್ತದೆ .

ಈ ಯೋಜನೆಯನ್ನು ಅಹಮದಾಬಾದ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್ ವಿನ್ಯಾಸಗೊಳಿಸಿದೆ . ಇದು ಪ್ರತಿ ರೈಲು ನಿಲ್ದಾಣವನ್ನು ಪ್ರಚಾರ ಕೇಂದ್ರವಾಗಿ ನಿರ್ಮಿಸಲು ಮತ್ತು ಸ್ಥಳೀಯ ಮತ್ತು ಸ್ಥಳೀಯ ಉತ್ಪಾದನಾ ಉತ್ಪನ್ನಗಳನ್ನು ಪ್ರದರ್ಶಿಸುವ ಗುರಿಯನ್ನು ಹೊಂದಿದೆ.

ಯೋಜನೆಯಡಿಯಲ್ಲಿ, ಎಲ್ಲಾ ಅರ್ಹ ಅರ್ಜಿದಾರರಿಗೆ ಸರದಿ ಆಧಾರದ ಮೇಲೆ ಹಂಚಿಕೆ ಮಾಡಲಾಗುತ್ತದೆ. ಈ ಯೋಜನೆಯ ಪೈಲಟ್ ಅನ್ನು ಮಾರ್ಚ್ 25, 2022 ರಂದು ಪ್ರಾರಂಭಿಸಲಾಯಿತು.. ಇಂದು ಈ ಯೋಜನೆಗೆ  ಚಾಲನೆ ನೀಡಲಾಗಿದೆ. ಈ ಯೋಜನೆಯು ಸ್ಥಳೀಯ ಕುಶಲಕರ್ಮಿಗಳು, ಕುಂಬಾರರು, ನೇಕಾರರು, ಆದಿವಾಸಿಗಳು ಇತ್ಯಾದಿಗಳ ಕಲ್ಯಾಣವನ್ನು ಒದಗಿಸುತ್ತದೆ.

ಅರ್ಹ ಅರ್ಜಿದಾರರಿಗೆ ರೈಲ್ವೇಯಲ್ಲಿ 1,000 ರೂಪಾಯಿಗಳನ್ನು ಠೇವಣಿ ಮಾಡಿದ ಮೇಲೆ 15 ದಿನಗಳ ಅವಧಿಗೆ ತಾತ್ಕಾಲಿಕ ಸ್ಟಾಲ್ ಅಥವಾ ಕಿಯೋಸ್ಕ್ ಅನ್ನು ನೀಡಲಾಗುತ್ತದೆ. ಮಾರಾಟ ಮಳಿಗೆಗಳನ್ನು ರಾಷ್ಟ್ರವ್ಯಾಪಿ ನಿಲ್ದಾಣಗಳಲ್ಲಿ ಒದಗಿಸಲಾಗುತ್ತದೆ, ಟೆಂಡರ್ ಪ್ರಕ್ರಿಯೆಯ ಮೂಲಕ ಹಂಚಲಾಗುತ್ತದೆ. ವ ಲಯ ರೈಲ್ವೇ ನಿಲ್ದಾಣಗಳು, ಅರ್ಹ ಉತ್ಪನ್ನಗಳು ಮತ್ತು ಮಾರಾಟಗಾರರನ್ನು ಗುರುತಿಸುತ್ತದೆ.

ಸ್ಥಳೀಯ ಕುಶಲಕರ್ಮಿಗಳು, ಕುಶಲಕರ್ಮಿಗಳನ್ನ ಉತ್ತೇಜಿಸಲು ಭಾರತೀಯ ರೈಲ್ವೆಯ ಒಂದು ನಿಲ್ದಾಣ ಒಂದುಉತ್ಪನ್ನ ಯೋಜನೆಯನ್ನ ತರಲಾಗಿದೆ. 1 ಸಾವಿರ ನಿಲ್ದಾಣಗಳಲ್ಲಿ ಈ ಯೋಜನೆ ಕಾರ್ಯನಿರ್ವಹಿಸುತ್ತಿದೆ.‌ ಈ ಯೋಜನೆಯ ಲೋಕಾರ್ಪಣೆ ವೇಳೆ  ಸಂಸದರು ಗರಂ ಆಗಿ ತಾವೇ ಸ್ವಾಗತ ಕೋರಿದ್ದಾರೆ.

ಇದನ್ನೂ ಓದಿ-https://suddilive.in/archives/10544

Related Articles

Leave a Reply

Your email address will not be published. Required fields are marked *

Back to top button