ಸ್ಥಳೀಯ ಸುದ್ದಿಗಳು

ಸೂಡಾದಿಂದ 10 ಸಾವಿರ ನಿವೇಶನ ಹಂಚಿಕೆ-ಸುಂದರೇಶ್

ಸುದ್ದಿಲೈವ್/ಶಿವಮೊಗ್ಗ

ನಿನ್ಬೆ ಸೂಡ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಹೆಚ್ ಎಸ್ ಸುಂದರೇಶ್ ಇಂದು ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಐಎಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಅಭಿನಂದಿಸಿದ್ದಾರೆ.

14 ವರ್ಷದಿಂದ ನಿವೇಶನ ಹಂಚಿಕೆಯಾಗಿಲ್ಲ. ಸೂಡಾದಿಂದ ಭೂಮಿಯನ್ನ ಗುರುತಿಸಿ ಮಧ್ಯಮ ಮತ್ತು ಬಡವರಿಗೆ ಕೈಗೆಟಕುವ ರೀತಿಯಲ್ಲಿ ನಿವೇಶನ ಹಂಚಲು ಕ್ರಮ ವಹಿಸಲಾಗುವುದು 10 ಸಾವಿರ ನಿವೇಶನ ಹಂಚುವ ಗುರಿಯನ್ನ ಹೊಂದಲಾಗಿದೆ ಎಂದರು.

ಪ್ರಾಧಿಕಾರದಿಂದ ಅಪಾರ್ಟ್ ಮೆಂಟ್ ಗಳನ್ನ ಮಾಡಿ ಹಂಚಲು ಕ್ರಮಕೈಗೊಳ್ಳಲಾಗುವುದು ಸೋಮಿನಕೊಪ್ಪದಲ್ಲಿ ಒಂದು ಎಕರೆಗೂ ಹೆಚ್ಚು ನಿವೇಶನ ಇದೆ. ಊರುಗಡೂರಿನಲ್ಲಿ ನಿವೇಶನ ಹಂಚಲಾಗುವುದು. ವಾಣಿಜ್ಯ ನಿವೇಶನದಲ್ಲಿ ಮಾಲ್ ನಿರ್ಮಿಸಲಾಗುವುದು. ಊರಗಡೂರಿನಲ್ಲಿ 684 ನಿವೇಶನ ಹಂಚಲಾಗುವುದು. ಇದಕ್ಕೆ ಶಾಶ್ವತ ಪರಿಹಾರ ನೀಡಿ ಹಂಚಲಾಗುವುದು ಎಂದು ತಿಳಿಸಿದರು.

ಖಾಸಗಿ ಲೇಔಟ್ ನಲ್ಲಿ ಉತ್ತಮ ಸೌಕರ್ಯ ಒದಗಿಸಬೇಕು ಎಂಬ ಕಾನೂನು ಇದೆ. ಅದನ್ನ ಪರಿಪಾಲಿಸಲಾಗುವುದು. ಬಹಳ ಖಾಸಗಿ ನಿವೇಶನಗಳಾಗಲಿದೆ. 35 ಕೋಟಿಯಲ್ಲಿ ಬರುವ ಕೆರೆಗಳಿಗೆ ಅಭಿವೃದ್ಧಿ ಪಡಿಸಲಾಗುವುದು. ನಗರದಲ್ಲಿ ಸೂಡಾ ವ್ಯಾಪ್ತಿಯಲ್ಲಿ 108 ಕೆರೆಗಳು ಬರಲಿದ್ದು ಪುರಲೆ ಕೆರೆಯನ್ನ ಮೊದಲಿಗೆ ಅಭಿವೃದ್ಧಿಗಾಗಿ ಕೈಗೆತ್ತಿಕೊಳ್ಳಲಾಗುವುದು. ಒತ್ತುವರಿ ತೆರವುಗೊಳಿಸಲಾಗುವುದು ಎಂದು ಹೇಳಿದರು.

ಸೋಮಿನಕೊಪ್ಪದ ಭೋವಿಕೆರೆಗೆ ಅಭಿವೃದ್ಧಿ ಪಡಿಸುವುದಾಗಿ ಎತ್ತಿಡಲಾಹಿತ್ತು. ಆ ಬಗ್ಗೆ ಸ್ಥಳಪರಿಸೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ಪಾರ್ಕ್ ನ ಅಭಿವೃದ್ಧಿನೂ ಮಾಡಲಾಗುವುದು. ನಗರದ ಸರ್ಕಲ್ ಗಳನ್ನ ಗುರುತಿಸಿ ಸೌಂಧರೀಕರಣ ಮತ್ತು ಅಭಿವೃದ್ಧಿ ಮಾಡಲಾಗುವುದು.ನಾಗರೀಕ ಸಲಭ್ಯ ನಿವೇಶನಗಳನ್ನ ವಿವಿಧ ಸಂಘಕ್ಕೆ ಹಂಚಿಕೆ ಮಾಡಲಾಗುವುದು ಎಂದರು.

ಸೂಡಾ ಬಜೆಟ್ ನ್ನ ಬುಧವಾರ ಅಂದರೆ ಮಾ.7 ರಂದು ಮಂಡಿಸಲಾಗುವುದು. ವಾಜಪೇಯಿ ಲೇಔಟ್ ನಲ್ಲಿರುವ ಸಮಸ್ಯೆಯನ್ನ ಬಗೆಹರಿಸಲಾಗುವುದು ಎಂದರು.

ಇದನ್ನೂ ಓದಿ-https://suddilive.in/archives/9901

Related Articles

Leave a Reply

Your email address will not be published. Required fields are marked *

Back to top button