ಸ್ಥಳೀಯ ಸುದ್ದಿಗಳು
ತೀರ್ಥಹಳ್ಳಿಯ ತಲ್ಲೂರಂಗಡಿ ಬಳಿ ಹೊತ್ತಿ ಉರಿದ ಕಾರು

ಸುದ್ದಿಲೈವ್/ತೀರ್ಥಹಳ್ಳಿ

ಕಾರೊಂದು ನೋಡ ನೋಡುತ್ತಿದ್ದಂತೆ ಸಂಪೂರ್ಣ ಹೊತ್ತಿ ಉರಿದಿರುವ ಘಟನೆ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಸಮೀಪದ ತಲ್ಲೂರಂಗಡಿ ಸಮೀಪ ನೆಡೆದಿದೆ.
ಕಾರಿನ ಇಂಜಿನ್ ಅತಿಯಾಗಿ ಬಿಸಿಯಾಗಿದ್ದ ಕಾರಣ ಬೆಂಕಿ ಹತ್ತಿಕೊಂಡಿರಬಹುದು ಎನ್ನಲಾಗಿದೆ. ಆದರೆ ಬೆಂಕಿ ಸಂಪೂರ್ಣ ಕಾರನ್ನು ಹೊತ್ತಿಕೊಂಡು ಉರಿದಿದ್ದು ತೀರ್ಥಹಳ್ಳಿ – ಆಗುಂಬೆ ರಾಷ್ಟ್ರೀಯ ಹೆದ್ದಾರಿ ಮದ್ಯೆ ಈ ಘಟನೆ ಸಂಭವಿಸಿದೆ.
ಕಾರಿನಲ್ಲಿದ್ದವರು ಈ ಅವಘಡದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಉಡುಪಿಯಿಂದ ಕುಂದಾದ್ರಿ ಬೆಟ್ಟದ ಕಡೆ ತೆರಳುತ್ತಿದ್ದ ವೇಳೆ ಬ್ಯಾನೆಟ್ ನಿಂದ ಹೊಗೆ ಕಾಣಿಸಿಕೊಂಡಿದೆ. ಹೊಗೆ ಕಾಣಿಸಿಕೊಂಡ ಕಾರಣ ಕಾರಿನ ಚಾಲಕ ಬ್ಯಾನೆಟ್ ತೆಗೆಯಲು ಮುಂದಾಗಿದ್ದಾನೆ. ಬ್ಯಾನೆಟ್ ಒಪನ್ ಮಾಡುತ್ತಿದ್ದಂತೆ ಬೆಂಕಿ ಹೊತ್ತು ಉರಿದಿದೆ.
ಕಾರಿನ ಮಾಲಿಕ ಅಮೂಲ್ ಕೇಶ್ ಎಂದು ತಿಳಿದು ಬಂದಿದೆ. ಕಾರು ನಂಬರ್ ಕೆಎ 22 ಬಿಹೆಚ್ 4956 ಕ್ರಮ ಸಂಖ್ಯೆಯ ವಾಹನವಾಗಿದೆ.
ಇದನ್ನೂ ಓದಿ-https://suddilive.in/archives/2038
