ಸ್ಥಳೀಯ ಸುದ್ದಿಗಳು

ಈಶ್ವರಪ್ಪನವರ ಬಂಡಾಯಕ್ಕೆ ಕಾಂಗ್ರೆಸ್ ಲೇವಡಿ..!

ಸುದ್ದಿಲೈವ್/ಶಿವಮೊಗ್ಗ

ಈಶ್ವರಪ್ಪನವರು ಈ ಬಾರಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸುತ್ತಾರೆ ಎಂಬ ಹೇಳಿಕೆಗಳು ಅವರ ಪಡಸಾಲೆಯಿಂದಲೇ ಹೊರ ಬರುತ್ತಿರುವುದರಿಂದ ಕಾಂಗ್ರೆಸ್ ಅವರು ಯೂಟರ್ನ್ ಹೊಡೆಯಲಿದ್ದಾರೆ ಎಂದು ಲೇವಡಿ ಮಾಡಿದೆ.

ಪುತ್ರ ಕೆ. ಈ.ಕಾಂತೇಶ್ ರವರಿಗೆ ಹಾವೇರಿ ಲೋಕಸಭಾ ಚುನಾವಣೆಗೆ ಟಿಕೆಟ್ ದೊರಕುವ ಅನುಮಾನವಿದ್ದು ಇದರ ಸಂಬಂಧ, ಬಂಡಾಯ ಅಭ್ಯರ್ಥಿಯಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಹೇಳಿಕೆ ನೀಡುತ್ತಿದ್ದಾರೆ.  ಕಳೆದ ಬಾರಿಯ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಸಹ ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ಬಿಜೆಪಿ ಪಕ್ಷದವರು ಟಿಕೆಟ್ ನಿರಾಕರಿಸಿತ್ತು ಎಂದು ಉತ್ತರ ಬ್ಲಾಕ್ ಕಾಂಗ್ರೆಸ್ ನ ಅಧ್ಯಕ್ಷ ಶಿವಕುಮಾರ್ ಪ್ರಶ್ನಿಸಿದ್ದಾರೆ.

ಈ ಸಂಬಂಧ ರಾಜಕೀಯ ನಿವೃತ್ತಿ ಘೋಷಿಸಿ, ಘೋಷಣಾ ಪತ್ರವನ್ನು ಸಹ ನಿಮ್ಮ ಪಕ್ಷದ ಹೈಕಮಾಂಡಿಗೆ ಸಲ್ಲಿಸಿದ್ದೀರಿ ಆದರೆ ಈಗ ಬಂಡಾಯವಾಗಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ಹೇಳಿಕೆ ನೀಡಿರುತ್ತೀರಿ, ಕಳೆದ ವಾರ ವಷ್ಟೇ ಬಿಜೆಪಿ ವೀರಶೈವ ಸಮಾಜದಿಂದ ಶಿವಾಲಯದಲ್ಲಿ ಅತಿರುದ್ರ ಮಹಾ ಯಾಗದಲ್ಲಿ ಭಾಗಿಯಾಗಿ ಲೋಕಸಭಾ ಚುನಾವಣೆಗೆ ಬಿ ವೈ ರಾಘವೇಂದ್ರ ರವರಿಗೆ ಬೆಂಬಲವನ್ನು ಸೂಚಿಸಿದ್ದೀರಿ.

