ಸಮಾಜ ಕಲ್ಯಾಣ ಅಧಿಕಾರಿ ‘ಲೋಕಾ’ ಬಲೆಗೆ

ಸುದ್ದಿಲೈವ್/ಶಿವಮೊಗ್ಗ

ಲೋಕಾ ಬಲೆಗೆ ಸಮಾಜ ಕಲ್ಯಾಣ ಅಧಿಕಾರಿ ಬಿದ್ದಿದ್ದು ಕಾಮಗಾರಿ ಬಿಲ್ ಬಿಡುಗಡೆಗೆ ಲಂಚದ ಹಣ ಪಡೆಯುವ ವೇಳೆ ಲೋಕಾಯುಕ್ತ ದಾಳಿ ನಡೆಸಿದೆ.
ಗೋಪಿನಾಥ್ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಯಾಗಿದ್ದಾರೆ. ಗೋಪಿನಾಥ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾಗಿದೆ. ಕಾಮಗಾರಿ ಬಿಲ್ ಬಿಡುಗಡೆ ಮಾಡಲು ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು.
ಗುತ್ತಿಗೆದಾರ ರವಿಕುಮಾರ್ ಅವರಿಂದ ಲಂಚ ಪಡೆಯುವ ವೇಳೆ ಬಲೆಗೆ ಬಿದ್ದಿದ್ದಾರೆ. 15 ಸಾವಿರ ಲಂಚ ಪಡೆಯುವ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಹಣದೊಂದಿಗೆ ಲೋಕಾಯುಕ್ತರು ವಶಕ್ತೆ ಪಡೆದಿದ್ದಾರೆ.
ಬುಕ್ಲಾಪುರ ಮತ್ತು ರಾಮೀನಕೊಪ್ಪದ ಸ್ಮಶಾನ ಅಭಿವೃದ್ಧಿಗೆ ಗುತ್ತಿಗೆದಾರ ಸಬ್ ಕಾಟ್ರಾಕ್ಟ್ ಹೊಂದಿದ್ದು, ಎಎಡೂ ಕಾಮಗಾರಿಗೆ 50 ಲಕ್ಷ ರೂ. ಹಣದಲ್ಲಿ ಅಭಿವೃದ್ಧಿಯಾಗಬೇಕಿತ್ತು. ಎರಡೂ ಸ್ಮಶಾನಕ್ಕೆ 17 ಲಕ್ಷ ರೂ ಬಿಡುಗಡೆಯಾಗಿದ್ದು 33 ಲಕ್ಷ ರೂ ಹಣ ಬಿಡುಗಡೆಗೆ ಸಮಾಜಕಲ್ಯಾಣ ಅಭಿವೃದ್ಧಿ ಅಧಿಕಾರಿಗಳು ಶೇ.1 ರಷ್ಟು ಲಂಚದ ಹಣ ಬೇಡಿಕೆ ಇಟ್ಟಿದ್ದರು.
ಇದನ್ನೂ ಓದಿ-https://suddilive.in/archives/1183
