ಸ್ಥಳೀಯ ಸುದ್ದಿಗಳು

ಬಜಾರ್ ಬಾಯ್ಸ್ ನಿಂದ ಪ್ರಸಾದ ವಿನಿಯೋಗ

ಸುದ್ದಿಲೈವ್/ಶಿವಮೊಗ್ಗ

ಶ್ರೀ ಕೋಟೆ ಮಾರಿಕಾಂಬ ದೇವಿಯ ಜಾತ್ರೆಯ ಅಂಗವಾಗಿ ಇಂದು ಆರಂಭಗೊಂಡ ಉತ್ಸವಕ್ಕೆ ಶಿವಮೊಗ್ಗದಲ್ಲಿ ಭಕ್ತಸಾಗರವೇ ಹರಿದು ಬಂದಿದೆ.

ದೇವಿಯ ದರ್ಶನಕ್ಕಾಗಿ ಹರಿದು ಬಂದ ಭಕ್ತ ಸರದಿ ಸಾಲು ಬೆಳಿಗ್ಗೆ 10-20 ರ ವೇಳೆಯಲ್ಲಿ ಮೈಲಾರೇಶ್ವರ ದೇವಸ್ಥಾನದ ಬಳಿಯಿರುವ ಪೆಟ್ರೋಲ್ ಬಂಕ್ ಬಳಿ ತಲುಪಿತ್ತು. ಗಾಂಧಿ ಬಜಾರ್ ನಿಂದ ಪೆಟ್ರೋಲ್ ಪಂಪ್ ಬಳಿಯಿಂದ ಮಧ್ಯಾಹ್ನದ ವೇಳೆ ಸರದಿ ಸಾಲು ಸೈನ್ಸ್ ಮೈದಾನ ತಲುಪಿದೆ.

ಈ ಸಾಲು ಸಂಜೆಯ ವೇಳೆಗೆ ಇನ್ನೂ ಹೆಚ್ಚಾಗುವ ನಿರೀಕ್ಷೆ ಇದೆ. ಬಿರು ಬೇಸಿಗೆ ಪ್ರಯುಕ್ತ ಸರದಿ ಸಾಲಿನಲ್ಲಿ ಬರುವ ಭಕ್ತರಿಗೆ ನೀರು ಪಾಲನಕದ ವ್ಯವಸ್ಥೆ ಮಾಡಲಾಗಿದೆ.

ಉಚಿತ ಅನ್ನ ಸಂತರ್ಪಣೆ

ಶಿವಮೊಗ್ಗದ ಗಾಂಧಿ ಬಜಾರ್ ನಲ್ಲಿ ಬಜಾರ್‌ಬಾಯ್ಸ್ ಎಂದೇ ಖ್ಯಾತ ಪಡೆದ ಯುವಕರ ತಂಡ ಅನ್ನ ಸಂತರ್ಪಣೆಗೆ ಇಳಿದಿದೆ. 40 ಜನರ ಈ ಯುವಕರ ತಂಡ ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆಯ ವರೆಗೆ ಪ್ರಸಾದ ವಿನಿಯೋಗದ ವ್ಯವಸ್ಥೆಯನ್ನ ಪ್ರತಿವರ್ಷ ಮಾಡಿಕೊಂಡು ಬರುತ್ತಿದೆ.

ಅದರಂತೆಯೇ ಈ ವರ್ಷವೂ ಮಾಡಿಕೊಂಡು ಬಂದಿದ್ದಾರೆ. ಬಿಸಿಬೇಳೆ ಬಾತ್, ಮಂಚೂರಿ ಫಲಾವ್, ಫಲಾವ್ ಮೊದಲಾದ ರೈಸ್ ಐಟಂನ್ನ ಹಂಚಲಾಗುತ್ತಿದೆ.  ಹೀಗೆ ಪ್ರತಿ 50 ಕೆಜಿ ರೈಸ್ ಐಟಂ ಖಾಲಿಯಾಗುತ್ತಿದ್ದಂತೆ ವಿವಿಧ ಐಟಂಗಳನ್ನ ತಯಾರಿಸಿ ಭಕ್ತರಿಗೆ ಹಂಚುತ್ತಿದ್ದಾರೆ. ರೇಣುಕಮ್ಮ ದೇವಸ್ಥಾನದ ಎದುರು ಹಂಚುತ್ತಿದ್ದಾರೆ. ಇವರು ಫುಡಕೋರ್ಟ್ ನಲ್ಲಿ ಮುನೇಶ್ವರ ಫುಡ್ ಸರ್ವಿಸ್ ನ ರಮೇಶ್ ಅವರ ನೇತೃತ್ವದಲ್ಲಿ ಬಜಾರ್ ಬಾಯ್ಸ್ ಎಂಬ ಹೆಸರಿನಲ್ಲಿ ಪ್ರಸಾದ್ ಹಂಚಲಾಗುತ್ತಿದೆ.‌

ಇದನ್ನೂ ಓದಿ-https://suddilive.in/archives/10567

Related Articles

Leave a Reply

Your email address will not be published. Required fields are marked *

Back to top button