ರಾಘವೇಂದ್ರನ್ನ ಗೆಲ್ಲಿಸುವುದಾಗಿ ಹೇಳಿಕೆ ನೀಡಿರುವ ಬಾಯಲ್ಲೇ ಬಂಡಾಯದ‌ ಮಾತು ಯಾಕೆ ಎಂದು ಪ್ರಶ್ನಿಸಿರುವ ಶಿವಕುಮಾರ್,  ದ್ವಂದ್ವ ಹೇಳಿಕೆ ನೀಡುವ ಮುಖಾಂತರ ಮೆದುಳು ಮತ್ತು ನಾಲಿಗೆಗೆ ಸಂಬಂಧವಿಲ್ಲ ಎಂಬುದನ್ನ ಈಶ್ವರಪ್ಪನವರು ಈಗಾಗಲೆ ಸಾಬೀತು ಪಡಿಸಿದ್ದಾರೆ.  ಇದೇ ತಿಂಗಳು 18 ನೇ ತಾರೀಕು ಪ್ರಧಾನಿ ನರೇಂದ್ರ ಮೋದಿ ರವರು ಬಂದು ಹೋದ ನಂತರ ಮೋದಿ ಪ್ರಧಾನಿಯಾಗಲಿ ಎಂಬ ಕಾರಣಕ್ಕೆ ಕಣದಿಂದ ಹಿಂದೆ ಸರಿಯುತ್ತೇನೆ ಎಂದು ಯೂಟರ್ನ್ ಹೊಡೆಯಲ್ಲ ಎಂಬುದು ಏನು ಗ್ಯಾರೆಂಟಿ?

ನಿಮ್ಮ ನ್ಯೂಟನ್ ಪ್ರಕ್ರಿಯೆಯನ್ನ ಮುಂದುವರೆಸೊಲ್ಲ ಎಂಬುದು ಯಾವ ಖಾತರಿಯಿದೆ? ಮಾ 18ನೇ ತಾರೀಕು ಪತ್ರಿಕಾಗೋಷ್ಠಿ ಕರೆದು,  ಏನೇನು ಮಾತನಾಡಲಿದ್ದಾರೆ ಎಂಬುದನ್ನ  ಬ್ಲಾಕ್ ಕಾಂಗ್ರೆಸ್ ನ ಅಧ್ಯಕ್ಷರು ಊಹಿಸಿರುವ ಕೆಲ‌ಪ್ರಶ್ನೆಗಳು ಹೀಗಿವೆ.

1. ಪ್ರಧಾನಿ ನರೇಂದ್ರ ಮೋದಿ ಅವರು ಶಿವಮೊಗ್ಗ ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಈಶ್ವರಪ್ಪನವರ ಹೆಗಲ ಮೇಲೆ ಕೈ ಹಾಕುವ ಮುಖಾಂತರ ನಿಮ್ಮ ಅಗತ್ಯತೆ ಪಕ್ಷಕ್ಕಿದೆ. ಲೋಕಸಭಾ ಚುನಾವಣೆಯು ನಿಮ್ಮ ನೇತೃತ್ವದಲ್ಲಿ ನಡೆಸಬೇಕೆಂದಾಗ ನಿಮ್ಮ‌ಪ್ರತಿಕ್ರಿಯೆ ನ್ಯೂಟನ್ ನ ಪ್ರಕ್ರಿಯೆ ರೂಪದಲ್ಲಿರುತ್ತದೆ ಎಂದು ಲೇವಡಿ ಮಾಡಿದ್ದಾರೆ.

2 ಪ್ರಧಾನಿ ನರೇಂದ್ರ ಮೋದಿ ರವರಿಂದ ದೇಶದ ರಕ್ಷಣೆ ಯಾಗುತ್ತಿದೆ ಎಂಬ ನಂಬಿಕೆಯಿಂದ ನಾನು ಈ ಬಾರಿ ಚುನಾವಣಾ ಕಣದಿಂದ ಹಿಂದೆ ಸರಿದಿದ್ದೇನೆ. ಹಿಂದುಗಳ ಹಾಗೂ ಹಿಂದುತ್ವದ ಏಳಿಗೆಗಾಗಿ ರಕ್ಷಣೆಗಾಗಿ ನರೇಂದ್ರ ಮೋದಿ ರವರ ಅಗತ್ಯತೆ ಇದ್ದು ನಾನು ಚುನಾವಣಾ ಕಣದಿಂದ ಹಿಂದೆ ಸರಿದಿದ್ದೇನೆ ಎಂದು ಹೇಳಲ್ಲ ಎಂಬುದು ಏನು ಖಾತರಿ? ಎಂದು ಪ್ರಶ್ನಿಸಿದ್ದಾರೆ.

