ಸ್ಥಳೀಯ ಸುದ್ದಿಗಳು

ಕಂಪ್ಲೇಂಟ್ ವಾಪಾಸ್ ಪಡೆಯುವಂತೆ ವಿಕಲಚೇತನ ಮತ್ತು ಹಿರಿಯ ನಾಗರೀಕರಿಗೆ ಅವಾಜ್

ಸುದ್ದಿಲೈವ್/ಶಿವಮೊಗ್ಗ

ಪೊಲೀಸರಿಗೆ ನೀಡಿದ ದೂರನ್ನ‌ವಾಪಾಸ್ ಪಡೆಯುವಂತೆ ಆಗ್ರಹಿಸಿ ವಿಕಲಚೇತನ ಹಾಗೂ ಹಿರಿಯ ನಾಗರೀಕರೋರ್ವರ ಮೇಲೆ ಐವರು ಹಲ್ಲೆ ನಡೆಸಿರುವ ಘಟನೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಎಎ ವೃತ್ತದ ಬಳಿಯಿರುವ ಪಲ್ಲವಿ ಹೋಟೆಲ್ ಬಳಿ ವಾಹನದ ಮೇಲೆ ಕುಳಿತಿದ್ದ ವಿಕಲಚೇತನ ಹಾಗೂ ಹಿರಿಯ ನಾಗರೀಕರಾದ  ಸೈಯದ್ ಅನ್ವರ್ ಸಮೀಪ ಬಂದ   1) ರಿಜಾನ್ (ಇಚು) 2) ಇರ್ಫಾನ್ ( ಉದಾನ್) 3) ಸಲೀಂ ಪಕಾತಿ (ಅಹಮ್ಮದ್) 4) ರಾಜಿಕ್, 5) ಹಬೀಬುಲಾ. (ಅಬು) ಗುಂಪು ಕಟ್ಟಿಕೊಂಡು ಏಕಾ ಏಕಿ  ಜಗಳ ತೆಗೆದು ಅನ್ವರ್ ವಿಕಲಚೇತನವನ್ನ ಗೇಲಿ ಮಾಡಿ ಪೊಲೀಸರಿಗೆ ಮಾಹಿತಿ ಕೊಟ್ರೆ ಏನೂ ಆಗೊಲ್ಲ ಎಂದು ಧಮ್ಕಿ ಹಾಕಿದ್ದಾರೆ.

ಈ ದೃಶ್ಯ, ಅಲಿನ ಸಿಸಿ, ಕ್ಯಾಮೆರದಲ್ಲಿ, ದಾಖಲು ಆಗಿದೆ.  ಅಲಿಂದ ಕೆಆರ್ ಪುರಂ ರಸ್ತೆಯಲ್ಲಿ  ಅದೇ ದಿನ ಸಯ್ಯದ್ ಅವರು,  ವಾಹನದಲ್ಲಿ, ಹೋಗುತ್ತಿರುವಾಗ ಮಸೀದಿ ಡೌನ್ ರಸ್ತೆಯಲ್ಲಿ ಏಕಾ ಏಕಿ ಬಂದ ಸಿಕಾನ್ (ಜಬ್ಬಾರ್ ) ಮತ್ತು ಅರ್ಬಾಸ್ ಇವರು ತಡೆದು  ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿದ್ದಾರೆ.  ಸಾರ್ವಜನಿಕರ ಎದುರು ವಿಕಲಚೇತನವನ್ನ ಗೇಲಿ ಮಾಡಿ ಅವಮಾನವನ್ನು ಮಾಡಿರುವುದಾಗಿ ಅನ್ವರ್ ದೂರಿನಲ್ಲಿ ಉಲ್ಲೇಳಿಸಿದ್ದಾರೆ.

ಕೈಕಾಲು ಮರಿದು ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ. ಇದಕ್ಕೆಲಾ, ಕಾರಣ  ಈ ಐವರು  ವ್ಯಕ್ತಿಗಳ ಮೇಲೆ ಈ ಹಿಂದೆ ದೊಡ್ಡಪೇಟೆ ಠಾಣೆಯಲ್ಲಿ ಅನ್ವರ್ ದೂರು ಸಲ್ಲಿಸಿದ್ದರು ದೂರು ವಾಪಾಸ್‌ ಪಡೆಯುವಂತೆ ಒತ್ತಡ ಹಾಕಲು ದಮ್ಕಿ ಹಾಕಿದ್ದಾರೆ.  ಈ ಬಗ್ಗೆ ದೊಡ್ಡಪೇಟೆ ಪೊಲೀಸರಿಗೆ ಅನ್ವರ್ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ-https://suddilive.in/archives/2287

Related Articles

Leave a Reply

Your email address will not be published. Required fields are marked *

Back to top button