ತೂದೂರು ಪಿಡಿಒ ಪ್ರಕಾಶ್ ಇನ್ನಿಲ್ಲ

ಸುದ್ದಿಲೈವ್/ಶಿವಮೊಗ್ಗ

ತೀರ್ಥಹಳ್ಳಿ ತಾಲೂಕು ತೂದೂರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪಿಡಿಒ ಪ್ರಕಾಶ್ ನಿಧನರಾಗಿದ್ದಾರೆ.
ತಾಲೂಕಿನ ತೂದೂರು ಗ್ರಾಮ ಪಂಚಾಯಿತಿಯ ಪಿಡಿಒ ರಾಗಿ ಕಾರ್ಯನಿರ್ವಹಿಸುತ್ತಿದ್ದ ಪ್ರಕಾಶ್ ಅವರು ಹೃದಯ ಕಾಯಿಲೆಯಿಂದ ಬಳಲುತ್ತಿದ್ದು, ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.
ಅವರ ಮೃತ ದೇಹವು ತೀರ್ಥಹಳ್ಳಿಗೆ ಬರಲಿದ್ದು, ಮುಂದಿನ ಕಾರ್ಯದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಬೇಕಿದೆ.ಪ್ರಕಾಶ್ ಅವರು ಬೆಜ್ಜವಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಹತ್ತು ವರ್ಷಗಳ ಕಾಲ ಬಿಲ್ ಕಲೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ನಂತರ ಗ್ರೇಡ್ 2 ಸೆಕ್ರೆಟರಿ ಯಾಗಿ 12 ವರ್ಷಗಳ ಕಾಲ ಹಣಗೇರಿ ಕಟ್ಟೆಯಲ್ಲಿ ಕಾರ್ಯನಿರ್ವಹಿಸಿದರು. ನಂತರ ಪ್ರಮೋಷನ್ ಪಡೆದು ಗ್ರೇಡ್ 1 ಅಧಿಕಾರಿಯಾಗಿ ಹುಂಚದ ಕಟ್ಟೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು ನಂತರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ತೂದೂರು ಗ್ರಾಮ ಪಂಚಾಯಿತಿಗೆ ಬಂದಿದ್ದು. ಅಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು ಇನ್ನೇನು ಎರಡು ಮೂರು ವರ್ಷಗಳ ಕಾಲ ನಿವೃತ್ತಿ ಆಗುವವರಿದ್ದರು. ಆದರೆ ಕಾಯಿಲೆ ಅವರನ್ನು ಕಾಡುತ್ತಿತ್ತು ಇತ್ತೀಚಿಗೆ ಬೈಪಾಸ್ ಸರ್ಜರಿ ಆಗಿತ್ತು ಮಣಿಪಾಲ್ ನಲ್ಲಿ ನಿಯಮಿತವಾಗಿ ಚಿಕಿತ್ಸೆ ಪಡೆಯುತ್ತಿದ್ದರು ಇಂದು ನಿಧನ ಹೊಂದಿದ್ದಾರೆ.
ಇದನ್ನೂ ಓದಿ-https://suddilive.in/archives/3253