3.ನನ್ನ ಪುತ್ರ ಕೆ ಈ ಕಾಂತೇಶ್ ರವರಿಗೆ ವಿಜೇಂದ್ರ ರವರು ಮುಂದಿನ ದಿನಗಳಲ್ಲಿ ಉತ್ತಮ ಸ್ಥಾನಮಾನ ನೀಡುವ ಭರವಸೆ ನೀಡಿದ್ದು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿವೈ ರಾಘವೇಂದ್ರ ಅವರಿಗೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಹೇಳಲ್ಲ ಎಂಬುದು ಏನು ಗ್ಯಾರೆಂಟಿ?

ದೇಶದ ಏಳಿಗೆಗಾಗಿ, ಹಿಂದುತ್ವಕ್ಕಾಗಿ, ಹಿಂದೂ ದೇವಾಲಯಗಳ ಉಳಿವಿಗಾಗಿ ನಾನು ಚುನಾವಣಾ ಕಣದಿಂದ ಹಿಂದೆ ಸರಿದು ಬಿಜೆಪಿ ಪಕ್ಷಕ್ಕೆ ಬೆಂಬಲಿಸುತ್ತಿದ್ದೇನೆ. ಇದು ಕೆ ಎಸ್ ಈಶ್ವರಪ್ಪನವರ ಮುಂದಿನ ಹೇಳಿಕೆಗಳಾಗಿರುತ್ತವೆ ಎಂದು ಊಹಿಸಲಾಗಿದೆ.

ನೀವುಗಳು ಐದು ಬಾರಿ ಶಾಸಕರಾಗಿ, ರಾಜ್ಯ ಬಿಜೆಪಿ ಅಧ್ಯಕ್ಷರಾಗಿ, ವಿರೋಧ ಪಕ್ಷದ ನಾಯಕನಾಗಿ ಹಾಗೂ ರಾಜ್ಯದ ಉಪಮುಖ್ಯಮಂತ್ರಿಗಳಾಗಿ ಕಾರ್ಯ ನಿರ್ವಹಿಸಿದ್ದು ನೀವು ಚುನಾವಣಾ ಕಣದಿಂದ ಯಾವುದೇ ಕಾರಣಕ್ಕೂ ನಿಮಗೆ ದಮ್ಮು, ತಾಕತ್ತು ಹಾಗೂ ನಿಮ್ಮ ಹೇಳಿಕೆಗಳಿಗೆ ನೀವು ಬದ್ಧರಾಗಿದ್ದರೆ,

ನಿಮ್ಮ ಬಾಯಿ ನಿಮ್ಮ ಹಿಡಿತದಲ್ಲಿದ್ದರೆ ನಿಮ್ಮ ಹೇಳಿಕೆಗಳನ್ನು ನೆನಪಿಸಿಕೊಂಡು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಬೇಕು. ಈ ರೀತಿ ನಡೆದುಕೊಳ್ಳಲಿ ಎಂಬ ಹರಕು ಬಾಯಿ ಈಶ್ವರಪ್ಪನವರಿಗೆ, ಸ್ವಚ್ಛ ಬಾಯಿ ಕಾಂಗ್ರೆಸ್ ಪಕ್ಷದವರಿಂದ ಸವಾಲು ಹಾಕಿದ್ದಾರೆ ಎಂದು ಶಿವುಕುಮಾರ್ ಟಕ್ಕರ್ ನೀಡಿದ್ದಾರೆ.

ಇದನ್ನೂ ಓದಿ-https://suddilive.in/archives/10573

Related Articles

Leave a Reply

Your email address will not be published. Required fields are marked *

Back to top button